ಬಿರ್ವಾಳ್-ಹೆಡಿಯಾಲ ರಸ್ತೆ ಕಾಮಗಾರಿ ಶೀಘ್ರ ಆರಂಭ

ಸರಗೂರು ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ಸಂಪ್ರೋಕ್ಷಣೆ ಶಿಖರ ಕಳಶ ಸ್ಥಾಪನೆ ಮತ್ತು ನಾಗದೇವತೆ ಪ್ರತಿಷ್ಠಾಪನೆ ಕುಂಬಾಭಿಷೇಕ ಪೂಜಾ ಮಹೋತ್ಸವದಲ್ಲಿ ಗೋಪುರ ವಿನ್ಯಾಸ ಸೇವಾರ್ಥದಾರನ್ನು ಸನ್ಮಾನಿಸಲಾಯಿತು. ಗೀರೀಶ್, ಶಿವಲಿಂಗಯ್ಯ, ಮಲ್ಲಿಕಾರ್ಜುನ ಇತರರು ಇದ್ದರು.
ಸರಗೂರು ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ಸಂಪ್ರೋಕ್ಷಣೆ ಶಿಖರ ಕಳಶ ಸ್ಥಾಪನೆ ಮತ್ತು ನಾಗದೇವತೆ ಪ್ರತಿಷ್ಠಾಪನೆ ಕುಂಬಾಭಿಷೇಕ ಪೂಜಾ ಮಹೋತ್ಸವದಲ್ಲಿ ಗೋಪುರ ವಿನ್ಯಾಸ ಸೇವಾರ್ಥದಾರನ್ನು ಸನ್ಮಾನಿಸಲಾಯಿತು. ಗೀರೀಶ್, ಶಿವಲಿಂಗಯ್ಯ, ಮಲ್ಲಿಕಾರ್ಜುನ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅನಿಲ್ ಚಿಕ್ಕಮಾದು ಭರವಸೆ
  • ಬಸವೇಶ್ವರ ಸ್ವಾಮಿ ದೇವಾಲಯ ಸಂಪ್ರೋಕ್ಷಣೆ ಕಲಶ ಸ್ಥಾಪನೆ ಮತ್ತು ನಾಗದೇವತೆ ಪ್ರತಿಷ್ಠಾಪನೆ ಕುಂಭಾಭಿಷೇಕ ಪೂಜೆ
ಸರಗೂರು : ಪ್ರಸ್ತುತ ದಿನಮಾನಗಳಲ್ಲಿ ಒಳ್ಳೆಯದರ ಜತೆ ಅರಿವಿಲ್ಲದಂತೆ ಕೆಟ್ಟದ್ದೂ ಬೆಳೆಯುತ್ತಿದೆ. ಹೀಗಾಗಿ ಸ್ನೇಹ ಸಂಬಂಧ ಬೆಳೆಸುವಾಗ ಯಾವುದೇ ಕಾರಣಕ್ಕೂ ಎಲ್ಲ ಸಮಾಜದವರು ಮೈ ಮರೆಯಬಾರದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಕಲ್ಲಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಲಾಪುರ ಗ್ರಾಮದಲ್ಲಿ ನಡೆದ ಬಸವೇಶ್ವರ ಸ್ವಾಮಿ ದೇವಾಲಯ ಸಂಪ್ರೋಕ್ಷಣೆ ಕಲಶ ಸ್ಥಾಪನೆ ಮತ್ತು ನಾಗದೇವತೆ ಪ್ರತಿಷ್ಠಾಪನೆ ಕುಂಭಾಭಿಷೇಕ ಪೂಜೆ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮದಲ್ಲಿ ಎಲ್ಲ ಸಮಾಜದಲ್ಲಿ ಅತಿ ಹೆಚ್ಚು ವಿದ್ಯಾವಂತರು ಇದ್ದಾರೆ. 30 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ಈ ಸಮುದಾಯ ಭವನ ನಿರ್ಮಾಣಕ್ಕೆ 24 ಲಕ್ಷ ರೂ. ನೀಡಲಾಗಿದೆ. ಶೀಘ್ರವೇ ಸಿಸಿ ರಸ್ತೆಯನ್ನೂ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪುರದಕಟ್ಟೆಯಿಂದ ಕುಂದೂರು ಗ್ರಾಮಕ್ಕೆ ರಸ್ತೆ ಮಾಡಲಾಗಿದೆ. ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ಶೇ.90 ಮುಗಿದಿದೆ. ಬಿರ್ವಾಳ್ ದಿಂದ ಹೆಡಿಯಾಲವರೆಗೆ ರಸ್ತೆ ಹದಗೆಟ್ಟಿದ್ದು 20 ದಿನಗಳಲ್ಲಿ ಭೂಮಿಪೂಜೆ ಸಲ್ಲಿಸಿ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದರು.
ಜೆಡಿಎಸ್ ಪಕ್ಷದ ಮುಖಂಡ ಜಯಪ್ರಕಾಶ್, ಬಿಜೆಪಿ ಪಕ್ಷದ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸುಬ್ಬಣ್ಣ, ಜಿಪಂ ಮಾಜಿ ಸದಸ್ಯರಾದ ಭಾಗ್ಯಲಕ್ಷ್ಮೀ, ಮುಖಂಡರಾದ ಚಿಕ್ಕವೀರನಾಯಕ, ಸಿ.ಕೆ.ಗಿರೀಶ್ ಮಾತನಾಡಿದರು.
ಗೋಪುರ ಸೇವಾರ್ಥದಾರ ನಾಗೇಂದ್ರ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಗೋವಿಂದನಾಯಕ, ಸದಸ್ಯರಾದ ಶಿವಕುಮಾರ್, ರತ್ನಮ್ಮ, ಗುಡಿ ಗೌಡ, ಮಲ್ಲಿಕಾರ್ಜುನ್, ಮರಿಸ್ವಾಮಿ ನಾಯಕ, ಮಹದೇವನಾಯಕ, ಶಿವರಾಜನಾಯಕ, ಶಿವಲಿಂಗಯ್ಯ, ಮರಿಸ್ವಾಮಿ ಗೌಡ, ಪರಮೇಶ್ವರಪ್ಪ, ಗೋವಿಂದಶಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಚಂದ್ರಶೇಖರಪ್ಪ, ಸಿ.ಎಂ.ಚಿನ್ನಪ್ಪ, ಸಿ.ಬಿ. ರತ್ನಾರಾಜು,ಸಿ ಜಿ ಕೆಂಡಗಣ್ಣಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net