ಮಿದುಳಿನ ಗೆಡ್ಡೆಗಳು ಮತ್ತು ಅಪಸ್ಮಾರ: ಅಡಗಿರುವ ಸಂಬಂಧವನ್ನು ಅರಿಯಿರಿ

ಮಿದುಳಿನ ಗೆಡ್ಡೆಗಳು ಮತ್ತು ಅಪಸ್ಮಾರ
ಮಿದುಳಿನ ಗೆಡ್ಡೆಗಳು ಮತ್ತು ಅಪಸ್ಮಾರ
Published on
ಕೈಕಾಲು ನಡಗುವಿಕೆ, ಪ್ರಜ್ಞೆ ತಪ್ಪುವಿಕೆ, ನಂತರ ಉಂಟಾಗುವ ಗೊಂದಲದಂತಹ ಅಪಸ್ಮಾರದ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ಪ್ರೀತಿಪಾತ್ರರೊಂದಿಗೆ, ಆತಂಕಕ್ಕೊಳಗಾದ ಕುಟುಂಬ ಸದಸ್ಯರು ವೈದ್ಯರ ಬಳಿ ಧಾವಿಸುವುದು, ನನ್ನ ದಿನನಿತ್ಯದ ಕ್ಲಿನಿಕಲ್ ಅಭ್ಯಾಸದಲ್ಲಿ"ಸಾಮಾನ್ಯ" ಎನ್ನಬಹುದಾದ ಸನ್ನಿವೇಶವಾಗಿದೆ. ನನ್ನ 22 ವರಷಗಳಿಗೂ ಹೆಚ್ಚಿನ ನ್ಯೂರೋಸರ್ಜಿಕಲ ಅನುಭವದಲ್ಲಿ ನನಗೆ ಮನನವಾಗಿರುವ ಒಂದು ವಿಷಯವೆಂದರೆ, ಅಪಸ್ಮಾರದ ಸೆಳೆತ ಎಂದಗೂ ಕೇವಲ ಒಂದೇ ಕಾರಣದಿಂದ ಉಂಟಾಗುವ ಸ್ಥಿತಿಯಲ್ಲ. ಅದು ನಮ್ಮ ಮಿದುಳು ಕಳುಹಿಸುವ ಎಚ್ಚರಿಕೆಯ ಸಂಕೇತವಾಗಿದೆ. ಇದಕ್ಕೆ ಕಾರಣಗಳೇನು ಎಂಬುದು ನಾವು ಯಾವಾಗಲೂ ಕೇಳಬೇಕಾದ ಪ್ರಶ್ನೆಯಾಗಿದೆ.
ಹೆಚ್ಚಿನ ಜನರು ಅಪಸ್ಮಾರದ ಸೆಳೆತಕ್ಕೆ ಎಪಲೆಪ್ಸಿಯೊಂದೇ ಕಾರಣ ಎಂದು ಊಹಿಸುತ್ತಾರೆ ಮತ್ತು ಅದು ತಾರ್ಕಿಕ ಆಲೋಚನೆಯೂ ಕೂಡ. ಆದರೆ ಕಡಿಮೆ ಜನರಿಗೆ ತಳಿದಿರುವ ವಿಷಯವೆಂದರೆ, ಮಿದುಳಿನ ಗೆಡ್ಡೆ (ನಿಧಾನವಾಗಿ ಬಳೆಯುವ, ಕ್ಯಾನ್ಸರ್ ಅಲ್ಲದ ಹಾನಿಕರವಲ್ಲದ ಗೆಡ್ಡೆ) ಯೂ ಸಹ, ಈ ಮುಂಚೆ ಎಪಿಲೆಪ್ಸಿಯ ಇತಿಹಾಸವಿರದ ಯುವಕರು ಮತ್ತು ವಯಸ್ಕರಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಅಪಸ್ಮಾರದ ಸಳೆತಗಳಿಗೆ ಕಾರಣವಾಗಿರಬಹುದು.
ಮಿದುಳಿನಲ್ಲಿ ಗೆಡ್ಡೆ ಬೆಳೆದಾಗ, ಅದು ಕೇವಲ ಮೆದುಳಿನ ಒಂದು ಭಾಗವನ್ನು ಮಾತ್ರ ಆಕ್ರಮಿಸುವುದಿಲ್ಲ, ಅದರ ಸುತ್ತಮುತ್ತಲಿನ ನರ ಅಂಗಾಶಗಳನ್ನು ಕೆರಳಿಸಿ, ನ್ಯೂರಾನ್‌ಗಳ ಸಾಮಾನ್ಯ ವಿದ್ಯುತ್ ಚಟುವಟಕೆಯನ್ನು ಅಸ್ತವಯಸ್ತಗೊಳಿಸುವುದಲ್ಲದೇ, ನಾವು ಅಪಸ್ಮಾರ ಸೆಳೆತ ಎಂದು ಗುರುತಿಸುವ ಅಸಹಜ, ಏಕಕಾಲಿಕ ವಿದ್ಯುತ್ ಸ್ಪೋಟವನ್ನೂ ಪ್ರಚೋದಿಸಬಹುದು. ಗೆಡ್ಡೆಯ ಸ್ಥಾನ ಅತ್ಯಂತ ಮಹತ್ವದ್ದು. ಮುಂಭಾಗದ ಹಾಲೆ (Frontal Lobe), ಟೆಂಪೋರಲ್ ಹಾಲೆ (Temporal Lobe), ಮತ್ತು ಪ್ಯಾರಿಯೆಟಲ್ ಹಾಲೆ (Parietal ಲೋಬ್) ಚಲನೆ, ಅರಿವ ಮತ್ತು ಸಂವೇದನೆಯ ಮೇಲೆ ಪ್ರಭವ ಬೀರುವ ಮೆದುಳಿನ ಭಾಗಗಳಾಗಿರುವಿದರಿಂದ, ಈ ಹಾಳೆಗಳಲ್ಲಿ ಗೆಡ್ಡೆ ಉಂಟಾದಾಗ, ಅಪಸ್ಮಾರ ಸೆಳೆತದ ಸಂಭವವೂ ಹೆಚ್ಚಿತ್ತದೆ. ವಾಸ್ತವವಾಗಿ, 40 ವರ್ಷ ಮೇಲ್ಪಟ್ಟ ವಯಸ್ಕರಲ್ಲ ಹೊಸದಾಗಿ ಕಾಣಿಸಿಕೊಳ್ಳುವ ಸೆಳೆತವ ಯಾವಾಗಲೂ, ಯಾವುದೇ ಅನುಮಾನವಿಲ್ಲದೆ, ಮಿದುಳಿನ ಇಮಜಿಂಗ್‌ಗೆ ಪ್ರೇರಣೆ ನೀಡಬೇಕು.
ಜಾಗತಕವಾಗಿ, ಪ್ರಾಥಮಿಕ ಮಿದುಳಿನ ಗೆಡ್ಡೆಗಳು ಎಲ್ಲ ಕ್ಯಾನ್ಸರ್‌ಗಳ ಸರಿಸುಮಾರು 2% ಮಾತ್ರ ಆಗಿರಬಹುದು, ಆದರೆ ಮಿದುಳು ಮಾನವ ದೇಹದ ಪ್ರತಿಯೊಂದು ಕ್ರಿಯೆಯ ನಿಯಂತ್ರಣಕ್ಕೆ ಕರಣವಾಗಿರುವುದರಿಂದ, ಅವುಗಳ ಪ್ರಭಾವ ಅಸಮಾನವಾಗಿ ದೊಡ್ಡದಾಗಿದೆ. ಮಿದುಳಿನ ಗೆಡ್ಡೆ ಹೊಂದಿರುವ 30 ರಿಂದ 50% ರೋಗಿಗಳು ತಮ್ಮ ಕಾಯಿಲೆಯ ಯಾವುದಾದರೊಂದು ಹಂತದಲ್ಲಿ ಸೆಳೆತ ಅನಭವಿಸುತ್ತಾರೆ ಎಂದು ಅಧ್ಯಯನಗಳು ತೋರಸುತ್ತವೆ. ಗಮನಾರ್ಹ ಸಂಖ್ಯೆಯ ರೋಗಿಗಳಲ್ಲಿ, ಸೆಳೆತವೇ ರೋಗ ಪತ್ತೆಗೆ ಕಾರಣವಾಗುವ ಮೊದಲ ಲಕ್ಷಣವಾಗಿದೆ. ಕಡಿಮೆ ಗ್ರೇಡ್ (low-grade) ಗ್ಲಿಯೋಮಾಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿದೆ, ಅಧ್ಯನಗಳ ಪ್ರಕಾರ ಹೇಳುವುದಾದರೆ, 80% ಕ್ಕಿಂತ ಹೆಚ್ಚಿನ ಸೆಳೆತದ ಪ್ರಕರಣಗಳಿಗೆ ಈ ತರಹದ ಗೆಡ್ಡೆಗಳೇ ಕರಣವಾಗಿರತ್ತವೆ.
ಈ ಸಂಬಂಧವನ್ನು ಕ್ಲಿನಿಕಲ್ ದ್ರಿಷ್ಟಿವೈಯಿಂದ ಜಟಿಲಗೊಳಿಸುವ ಅಂಶವೆಂದರ, ಗೆಡ್ಡೆ-ಸಂಬಂಧತ ಸೆಳೆತಗಳು ಯಾವಾಗಲೂ ನಾಟಕೀಯವಾಗಿ ಕಾಣಿಸುವುದಿಲ್ಲ. ಅವು ಸ್ವಲ್ಪ ಸಮಯದ ಗೊಂದಲ, ಅಸಮಾನ್ಯ ವಾಸನೆ ಅಥವ ರುಚಿ, ಡೆಜ ವು ಅನುಭವ, ಅಥವಾ ಕೈಕಾಲಿನ ಅನೈಚ್ಛಿಕ ಕಂಪನ ರೂಪದಲ್ಲಿ ಕಾಣಿಸಬಹುದು. ಈ ಸೂಕ್ಷ್ಮ ಲಕ್ಷಣಗಳನ್ನು ಆಗಾಗ್ಗೆ ಒತ್ತಡ, ಆಯಾಸ, ಅಥವಾ ಆತಂಕ ಎಂದು ತಳ್ಳಿಹಾಕಲಾಗುತ್ತದೆ - ಕೆಲವೊಮ್ಮ ನಿಜವಾದ ಕಾರಣ ಗೊತ್ತಾಗುವ ಮುನ್ನ ತಿಂಗಳುಗಳೇ ಕಳೆಯಬಹುದು.
ಹಾಗಾಗಿ ನ್ಯೂರೊಲೊಜಿ ವೈದ್ಯನಾಗಿ ನಾನು, ರೋಗಿಗಳು ಮತ್ತ ಅವರ ಕುಟುಂಬ ವರ್ಗದವರಲ್ಲಿ ಅನುಮೋದಿಸುವುದೇನೆಂದರೆ, "ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ. ಪದೇ ಪದ ಕಾಣಿಸಿಕೊಳ್ಳುವ ಅಸಹಜ ಎನಿಸುವ ದೈಹಿಕ ಲಕ್ಷಣಗು, ವಿವರಸಲಾಗದ ವ್ಯಕ್ತಿತ್ವ ಬದಲಾವಣೆ, ಬೆಳಿಗ್ಗೆ ಅಥವಾ ಮಲಗಿದಾಗ ತೀವ್ರಗೊಳ್ಳುವ ನಿರಂತರ ತಲೆನೋವು, ಬಂದು ಹೋಗುವ ಯಾವುದೇ ದೌರ್ಬಲ್ಯ ಅಥವ ಮರಗಟ್ಟುವಿಕೆ — ಇವು ಕಂಡರೆ ತಕ್ಷಣ ತಜ್ಞ ವೈದಯರನ್ನು ಭೇಟಿ ಮಾಡಿ. ಕಾಂಟ್ರಾಸ್ಟ್ ಎನ್‌ಹ್ಯಾನ್ಸ್ಡ ಎಂಆರ್‌ಐ ನಮ್ಮ ಅತ್ಯಂತ ಶಕ್ತಿಯುತ ರೋಗನಿರ್ಣಯ ಸಾಧನ, ಮತ್ತು ಅದು ಕ್ಲಿನಿಕಲ್ ಪರೀಕ್ಷೆ ಮಾತ್ರದಿಂದ ಗೋಚರವಾಗದ್ದನ್ನು ಬಹಿರಗಗೊಳಿಸಬಲ್ಲದು.
ಸುಸಜ್ಜಿತ ಆಸ್ಪತ್ರೆಯಲ್ಲಿ ಅನುಭವಿ ಶಸ್ತ್ರಚಿಕಿತ್ಸಕರು ಮಾಡುವ ಮೆದುಳಿನ ಗಡ್ಡೆಯ (Brain Tumor) ಶಸ್ತ್ರಚಿಕಿತ್ಸೆಯು ಶೇಕಡಾ 95 ಕ್ಕಿಂತ ಹೆಚ್ಚು ಯಶಸ್ಸಿನ ಪ್ರಮಾಣವನ್ನು ಹೊಂದಿದೆ ಮತ್ತು ಇದು ಸುರಕ್ಷಿತವಾಗಿದೆ.
ಅಪಸ್ಮಾರದ ಸೆಳೆತವನ್ನು ಜೀವಕ್ಕೆ ಅಂಟಿದ ಶಿಕ್ಷೆಯಂತೆ ಪರಿಗಣಿಸಬೇಕಾಗಿಲ್ಲ, ಆದರೆ ಅದರ ನಿವಾರಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಕರೆ ನೀಡುತ್ತದೆ - ಸಂಪೂರ್ಣ ಮತ್ತು ತಜ್ಞ ಪ್ರತಿಕ್ರಿಯೆಗೆ ಅರ್ಹವಾದ ಕರೆ. ನೀವು ಅಥವಾ ನಿಮ್ಮ ಪ್ರೀತಿಪಾತ್ರರು ವಿವರಿಸಲಾಗದ ಸಳೆತ ಅನುಭವಿಸುತ್ತಿದ್ದರೆ, ನಿರ್ಲಕ್ಷ್ಯ ಬೇಡ, ತಜ್ಞ ವೈದ್ಯರನ್ನು ಕೂಡಲೇ ಭೇಟಿ ಮಾಡಿ.
"

ಶಸ್ತ್ರಚಿಕತ್ಸೆಯ ದೃಷ್ಟಿಕೋನದಿಂದ, ಗೆಡ್ಡೆ ಮತ್ತು ಸೆಳೆತದ ನಡುವಿನ ಸಂಬಂಧ ನಮ್ಮ ಚಿಕಿತ್ಸಾ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತದೆ. ಸಾಧ್ಯವಾದ ಕಡೆ ಗಡ್ಡೆಯನ್ನು ತೆಗೆದುಹಾಕುವುದರಿಂದ ಸೆಳೆತದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ ಅಥವಾ ಸಂಪೂರ್ಣ ನಿಲ್ಲುತ್ತದೆ. ನಮ್ಮ ಕೇಂದ್ರದಲ್ಲಿ ನಾವು ಗೆಡ್ಡೆಯ ಸ್ಥಾನ, ಗಾತ್ರ ಮತ್ತು ರೋಗಿಯ ಸ್ಥಿತಿಗೆ ತಕ್ಕಂತೆ, ತೆರೆದ ಶಸ್ತ್ರಚಿಕಿತ್ಸೆ ಮತ್ತು ಮಿನಮಲ್ಲಿ ಇನ್ವೇಸಿವ್ ತಂತ್ರಗಳೆರಡನ್ನೂ ಬಳಸುತ್ತೇವೆ. ನಮ್ಮ ಗುರಿ ರೋಗ ಲಕ್ಷಣಗಳ ನಿಯಂತ್ರಣಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಮೂಲ ಕಾರಣವನ್ನು ಗುರುತಿಸಿ ಅದನ್ನು ಪರಿಹರಿಸುವುದು ನಮ್ಮ ಮೂಲ ಉದ್ದೇಶವಾಗಿದೆ.

— ಡಾ.ಮಕ್ಸೂದ್ ಅಹಮದ್ ಎ.ಆರ್., ಸೀನಿಯರ ಕನ್ಸಲ್ಟೆಂಟ – ನ್ಯೂರೋಸರ್ಜನ್, ಮಣಿಪಾಲ್ ಆಸ್ಪತ್ರೆ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net