ಮೈಸೂರು ನಗರದ ಮಾನಸಗಂಗೋತ್ರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭೀಮಾ ಕೋರೆಗಾಂವ್’ ಯುದ್ಧ ವಿಜಯೋತ್ಸವ ಕಾರ್ಯಕ್ರಮವನ್ನು ನಟ ದುನಿಯಾ ವಿಜಯ್ ಉದ್ಘಾಟಿಸಿದರು. ಹರ್ಷವರ್ಧನ್, ಪುರುಷೋತ್ತಮ್, ಶಿವಶಂಕರ್, ಜಟ್ಟಿಹುಂಡಿ ಬಸವರಾಜ್ ಹಾಗೂ ಇತರರು ಇದ್ದರು.
ಮೈಸೂರು: ದಲಿತ ವಿದ್ಯಾರ್ಥಿ ಪರಿಷತ್, ದಲಿತ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಮಾನಸಗಂಗೊ ೀತ್ರಿಯಲ್ಲಿ ‘ಭೀಮಾ ಕೋರೆಗಾಂವ್’ ಯುದ್ಧ ವಿಜಯೋತ್ಸವ ಮೆರವಣಿಗೆ ನಡೆಯಿತು.
ಭೀಮಾ ಕೋರೆಗಾಂವ್ ವಿಜಯ ಸ್ಥಂಭದೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯ (ಯುಜಿ)ದಿಂದ ಮಾನಸಗಂ ಗೊತ್ರಿಯ ಅಂಬೇಡ್ಕರ್ ಪ್ರತಿಮೆವರೆಗೆ ಮೆರವಣಿ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಭೀಮಾ ಕೋರೆಗಾಂವ್ ವಿಜಯೋತ್ಸವ ಕೇವಲ ಒಂದು ದಿನದ ಆಚರಣೆ ಮಾತ್ರ ಸೀಮಿತವಾಗಬಾರದು. ಆ ಸೈನಿಕರ ಸ್ವಾಭಿಮಾ ನವನ್ನು ನಾವು ಸಹ ಅಳವಡಿಸಿಕೊಳ್ಳಬೇಕು. ನಮ್ಮ ಸ್ವಾಭಿಮಾನಕ್ಕೆ ಮುನ್ನುಡಿ ಬರೆದ ಮಹಾ ಸೈನಿಕರನ್ನು ನಾವು ಇಂದು ಸ್ಮರಿಸುತ್ತಿದ್ದೇವೆ ಎಂದು ಹೇಳಿದರು.
ಭೀಮಾ ಕೋರೆಗಾಂವ್ ಯುದ್ಧದಲ್ಲಿ 21 ವೀರಯೋಧರು ಮಡಿದರು. ಏತಕ್ಕಾಗಿ ಅವರು ಹೋರಾಟ ಮಾಡಿ ನಮ್ಮಲ್ಲಿ ಛಲ ಬಿತ್ತಲು ಪ್ರಯತ್ನಿಸಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಡಿದ ಈ ಯೋಧರು ಹಾಗೂ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಆಶಯದಂತೆ ನಾವು ಬದುಕು ನಡೆಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್, ಮಾಜಿ ಶಾಸಕ ಹರ್ಷವರ್ಧನ್, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಶಂಕರ್, ಮಾಜಿ ಸದಸ್ಯ ಜಟ್ಟಿಹುಂಡಿ ಬಸವರಾಜ್, ಜಾನಪದ ಕಲಾವಿದ ರಮೇಶ್ ತಾಯೂರು ಹಾಗೂ ಇತರರು ಇದ್ದರು.