ಕೇಂದ್ರ, ರಾಜ್ಯ ಸರ್ಕಾರಗಳೆರಡು ರೈತರನ್ನು ಕಡೆಗಣಿಸಿವೆ

ಅಮೃತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು.ಹಳ್ಳಿಕೆರೆಹುಂಡಿ ಭಾಗ್ಯರಾಜ್, ಇಂಗಲಗುಪ್ಪೆ ಕೃಷ್ಣೇಗೌಡ, ಶ್ರೀ ಮಡಿವಾಳ ರಾಜಂೋಗೀಂದ್ರ ಸ್ವಾಮೀಜಿ, ಭೀರಪ್ಪ ದೇಶನೂರು, ಬಸನಗೌಡ ಪಾಟೀಲ, ನಾಸೀರ್ ಭಗವಾನ್ ಇನ್ನಿತರರಿದ್ದರು
ಅಮೃತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು.ಹಳ್ಳಿಕೆರೆಹುಂಡಿ ಭಾಗ್ಯರಾಜ್, ಇಂಗಲಗುಪ್ಪೆ ಕೃಷ್ಣೇಗೌಡ, ಶ್ರೀ ಮಡಿವಾಳ ರಾಜಂೋಗೀಂದ್ರ ಸ್ವಾಮೀಜಿ, ಭೀರಪ್ಪ ದೇಶನೂರು, ಬಸನಗೌಡ ಪಾಟೀಲ, ನಾಸೀರ್ ಭಗವಾನ್ ಇನ್ನಿತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ರೈತ ದಿನಾಚರಣೆ ಕಾರ್ಯಕ್ರಮ
  • ಮಧ್ಯವರ್ತಿಗಳ ಪರವಾಗಿ ಇರುವ ಸರ್ಕಾರಗಳು ರೈತರ ಮನವಿಗೆ ಸ್ಪಂದಿಸುತ್ತಿಲ್ಲ.
  • ದಪ್ಪ ಚರ್ಮದ ಸರ್ಕಾರಗಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ.
ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ರೈತರನ್ನು ಕಡೆಗಣಿಸಿವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಕಿಡಿಕಾರಿದರು.
ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಒಕ್ಕೂಟದ ವತಿಯಿಂದ ಜೆ.ಕೆ. ಮೈದಾನದಲ್ಲಿರುವ ಅಮೃತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ವಾತನಾಡಿದರು.
ಮಧ್ಯವರ್ತಿಗಳ ಪರವಾಗಿ ಇರುವ ಸರ್ಕಾರಗಳು ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ತಂದು ರೈತರ ಸವಾಧಿ ಮೇಲೆ ಆಡಳಿತ ಮಾಡುವ ಕೆಲಸವನ್ನು ಈ ಸರ್ಕಾರಗಳು ಮಾಡುತ್ತಿವೆ ಎಂದು ಕಿಡಿಕಾರಿದರು.
ಬಂಡವಾಳಶಾಹಿಗಳಾಗಲಿ, ಸಕ್ಕರೆ ಕಾರ್ಖಾನೆ ಮಾಲೀಕರಾಗಲಿ ಅಥವಾ ಉದ್ಯಮಿಗಳು ಸೇರಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೆ, ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದಪ್ಪ ಚರ್ಮದ ಈ ಸರ್ಕಾರಗಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಸರ್ಕಾರಗಳ ರೈತ ವಿರೋಧಿ ನೀತಿಗಳಿಂದ ಮುಂದಿನ ತಲೆವಾರಿಗೆ ರೈತವರ್ಗವನ್ನು ಹುಡುಕುವಂತಹ ಸ್ಥಿತಿ ನಿರ್ವಾಣವಾಗಲಿದೆ ಎಂದು ಎಚ್ಚರಿಸಿದರು.
ರೈತನ ದಿನವನ್ನು ಸರ್ಕಾರದ ವತಿಯಿಂದ ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ವಾಡಬೇಕು. ಎಂಎಸ್‌ಪಿ ಅಡಿಯಲ್ಲಿ ಬೆಂಬಲ ಬೆಲೆ ೋಷಿಸಬೇಕು. ಕೃಷಿ ಪರಿಷತ್ ರಚನೆ ಆಗಬೇಕು. ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಬೇಕು. ರೈತರಿಗೆ ಮೀಸಲಾತಿ ಕೊಡಬೇಕು  ಎಂದೂ ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಸ್ಮಾರ್ಟ್ ಮೀಟರ್ ಬಂದರೆ ಮೊಬೈಲ್‌ನಂತೆ ತೆರಿಗೆ ಹೊರೆ ಬೀಳುವ ಮೂಲಕ ಕೃಷಿಯನ್ನು ಕಸಿದುಕೊಳ್ಳುವ ಕೆಲಸ ವಾಡಲಾಗುತ್ತಿದೆ. ಸರ್ಕಾರವು ಕೃಷಿ ಪಂಪ್‌ಸೆಟ್ ಖಾಸಗೀಕರಣ ವಾಡಲು ಹೊರಟಿದೆ. ಇದನ್ನು ಕೈ ಬಿಡಬೇಕು. ಅಕ್ರಮ-ಸಕ್ರಮ ವಿದ್ಯುತ್ ಸಂಪರ್ಕ ಸೌಲಭ್ಯವನ್ನು ಮತ್ತೆ ಜಾರಿಗೆ ತರಬೇಕು. ವರ್ಷಪೂರ್ತಿ ಭತ್ತ, ರಾಗಿ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು. ಗ್ರಾಪಂ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಲಿ ಎಂದು ಆಗ್ರಹಿಸಿದರು.
ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಮಡಿವಾಳ ರಾಜಂೋಗೀಂದ್ರ ಸ್ವಾಮೀಜಿ ವಾತನಾಡಿ, ಎಲ್ಲರಿಗೂ ಎಲ್ಲ ಭಾಗ್ಯಗಳನ್ನು ನೀಡಿದ ಈ ಸರ್ಕಾರ ರೈತರಿಗೆ ಯಾವುದೇ ಭಾಗ್ಯ ನೀಡಿಲ್ಲ. ವರ್ಷಪೂರ್ತಿ ಕಷ್ಟಪಟ್ಟು ಬೆಳೆ ಬೆಳೆದು ವಾರಾಟಕ್ಕೆ ಹೋದಾಗ ಆತನಿಗೆ ಬೆಲೆ ದೊರೆಯುತ್ತಿಲ್ಲ. ಖರೀದಿ ಕೇಂದ್ರಗಳನ್ನು ತೆರೆದು ರೈತರ ಸಂಕಷ್ಟಕ್ಕೆ ಸರ್ಕಾರ ನೆರವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತಸಂಘ(ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ರಾಜಕಾರಣಿಗಳು ರೈತರ ಕಾರ್ಯಕ್ರಮಕ್ಕೆ ಹೋದರೆ, ರೈತರು ಸಾಲ ಮನ್ನಾ ವಾಡಿ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಿ ಎಂದು ಕೇಳುತ್ತಾರೆ. ಈ ಕಾರಣಕ್ಕಾಗಿ ರಾಜಕಾರಣಿಗಳು ರೈತರ ಯಾವುದೇ ಕಾರ್ಯಕ್ರಮಗಳಿಗೂ ಬರುವುದಿಲ್ಲ. ನಾವು ಇನ್ನು ಮುಂದೆ ಅವರನ್ನು ಕರೆಯುವುದೂ ಇಲ್ಲ ಎಂದು ಹೇಳಿದರು. 
ಮಹಾ ಒಕ್ಕೂಟದ ಪದಾಧಿಕಾರಿಗಳಾದ ಬೀರಪ್ಪ ದೇಶನೂರು, ಬಸನಗೌಡ ಪಾಟೀಲ, ನಾಸೀರ್ ಭಗವಾನ್, ಪಿ.ಎಂ.ರವಿಕುವಾರ್, ದಾದಾ ಮೆಹಬೂಬ ಸಾಬ ನವಲಗುಂದ, ಸುರೇಶ್ ಮೂಲಿಮನಿ, ಮಹಾದೇವಿ ಹೂವಿನಗೋಳ, ಈರಣ್ಣ ಅಂಗಡಿ, ಗಣೇಶ್ ಇಳಿಗೆರೆ, ಹೇವಾ ಕಾಜಗಾರ, ಕೆಆರ್‌ಎಸ್ ರಾಮೇಗೌಡ, ಪೈಲ್ವಾನ್ ಮುಕುಂದ, ದೇವರಾಜು, ಶೌಕತ್, ಬೆಂಗಳೂರು ಕೃಷ್ಣ, ಹನುಮಂತಪ್ಪ, ಕಮಲ್, ಶಿವಮೂರ್ತಿ, ರಘುನಾಥ್ ಇನ್ನಿತರರಿದ್ದರು
ಮೆರವಣಿಗೆ: ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ರೈತರು, ರೈತ ಮಹಿಳೆಂುರು ಮೆರವಣಿಗೆ ಮೂಲಕ ಆಗಮಿಸಿದರು. ವೀರಗಾಸೆ ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net