ಬಾಂಬೆ ಮಹೇಶ್ ಅವಿರೋಧ ಆಯ್ಕೆ

ಸಾಲಿಗ್ರಾಮ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಾಂಬೆ ಮಹೇಶ್ ಅವರನ್ನು ಸಾ. ರಾ. ನಂದೀಶ್ ಸನ್ಮಾನಿಸಿದರು. ಅಶೋಕ್, ಪಾಪಣ್ಣ, ಸತೀಶ್, ಕರುಣ್ ಇತರರು ಇದ್ದರು.
ಸಾಲಿಗ್ರಾಮ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಾಂಬೆ ಮಹೇಶ್ ಅವರನ್ನು ಸಾ. ರಾ. ನಂದೀಶ್ ಸನ್ಮಾನಿಸಿದರು. ಅಶೋಕ್, ಪಾಪಣ್ಣ, ಸತೀಶ್, ಕರುಣ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ
ಸಾಲಿಗ್ರಾಮ: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಾಂಬೆ ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
ಸತೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಸಂಘದ ಕಚೇರಿ ಆವರಣದಲ್ಲಿ ನಡೆದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಸತೀಶ್, ಎಸ್.ಬಿ. ಮಂಜುನಾಥ್, ಎಸ್.ಬಿ. ಅಶೋಕ್, ನಾಗೇಂದ್ರ (ಪಾಪಣ್ಣ) ಕರುಣಕುಮಾರ್, ಚಂದ್ರನಾಯಕ, ಎಸ್.ಜೆ.ಮಹೇಶ್, ಅನಂತ, ಜಯರಾಮೇಗೌಡ, ಅಶ್ವಿನಿ, ರುಕ್ಮಿಣಿ, ಸಣ್ಣದೇವಮ್ಮ, ಎಸ್.ಆರ್. ದಿನೇಶ್ ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಎಸ್.ಜೆ. ಬಾಂಬೆಮಹೇಶ್ ಮಾತ್ರ ನಾಮಪತ್ರ ಸಲ್ಲಿಸಿದರು. ಹಾಗಾಗಿ ಅವರು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಬಾಂಬೆ ಮಹೇಶ್ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚುನಾವಣಾ ಅಧಿಕಾರಿಯಾಗಿ ಮಧು ಕರ್ತವ್ಯ ನಿರ್ವಹಿಸಿದರು.
ಬಾಂಬೆಮಹೇಶ್ ಅವರನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಾ. ರಾ. ನಂದೀಶ್ ಅಭಿನಂದಿಸಿದರು. ಸಾಲಿಗ್ರಾಮ ಕೃಷಿ ಪತ್ತಿನ ಸಹಕಾರ ಸಂಘದಲ್ಲಿರುವ ಎಲ್ಲ ಷೇರುದಾರರಿಗೆ ಸಕಾಲದಲ್ಲಿ ಸಾಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ಮಾಜಿ ನಿರ್ದೇಶಕ ಎಸ್.ಬಿ. ಅಶೋಕ್,ನಿರ್ದೇಶಕರಾದ ಪಾಪಣ್ಣ, ಅನಂತ್, ಸತೀಶ್, ಕರುಣಾಕರ್, ಕುಮಾರ್, ಸುನೀಲ್, ನಟರಾಜ್ ರಾಮಣ್ಣ ಪುರುಷೋತ್ತಮ ಮಂಜು ಬಸವರಾಜು, ಹೇಮಂತ್, ನಾಗರಾಜ್, ಶಿವು ಜಗದೀಶ್ ಸುಬ್ಬೇಗೌಡ ಕೃಷ್ಣೇಗೌಡ ಕಾರ್ಯದರ್ಶಿ ಮಧು. ಧನಂಜಯ, ಲಕ್ಷ್ಮಣ, ಸುರೇಶ್, ಮಂಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net