ಬುದ್ಧ ದೇಶದ ಮೊದಲ ವೃತ್ತಿಪರ ಸಮಾಜಕಾರ್ಯ ಪ್ರವರ್ತಕ : ಸಾಹಿತಿ ಪ್ರೊ.ಬಂಜಗೆರೆ ಜಯಪ್ರಕಾಶ್ ಬಣ್ಣನೆ

 ಮಾನಸಗಂಗೋತ್ರಿಯ ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ದಲ್ಲಿ ಸಾಹಿತಿ ಪ್ರೊ.ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು. ಪ್ರೊ.ಆರ್.ಶಿವಪ್ಪ, ಪ್ರೊ.ಚಂದ್ರಮೌಳಿ, ಅಹಿಂದ ಜವರಪ್ಪ, ಶ್ರೀಕಾಂತ್ ಹಾಗೂ ಇತರರು ಇದ್ದರು.
ಮಾನಸಗಂಗೋತ್ರಿಯ ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ದಲ್ಲಿ ಸಾಹಿತಿ ಪ್ರೊ.ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು. ಪ್ರೊ.ಆರ್.ಶಿವಪ್ಪ, ಪ್ರೊ.ಚಂದ್ರಮೌಳಿ, ಅಹಿಂದ ಜವರಪ್ಪ, ಶ್ರೀಕಾಂತ್ ಹಾಗೂ ಇತರರು ಇದ್ದರು.
Published on
ಮೈಸೂರು: ಬುದ್ಧ ದೇಶದ ಮೊದಲ ವೃತ್ತಿಪರ ಸಮಾಜಕಾರ್ಯ ಪ್ರವರ್ತಕ, ಸಮಾಜಕಾರ್ಯಕ್ಕೆ ಆಧ್ಯಾತ್ಮಿಕ ಆಯಾಮವನ್ನು ಬುದ್ಧ ತಂದುಕೊಟ್ಟರು ಎಂದು ಸಾಹಿತಿ ಪ್ರೊ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ಬೋಧಿವೃಕ್ಷ ಅಭಿವೃದ್ಧಿ ಸಂಸ್ಥೆಯು ಅಂತಾರಾಷ್ಟ್ರೀಯ ಸಮಾಜಕಾರ್ಯ ದಿನಾಚರಣೆ ಪ್ರಯುಕ್ತ ಮಂಗಳವಾರ ಮಾನಸಗಂಗೋತ್ರಿಯ ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಪ್ರೊ.ಸಿ.ಪಾರ್ವತಮ್ಮ ನೆನಪಿನ ಉಪನ್ಯಾಸದಲ್ಲಿ ಮಾತನಾಡಿದರು ದ್ವೇಷಪೂರಿತವಾದ ಯುದ್ಧವಾಗಲಿ, ಚಳವಳಿಯಾಗಲಿ ಸಮಾಜವನ್ನು ಎಂದಿಗೂ ಒಗ್ಗೂಡಿಸುವುದಿಲ್ಲ. ಬುದ್ಧನ ಪ್ರಜ್ಞೆ, ಕರುಣೆ ಮತ್ತು ಮೈತ್ರಿ ಮಾತ್ರವೇ ಪ್ರಪಂಚವನ್ನು ಒಗ್ಗೂಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
‘ಮೋಕ್ಷ, ಅಧ್ಯಾತ್ಮ, ಜ್ಞಾನೋದಯದ ಸ್ವಾರ್ಥ ಸಾಧನೆಗೆ ಮಾತ್ರ ಬುದ್ಧ ಧರ್ಮ ಸೀಮಿತವಾದರೆ ಅದು ಕೂಡ ನಮಗೆ ಬೇಕಾಗಿಲ್ಲ. ದುಃಖ ನಿವಾರಿಸುವ ಧರ್ಮ ಬೇಕು’ ಎಂದು ಅಂಬೇಡ್ಕರ್ ಹೇಳಿದ್ದರು. ಬೌದ್ಧ ಧರ್ಮದ ನವಯಾನ, ಭೀಮಯಾನ ಪಂಥವು ಸಮಾಜಸೇವೆಯನ್ನೂ ಹೇಳುತ್ತದೆ. ಭಾರತವು ಬುದ್ಧ ತತ್ವವನ್ನು ಪಾಲಿಸಬೇಕು ಎಂದು ಹೇಳಿದರು.
ಮಾನವೀಯತೆ, ಕಾರುಣ್ಯವನ್ನು ಮನುಷ್ಯ ಸಮಾಜದ ಎದೆಯೊಳಗೆ ನೆಲೆಗೊಳಿಸಬೇಕು. ನೊಂದವರಿಗೆ ಕರುಣಾ ಪ್ರಜ್ಞೆ, ಸಹಾನುಭೂತಿ ಪ್ರಕಟಿಸಬೇಕು. ಆಗ, ಸಮಾಜದಲ್ಲಿ ಸಹಜವಾಗಿ ಸಂತೋಷದಾಯಕ ವಾತಾವರಣ ನೆಲೆಗೊಂಡು ನೆಮ್ಮದಿ ತರುತ್ತದೆ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಪ್ರೊ.ಆರ್.ಶಿವಪ್ಪ, ಪ್ರೊ.ಚಂದ್ರಮೌಳಿ, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net