ಅಪರಿಚಿತ ಮಹಿಳೆಯ ಶವ ಪತ್ತೆ

ಕ್ರೈಮ್
ಕ್ರೈಮ್
Published on

ಜನವರಿ 13 ರಂದು ಸುಮಾರು 35 ವರ್ಷದ ಅಪರಿಚಿತ ಮಹಿಳೆಯು ಮೃತಪಟ್ಟಿದ್ದು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜೆ 5:50 ಗಂಟೆಗೆ ಮೈಸೂರು ರೈಲ್ವೆ ನಿಲ್ದಾಣದ ಟಿಕೇಟ್ ಕೌಂಟರ್ನಲ್ಲಿ ನಿಶ್ಯಕ್ತಳಾಗಿ ಮಲಗಿದ್ದು, ಚಿಕಿತ್ಸೆ ಕುರಿತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜನವರಿ 15 ರಂದು ಬೆಳಗ್ಗೆ 10:30 ಗಂಟೆಗೆ ಮೃತಪಟ್ಟಿರುತ್ತಾರೆ. ಮೃತ ದೇಹವು ಮೈಸೂರಿನ ಕೆ.ಆರ್ ಆಸ್ಪತ್ರೆಯ ಶವಗಾರದಲ್ಲಿರುತ್ತದೆ.

ಚಹರೆ ವಯಸ್ಸು ಸುಮಾರು 35 ರಿಂದ 40 ವರ್ಷ, 4.6 ಅಡಿ ಎತ್ತರ, ಗೋದಿ ಮೈ ಬಣ್ಣ,(ಮೈ ಅಲ್ಲಲ್ಲಿ ಹಳದಿ ಬಣ್ಣ ಆಗಿರುತ್ತದೆ), ಸಾಧಾರಣ ಮೈಕಟ್ಟು, ಸುಮಾರು 2.1/2 ಉದ್ದದ ಕಪ್ಪು ಕೂದಲು , ದಪ್ಪ ಮೂಗು, ನೀಲಿ ಬಣ್ಣದ ವೆಲ್ವೆಟ್ ಹೂವಿನ ಚಿತ್ರವಿರುವ ನೈಟಿ, ಆಕಾಶ ನೀಲಿ ಬಣ್ಣದ ಸ್ವೆಟರ್ ಧರಿಸಿರಿತ್ತಾರೆ.

ಮೃತಳ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆಯ ದೂ ಸಂಖ್ಯೆ 0821-2516579 ಅನ್ನು ಸಂಪರ್ಕಿಸಬಹುದೆoದು ಮೈಸೂರು ರೈಲ್ವೆ ಪೊಲೀಸ್ ಠಾಣಾ ಸಬ್ಇನ್ಸ್ಪೆಕ್ಟರ್ ಆಫ್ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net