ಶ್ರೀ ಕಾಡು ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ

ಚಪ್ಪರದಹಳ್ಳಿ ಗ್ರಾಮದ ಶ್ರೀ ಕಾಡು ಬಸವೇಶ್ವರ ಸ್ವಾಮಿಗೆ ಆಯೋಜಿಸಿದ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು.
ಚಪ್ಪರದಹಳ್ಳಿ ಗ್ರಾಮದ ಶ್ರೀ ಕಾಡು ಬಸವೇಶ್ವರ ಸ್ವಾಮಿಗೆ ಆಯೋಜಿಸಿದ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು.
Published on
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಕಾಡು ಬಸವೇಶ್ವರಸ್ವಾಮಿಗೆ ಗ್ರಾಮದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಪೂರ್ವಕಾಲದಿಂದಲ್ಲೂ ಇಲ್ಲಿ ಪ್ರತಿ ವರ್ಷವು ಮಳೆ ಹಾಗೂ ಉತ್ತಮ ಬೆಳೆ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಈ ಭಾಗದ ರೈತರು, ಗ್ರಾಮಸ್ಥರು ಒಗ್ಗೂಡಿ ಪೂಜೆ ಸಲ್ಲಿಸುವುದು ವಾಡಿಕೆಯಲ್ಲಿದೆ. ಪೂಜೆ ಸಲ್ಲಿಸಿದ ಬಳಿಕ ವರುಣನ ಆಗಮನವಾಗುವುದು ಎಂಬ ನಂಬಿಕೆ ಇದೆ.
ಸೋಮವಾರ ದೇಗುಲದಲ್ಲಿ ಬೆಳಗ್ಗೆಯಿಂದಲೇ ಪೂಜೆ, ಅಭಿಷೇಕ, ಹಣ್ಣು-ತುಪ್ಪ ನೈವೇದ್ಯ ಸೇರಿದಂತೆ ಹಲವು ಪೂಜಾ ಕೈಕಂರ್ಯ ಜರುಗಿದವು. ಆಗಮಿಸಿದ ಭಕ್ತರು ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಬಳಿಕ ಅನ್ನ ಪ್ರಸಾದ ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net