ಸಂಸ್ಥೆಗಳ ವಿಭಾಗದಲ್ಲಿ ‘ಸ್ವಚ್ಛ ಸರ್ಕಾರಿ ಕಚೇರಿ’ ಪ್ರಶಸ್ತಿಯನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಚಾಮರಾಜೇಂದ್ರ ಮೃಗಾಲಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಡೆದುಕೊಂಡವು. ಸ್ವಚ್ಛ ಆಸ್ಪತ್ರೆ ವಿಭಾಗದಲ್ಲಿ ನಾರಾಯಣ ಹೃದಯಾಲಯ, ಅಪೊಲೊ ಬಿಜಿಎಸ್ ಹಾಗೂ ಜಯದೇವ ಆಸ್ಪತ್ರೆಗಳು ಗುರುತಿಸಲ್ಪಟ್ಟವು. ಹೋಟೆಲ್ ವಿಭಾಗದಲ್ಲಿ ದಕ್ಷಿಣ ಪಾಕ ಮತ್ತು ಸದನ್ ಸ್ಟಾರ್ ಹೋಟೆಲ್‌ಗಳು, ಶಾಲಾ ವಿಭಾಗದಲ್ಲಿ ಪಿ.ಎಂ.ಶ್ರೀ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವನಿತಾ ಸದನ, ಸಿ.ಕೆ.ಸಿ ಕಾನ್ವೆಂಟ್‌ಮತ್ತು ನಿರ್ಮಲಾ ಕಾನ್ವೆಂಟ್‌ಗಳು ಸ್ವಚ್ಛ ಪ್ರಶಸ್ತಿ ಮುಡಿಗೇರಿಸಿಕೊಂಡವು. ರೈಲ್ವೆ ನಿಲ್ದಾಣ ಮತ್ತು ಸುಬರ್ಬನ್ ಬಸ್ ನಿಲ್ದಾಣಗಳನ್ನು ಸ್ವಚ್ಛ ಸಾರಿಗೆ ಕೇಂದ್ರಗಳೆಂದು ಹಾಗೂ ರೈಲ್ವೆ ನಿಲ್ದಾಣದ ಆಟೋ ನಿಲ್ದಾಣ ಮತ್ತು ಗಾಯತ್ರಿಪುರಂನ ಜೈ ಕರ್ನಾಟಕ ಆಟೋ ನಿಲ್ದಾಣಗಳನ್ನು ಸ್ವಚ್ಛ ಆಟೋ ನಿಲ್ದಾಣಗಳೆಂದು ಗೌರವಿಸಲಾಯಿತು.