ಬಿಜಿಎಸ್ ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಹೆಲ್ತ್‌ಸೈನ್ಸಸ್‌ನ ಪದವಿ ಪ್ರದಾನ ಸಮಾರಂಭ

ಹೆಬ್ಬಾಳ್‌ನ ಬಿಜಿಎಸ್ ಸಾಂಸ್ಕೃತಿಕ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕುವೆಂಪುನಗರದ ಬಿಜಿಎಸ್ ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಹೆಲ್ತ್‌ಸೈನ್ಸಸ್‌ನ ಪದವಿ ಪ್ರದಾನ ಸಮಾರಂಭವನ್ನು ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು.  ಪ್ರೊ.ಎಂ. ಪುಷ್ಪಾವತಿ, ಭಾರತೀಶ್ ರೆಡ್ಡಿ, ಡಾ.ಅಮನ್ ನಾಯಕ್, ಡಾ.ಜೆ. ಹರಿಪ್ರಸಾದ್ ಹಾಗೂ ಇತರರು ಇದ್ದರು.
ಹೆಬ್ಬಾಳ್‌ನ ಬಿಜಿಎಸ್ ಸಾಂಸ್ಕೃತಿಕ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕುವೆಂಪುನಗರದ ಬಿಜಿಎಸ್ ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಹೆಲ್ತ್‌ಸೈನ್ಸಸ್‌ನ ಪದವಿ ಪ್ರದಾನ ಸಮಾರಂಭವನ್ನು ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು. ಪ್ರೊ.ಎಂ. ಪುಷ್ಪಾವತಿ, ಭಾರತೀಶ್ ರೆಡ್ಡಿ, ಡಾ.ಅಮನ್ ನಾಯಕ್, ಡಾ.ಜೆ. ಹರಿಪ್ರಸಾದ್ ಹಾಗೂ ಇತರರು ಇದ್ದರು.
Published on
ಮೈಸೂರು: ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ನರ್ಸ್‌ಗಳು ಸ್ಥಳೀಯ ಭಾಷೆಗಳನ್ನು ಕಲಿಯಬೇಕು ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ. ಪುಷ್ಪಾವತಿ ಸಲಹೆ ನೀಡಿದರು.
ಹೆಬ್ಬಾಳ್‌ನ ಬಿಜಿಎಸ್ ಸಾಂಸ್ಕೃತಿಕ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕುವೆಂಪುನಗರದ ಬಿಜಿಎಸ್ ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಹೆಲ್ತ್‌ಸೈನ್ಸಸ್‌ನ ಪದವಿ ಪ್ರದಾನ ಹಾಗೂ ದೀಪ ಬೆಳಗುವ ಸಮಾರಂಭದಲ್ಲಿ ಮಾತನಾಡಿ, ಸ್ಥಳೀಯ ಭಾಷೆ ಕಲಿಯದೆ ಹೋದರೆ ರೋಗಿಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸ್ಥಳೀಯ ಭಾಷೆ ಕಲಿಯಲು ಆಸಕ್ತಿ ತೋರಬೇಕು ಎಂದರು.
ಹೆಣ್ಣು ಮಕ್ಕಳು ನರ್ಸಿಂಗ್ ಕೆಲಸಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಇದಕ್ಕೆ ಕಾರಣ ಅವರಲ್ಲಿರುವ ಆಸಕ್ತಿ, ಸಮರ್ಪಣಾ ಮನೋಭಾವ ಕಾರಣ. ನರ್ಸಿಂಗ್ ವಿದ್ಯಾರ್ಥಿಗಳು ಮೊಬೈಲ್ ರೀಲ್ಸ್ ಮುಂತಾದ ವಿಚಾರಗಳ ಕಡೆಗೆ ಆಸಕ್ತಿ ನೀಡದೆ ತಮ್ಮ ಬದುಕು ರೂಪಿಸಿಕೊಳ್ಳುವ ಕಡೆಗೆ ಹಾಗೂ ನರ್ಸಿಂಗ್ ವೃತ್ತಿಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ನರ್ಸಿಂಗ್ ವಿದ್ಯಾರ್ಥಿಗಳು ಮಾನವೀಯತೆಗೆ ಹೆಚ್ಚಿನ ಒತ್ತು ನೀಡಬೇಕು. ಆಸ್ಪತ್ರೆಗಳಿಗೆ ಸಾಕಷ್ಟು ತೊಂದರೆ ಇರುವವರು ಆಗಮಿ ಸುತ್ತಾರೆ, ಅವರಿಗೆ ಆದಷ್ಟು ಪ್ರೀತಿಯಿಂದ ಸೇವೆ ಮಾಡಬೇಕು. ರೋಗಿಗಳಿಗೆ ವೈದ್ಯಕೀಯ ಸೇವೆ ನೀಡುವ ಸಂದರ್ಭದಲ್ಲಿ ನಿಮ್ಮ ಮೊಗದಲ್ಲಿ ಸದಾ ನಗು ಇರಲಿ. ಪ್ರೀತಿಯಿಂದ ಕೆಲಸ ಮಾಡಿದರೆ ಕೆಲಸದ ಒತ್ತಡ ಇರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭ ಬಿಎಸ್‌ಸಿಯ 80, ಎಂಎಸ್‌ಸಿಯ 6 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಪೋಲೊ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಭಾರತೀಶ್ ರೆಡ್ಡಿ, ವೈದ್ಯಕೀಯ ಅಧೀಕ್ಷಕ ಡಾ.ಅಮನ್ ನಾಯಕ್, ಜಿಲ್ಲಾ ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಆಫಿಸರ್ ಡಾ.ಜೆ. ಹರಿಪ್ರಸಾದ್, ಸತ್ಯಸಾಯಿ ಪ್ಯಾಥಾಲಜಿ ಸೆಂಟರ್‌ನ ಪ್ಯಾಥಾಲಜಿಸ್ಟ್ ಡಾ.ಸಿ.ಕೆ. ಗಣೇಶ್, ಮೈಸೂರು ವೈದ್ಯಕೀಯ ಕಾಲೇಜಿನ ನಿವೃತ್ತ ವೈದ್ಯಕೀಯ ದಾಖಲೆಗಳ ಅಧಿಕಾರಿ ಶ್ಯಾಮ್ ಸುಂದರ್, ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಲೀಲಾವತಿ, ಬಿಜಿಎಸ್ ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಹೆಲ್ತ್‌ಸೈನ್ಸಸ್ ಪ್ರಾಂಶುಪಾಲೆ ಡಾ.ಎನ್.ಟಿ. ಅರುಣಾದೇವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net