ಸೂಕ್ತ ಚಿಕಿತ್ಸೆಯಿಂದ ಬ್ರೇನ್ ಟ್ಯೂಮರ್ ಗುಣ:ಡಾ.ವೈ.ಎಸ್.ಮಾಧವಿ

ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಮಿದುಳಿನ ಗಡ್ಡೆ ದಿನಾಚರಣೆಯಲ್ಲಿ ಡಾ.ವೈ.ಎಸ್.ಮಾಧವಿ, ಡಾ.ಅನಿಲ್ ಕುಮಾರ್, ಡಾ.ಸಂಗಮೇಶ್‌ಹಾಲಹಳ್ಳಿ, ಡಾ. ಶಾಂತಮಲ್ಲಪ್ಪ, ಡಾ.(ಕರ್ನಲ್)ಟಿ.ಎಸ್.ವಾಸನ್, ಡಾ.ಸಿ.ಪಿ.ಮಧು, ಡಾ.ಡಿ.ನಾರಾಯಣಪ್ಪ, ಡಾ.ಕೃಷ್ಣ ನಾರಾಯಾಣನ್, ಡಾ.ಅನಿಲ್ ಬಿಳಿಮಲೆ ಇದ್ದರು.
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಮಿದುಳಿನ ಗಡ್ಡೆ ದಿನಾಚರಣೆಯಲ್ಲಿ ಡಾ.ವೈ.ಎಸ್.ಮಾಧವಿ, ಡಾ.ಅನಿಲ್ ಕುಮಾರ್, ಡಾ.ಸಂಗಮೇಶ್‌ಹಾಲಹಳ್ಳಿ, ಡಾ. ಶಾಂತಮಲ್ಲಪ್ಪ, ಡಾ.(ಕರ್ನಲ್)ಟಿ.ಎಸ್.ವಾಸನ್, ಡಾ.ಸಿ.ಪಿ.ಮಧು, ಡಾ.ಡಿ.ನಾರಾಯಣಪ್ಪ, ಡಾ.ಕೃಷ್ಣ ನಾರಾಯಾಣನ್, ಡಾ.ಅನಿಲ್ ಬಿಳಿಮಲೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇಹದ ಸಮತೋಲನ ಕಳೆದುಕೊಳ್ಳುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡಲಿವೆ
  • ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಮಿದುಳಿನ ಗಡ್ಡೆ ಕಾಯಿಲೆಯನ್ನು ಗುಣಪಡಿಸಬಹುದು
ಮೈಸೂರು:ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಯಶಸ್ವಿಯಾಗಿ ಬ್ರೇನ್ ಟ್ಯೂಮರ್ ಗುಣಪಡಿಸಬಹುದು ಎಂದು ನಗರದ ಭಾರತ್ ಆಸ್ಪತ್ರೆ ಮತ್ತು ಆಂಕಾಲಾಜಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್.ಮಾಧವಿ ತಿಳಿಸಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಮಿದುಳಿನ ಗಡ್ಡೆ ದಿನಾಚರಣೆಯಲ್ಲಿ ಮಾತನಾಡಿದರು.
ಮಿದುಳು ಮತ್ತು ಬೆನ್ನುಹುರಿಯ ಗಡ್ಡೆಗಳ ಸವಾಲುಗಳನ್ನು ಎದುರಿಸುತ್ತಿರುವ ರೋಗಿಗಳ ಪರವಾಗಿ ಜರ್ಮನಿಯಲ್ಲಿ ಸ್ಥಳೀಯ ಪ್ರಯತ್ನವಾಗಿ ಈ ದಿನಾಚರಣೆ ಪ್ರಾರಂಭವಾಗಿ ಎಲ್ಲೆಮೀರಿ ಬೆಳೆದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಬ್ರೇನ್ ಟ್ಯೂಮರ್ ಎಂದರೆ ಮಿದುಳಿನಲ್ಲಿ ಉಂಟಾಗುವ ಅಸಹಜ ಜೀವಕೋಶಗಳ ಬೆಳವಣಿಗೆ ಅಥವಾ ಗಡ್ಡೆ, ಇದು ಕ್ಯಾನ್ಸರ್ ಅಲ್ಲದ (ಸಾಮಾನ್ಯ) ಅಥವಾ ಕ್ಯಾನ್ಸರ್ ರೂಪದಲ್ಲಿರಬಹುದು. ಈ ಕಾಯಿಲೆ ಲಕ್ಷಣಗಳೆಂದರೆ ನಿರಂತರ ಅಥವಾ ತೀವ್ರವಾದ ತಲೆನೋವು ಯಾವುದೇ ಕಾರಣವಿಲ್ಲದೆ ಆಗಾಗ್ಗೆ ವಾಕರಿಕೆ ಅಥವಾ ವಾಂತಿ, ಕಣ್ಣು ಮಂಜಾಗುವುದು, ದೃಷ್ಟಿದೋಷ, ಹಠಾತ್ ಅಪಸ್ಮಾರ ಅಥವಾ ಫಿಟ್ಸ್ ಬರುವುದು, ಮಾತನಾಡುವಲ್ಲಿ ತೊಂದರೆ ಅಥವಾ ಪದಗಳನ್ನು ಮರೆಯುವುದು, ದೇಹದ ಸಮತೋಲನ ಕಳೆದುಕೊಳ್ಳುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡಲಿವೆ. ತಕ್ಷಣವೇ ನರರೋಗ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಮಾತನಾಡಿ, ಈ ದಿನದ ಉದ್ದೇಶ ಬ್ರೇನ್ ಟ್ಯೂಮರ್ ಬಗ್ಗೆ ಅರಿವು ಮೂಡಿಸುವುದು, ರೋಗದ ಲಕ್ಷಣ ನಿರ್ಲಕ್ಷ್ಯ ಮಾಡದೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಮಿದುಳಿನ ಗಡ್ಡೆ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಹೇಳಿದರು.
ಜೆಎಸ್‌ಎಸ್ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನುರಿತ ವೈದ್ಯರುಗಳಿದ್ದು, ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು, ಚಿಕಿತ್ಸೆ ಬಳಿಕ ಸಹಜವಾಗಿ ಜೀವನ ನಡೆಸಬಹುದು ಎಂದು ತಿಳಿಸಿದರು.
ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ ಮಾತನಾಡಿ, ಈ ಕಾಯಿಲೆಯು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬರಬಹುದು. ರೋಗ ಲಕ್ಷಣಗಳು ಕಂಡುಬಂದ ತಕ್ಷಣವೇ ನರರೋಗ ತಜ್ಞರನ್ನು ಭೇಟಿಯಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದರು.
ನರ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.(ಕರ್ನಲ್) ಟಿ.ಎಸ್.ವಾಸನ್, ಸಹ ಪ್ರಾಧ್ಯಾಪಕ ಡಾ.ಎಂ.ಡಿ.ಕೃಷ್ಣನಾರಾಯಣನ್, ಸಹಾಯಕ ಪ್ರಾಧ್ಯಾಪಕ ಡಾ.ಸಂಗಮೇಶ ಹಾಲಹಳ್ಳಿ, ಸ್ಥಾನೀಯ ವೈದ್ಯಾಧಿಕಾರಿ ಡಾ.ಶಾಂತಮಲ್ಲಪ್ಪ, ಡಾ.ಅನಿಲ್‌ಕುಮಾರ್, ಡಾ.ಅನಿಲ್ ಬಿಳಿಮಲೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net