ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಯೋಜನಾ ಕಚೇರಿಯಲ್ಲಿ ಇತ್ತಿಚೆಗೆ ಏರ್ಪಡಿಸಿದ್ದ ಬೆಟ್ಟದಪುರ, ಪಿರಿಯಾಪಟ್ಟಣ ಹಾಗೂ ಅರಕಲಗೂಡು ಯೋಜನಾ ಕಚೇರಿಗಳ ಸಿಎಸ್‌ಸಿ ಸೇವಾದಾರರು, ತಾಲೂಕು ನೊಡಲ್ ಅಧಿಕಾರಿಗಳು, ಹಣಕಾಸು ಪ್ರಬಂಧಕರು, ನಗದು ಮೇಲ್ವಿಚಾರಕರು, ಕ್ಷೇತ್ರ ಯೋಜನಾಧಿಕಾರಿಗಳ ಡಿಜಿಟಲ್ ಪೇ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು ಬ್ಯಾಂಕ್ ಸಂಬಂಧಪಟ್ಟ ಹಣಕಾಸು ವ್ಯವಹಾರಕ್ಕಾಗಿ ನಗರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರದ ಜತೆಗೆ ಸಂಸ್ಥೆಯಿಂದ ಸ್ಥಳೀಯವಾಗಿ ಹಳ್ಳಿಗಳಲ್ಲಿಯೇ ಸಿಎಸ್‌ಸಿ ಸೆಂಟರ್‌ಗಳನ್ನು ಆರಂಭಿಸಿ ಅವರ ಸಮಯ ಮತ್ತು ಖರ್ಚನ್ನು ಉಳಿಸಲಾಗುತ್ತಿದೆ ಎಂದರು.