ಕುಂಬಳಗೊಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣು ಹುಲಿ ಮೃತದೇಹ ಪತ್ತೆ

ಹೆಣ್ಣು ಹುಲಿ ಕಳೇಬರವನ್ನು ಅರಣ್ಯಾಧಿಕಾರಿಗಳು ಮಂಗಳವಾರ ಪರಿಶೀಲಿಸಿದರು. ಪಿ.ಎ.ಸೀಮಾ, ಎಸ್.ಡಿ.ಮಧು, ಎಸ್.ಹನುಮಂತರಾಜು, ಅವಿನಾಶ್, ಆರ್.ರವೀಂದ್ರ, ಡಾ.ವಸೀಮ್ ಮಿರ್ಜಾ, ಡಾ.ಬಿ.ಬಿ.ಪ್ರಸನ್ನ ಇದ್ದರು.
ಹೆಣ್ಣು ಹುಲಿ ಕಳೇಬರವನ್ನು ಅರಣ್ಯಾಧಿಕಾರಿಗಳು ಮಂಗಳವಾರ ಪರಿಶೀಲಿಸಿದರು. ಪಿ.ಎ.ಸೀಮಾ, ಎಸ್.ಡಿ.ಮಧು, ಎಸ್.ಹನುಮಂತರಾಜು, ಅವಿನಾಶ್, ಆರ್.ರವೀಂದ್ರ, ಡಾ.ವಸೀಮ್ ಮಿರ್ಜಾ, ಡಾ.ಬಿ.ಬಿ.ಪ್ರಸನ್ನ ಇದ್ದರು.
Published on
ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ತಾಲೂಕಿನ ಬಳ್ಳೆ ವ್ಯಾಪ್ತಿಯ ಮಾಸ್ತಿಗುಡಿ ಗಸ್ತಿನ ಕುಂಬಳಗೊಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣು ಹುಲಿಯ ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿದೆ.
ಮಾಸ್ತಿಗುಡಿ ಗಸ್ತಿನಲ್ಲಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಹುಲಿಯ ಮೃತದೇಹ ಪತ್ತೆಯಾಗಿದ್ದು, ಅಂದಾಜು 7 ವರ್ಷ ಪ್ರಾಯದ ಹೆಣ್ಣು ಹುಲಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಅಧಿಕಾರಿಗಳು ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಡಿ ಮೃತಪಟ್ಟಿರುವುದು ಎಂಬುದಾಗಿ ಅಂದಾಜಿಸಿದ್ದಾರೆ. ಬಳಿಕ ಎನ್ ಟಿಸಿಎ ಮಾರ್ಗಸೂಚಿ ಅನ್ವಯ ಹಿರಿಯ ಪಶುವೈದ್ಯಾಧಿಕಾರಿಗಳಾದ ಡಾ.ವಸೀಮ್ ಮಿರ್ಜಾ, ಡಾ.ಬಿ.ಬಿ.ಪ್ರಸನ್ನ ಅವರು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಗಳ ಮಾದರಿ ಸಂಗ್ರಹಿಸಿ ಪ್ರಯೋಗಾಯಕ್ಕೆ ಕಳುಹಿಸಿದರು. ಹುಲಿಯ ಕಳೇಬರವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.
ಸ್ಥಳದಲ್ಲಿ ಡಿಸಿಎಫ್ ಪಿ.ಎ.ಸೀಮಾ, ಎಸಿಎಫ್ ಎಸ್.ಡಿ.ಮಧು, ಆರ್‌ಎಫ್‌ಒಗಳಾದ ಎಸ್.ಹನುಮಂತರಾಜು, ಎನ್‌ಟಿಸಿಎ ಪ್ರತಿನಿಧಿ ಆರ್.ಅವಿನಾಶ್, ಮುಖ್ಯ ವನ್ಯಜೀವಿ ಪರಿಪಾಲಕ ಆರ್.ರವೀಂದ್ರ, ಡಿಆರ್‌ಎಫ್‌ಒಗಳಾದ ಅಭಿಲಾಷ್, ಶಶಿಕುಮಾರ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net