ಮೈಸೂರು: ತಿ.ನರಸೀಪುರ ರಸ್ತೆಯ ಎಂಸಿ ಹುಂಡಿ ಗೇಟ್ ಬಳಿ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಮತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾರೆ.
ತಿ.ನರಸೀಪುರ ತಾಲೂಕು ಮುತ್ತತ್ತಿ ಗ್ರಾಮದ ನಿವಾಸಿ ಕೆಂಪಸಿದ್ದಯ್ಯ(47) ಮತರು. ಹಿಂಬದಿ ಕುಳಿತಿದ್ದ ಬೋರಯ್ಯ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಂಪಸಿದ್ದಯ್ಯ ಹಾಗೂ ಬೋರಯ್ಯ ಅವರು ಸಂಬಂಧಿಯೊಬ್ಬರು ಮತಪಟ್ಟಿದ್ದ ಕಾರಣ ಕುಪ್ಪೆಗಾಲ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.