ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ನಿಂದ ಸರ್ವೋತ್ತಮ ಸೇವೆ

ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ನಿಂದ ಸರ್ವೋತ್ತಮ ಸೇವೆ
ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ನಿಂದ ಸರ್ವೋತ್ತಮ ಸೇವೆ
Published on
ಮೈಸೂರು : ಭಾರತದ ಪ್ರಮುಖ ಬ್ಯಾಂಕಿಂಗ್ ಯೇತರ ಹಣಕಾಸು ಕಂಪನಿ(ಎನ್‌ಬಿಎಫ್‌ಸಿ)ಗಳಲ್ಲಿ ಒಂದಾದ “ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್”, 2026 ಫೆಬ್ರವರಿ 14ರಂದು ತನ್ನ ಪ್ರಮುಖ ಜಾನುವಾರು ಕಲ್ಯಾಣ ಮತ್ತು ಗ್ರಾಮೀಣ ಜೀವನೋಪಾಯ ಉಪಕ್ರಮವಾದ 8ನೇ ಆವೃತ್ತಿಯ ಪಶು ವಿಕಾಸ್ ದಿನ(ಪಿವಿಡಿ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತು.
'ಸರ್ವೋತ್ತಮ ಸೇವೆ: ಪಶು, ಪರಿವಾರ ಮತ್ತು ಪ್ರಗತಿ' ಎಂಬ ವಿಷಯದ ಸುತ್ತ ಆಧಾರಿತವಾದ ಈ ಉಪಕ್ರಮವು, ಜಾನುವಾರುಗಳ ಆರೋಗ್ಯ, ಕೌಟುಂಬಿಕ ಯೋಗಕ್ಷೇಮ ಮತ್ತು ಸುಸ್ಥಿರ ಪ್ರಗತಿಯನ್ನು ಬಲಪಡಿಸುವ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಸಂಸ್ಥೆ ಹೊಂದಿರುವ ಅಚಲ ಬದ್ಧತೆಯನ್ನು ಬಲಪಡಿಸಿತು.
2014ರಲ್ಲಿ ಆರಂಭವಾದ ಪಶು ವಿಕಾಸ ದಿನ ಉಪಕ್ರಮವು ಉಚಿತ ಪಶುವೈದ್ಯಕೀಯ ಸೇವೆಗಳು ಮತ್ತು ತಜ್ಞರ ಮಾರ್ಗದರ್ಶನ ಒದಗಿಸುವ ಮೂಲಕ ಜಾನುವಾರು ಮಾಲೀಕರ(ಹೈನುಗಾರರ) ನಿರ್ಣಾಯಕ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತದೆ. ಅನೇಕ ವರ್ಷಗಳಲ್ಲಿ, ಈ ಉಪಕ್ರಮವು ದೇಶದ ಅತಿದೊಡ್ಡ ಒಂದು ದಿನದ ಜಾನುವಾರು ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾಗಿ ವಿಕಸನಗೊಂಡಿದೆ.
ಈ ಉಪಕ್ರಮದ ಮೂಲಕ “ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್”, 1.55 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ಇದರಲ್ಲಿ ಸುಮಾರು 1.4 ಲಕ್ಷ ಜಾನುವಾರುಗಳಿಗೆ ಚಿಕಿತ್ಸೆ ಮತ್ತು 14,000ಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ಬೆಂಬಲ ಸೇರಿದಂತೆ 30,000ಕ್ಕೂ ಹೆಚ್ಚಿನ ಕುಟುಂಬಗಳಿಗೆ ಪ್ರಯೋಜನ 510 ಒದಗಿಸಿತು. ಈ ಉಪಕ್ರಮವನ್ನು 16 ರಾಜ್ಯಗಳಲ್ಲಿ ಇರುವ 510 ಎಸ್‌ಎಂಎಫ್‌ಜಿ ಗ್ರಾಮಶಕ್ತಿ ಶಾಖೆಗಳಲ್ಲಿ ನಡೆಸಲಾಯಿತು, ಗ್ರಾಮೀಣ ಭಾರತವನ್ನು ಆಳವಾಗಿ ತಲುಪುವ ಕಂಪನಿಯ ಬದ್ಧತೆಯನ್ನು ಇದು ಒತ್ತಿಹೇಳುತ್ತದೆ.
ಕರ್ನಾಟಕದಲ್ಲಿ, ಪಶು ವಿಕಾಸ ದಿನ ಕಾರ್ಯಕ್ರಮವನ್ನು 71 ಸ್ಥಳಗಳಲ್ಲಿ ನಡೆಸಿ, 12,500 ಜಾನುವಾರುಗಳಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲಾಯಿತು, 3,700ಕ್ಕೂ ಹೆಚ್ಚು ಕುಟುಂಬಗಳಿಗೆ ಇದು ಪ್ರಯೋಜನ ನೀಡಿದೆ. ಪ್ರತಿಯೊಂದು ಶಿಬಿರವು ಸ್ಥಳೀಯ ಪಶುವೈದ್ಯರಿಂದ ಉಚಿತ ಜಾನುವಾರು ತಪಾಸಣೆ, ಜಾನುವಾರುಗಳಿಗೆ ಉಚಿತ ಔಷಧ ಮತ್ತು ಲಸಿಕೆಗಳ ವಿತರಣೆ, ಹಾಲು ನೀಡುವ ಹಸು, ಎಮ್ಮೆ, ಮೇಕೆ ಮುಂತಾದ ರಾಸುಗಳಿಗೆ ಹಾಲಿನ ಪ್ರಮಾಣ ಹೆಚ್ಚಿಸುವ ಬಗ್ಗೆ ಸಲಹೆ ನೀಡುವ ಸೇವೆಗಳನ್ನು ಒದಗಿಸಲಾಗಿದೆ.
ಈ ಉಪಕ್ರಮದ ಯಶಸ್ವಿ ಸಮಾಪನ ಕುರಿತು ಪ್ರತಿಕ್ರಿಯಿಸಿದ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ರವಿ ನಾರಾಯಣನ್, "ಸರ್ವೋತ್ತಮ ಸೇವೆ'ಯು ಅತ್ಯುನ್ನತ ಗುಣಮಟ್ಟದ ಸೇವೆ ನೀಡುವುದರ ಬಗ್ಗೆ ಆಗಿದೆ - ಅಲ್ಲಿ ಪರಾನುಭೂತಿಯು ಪ್ರಭಾವವನ್ನು ಪೂರೈಸುತ್ತದೆ ಮತ್ತು ಉದ್ದೇಶವು ಶಾಶ್ವತ ಪರಿವರ್ತನೆಯಾಗಿ ಬದಲಾಗುತ್ತದೆ. ಗ್ರಾಮೀಣ ಭಾರತದಲ್ಲಿ ಜಾನುವಾರು (ರಾಸು)ಗಳ ಆರೋಗ್ಯ, ಕುಟುಂಬಗಳ ಭದ್ರತೆ ಮತ್ತು ಆರ್ಥಿಕ ಪ್ರಗತಿಯು ಆಳವಾಗಿ ಪರಸ್ಪರ ಸಂಬಂಧ ಹೊಂದಿವೆ. ಪಶು ವಿಕಾಸ ದಿನ ಕಾರ್ಯಕ್ರಮವು ರಾಸುಗಳ ಆರೈಕೆ ಮಾಡುವ, ಗ್ರಾಮೀಣ ಜನರ ಜೀವನೋಪಾಯ ಬಲಪಡಿಸುವ ಮತ್ತು ಸಮುದಾಯದ ಯೋಗಕ್ಷೇಮವನ್ನು ಬೆಂಬಲಿಸುವ ಮೂಲಕ ಈ ಗ್ರಾಮೀಣ ಪರಿಸರ ವ್ಯವಸ್ಥೆಯನ್ನು ಪೋಷಿಸುವ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತದೆ. ಈ ಉಪಕ್ರಮದ ಮೂಲಕ, ಕೃಷಿ ಕುಟುಂಬಗಳನ್ನು ಸಬಲೀಕರಣಗೊಳಿಸುವ ಮತ್ತು ತಳಮಟ್ಟದಿಂದ ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಸುಸ್ಥಿರ ಫಲಿತಾಂಶಗಳನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದರು.
ಅನೇಕ ವರ್ಷಗಳಲ್ಲಿ ಈ ಉಪಕ್ರಮವು ಅನೇಕ ರಾಷ್ಟ್ರೀಯ ಮತ್ತು ಜಾಗತಿಕ ಮನ್ನಣೆಗಳನ್ನು ಗಳಿಸಿದೆ, ಅದರ ಪ್ರಮಾಣ ಮತ್ತು ಪ್ರಭಾವವನ್ನು ಒತ್ತಿಹೇಳುತ್ತದೆ. ಪಿವಿಡಿ ಉಪಕ್ರಮವು 2015ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, 2018ರಲ್ಲಿ ಬೆಸ್ಟ್ ಆಫ್ ಇಂಡಿಯಾ ರೆಕಾರ್ಡ್ಸ್, 2019ರಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಮತ್ತು 2024ರಲ್ಲಿ ವರ್ಲ್ಡ್ ರೆಕಾರ್ಡ್ಸ್ ಯೂನಿಯನ್‌ನಲ್ಲಿ ದೇಶಾದ್ಯಂತ ಅತಿದೊಡ್ಡ ಏಕ ದಿನದ ಜಾನುವಾರು ಆರೈಕೆ ಶಿಬಿರಗಳ ಆಯೋಜನೆಯಾಗಿ ಕಾಣಿಸಿಕೊಂಡಿದೆ. ಈ ಪರಂಪರೆಯ ಆಧಾರದಲ್ಲಿ, ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿಯು 2025ರಲ್ಲಿ ಆಯೋಜಿಸಿದ್ದ ಪಶು ವಿಕಾಸ ದಿನ ಕಾರ್ಯಕ್ರಮವು ಭಾರತದ ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಸಿದ 'ಅತಿದೊಡ್ಡ ಜಾನುವಾರು ಕಲ್ಯಾಣ ಕಾರ್ಯಕ್ರಮ'ವಾಗಿ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿ, ಮಹತ್ವದ ಜಾಗತಿಕ ಮೈಲಿಗಲ್ಲು ಸಾಧಿಸಿತು - ಇದು ಗ್ರಾಮೀಣ ಕಲ್ಯಾಣ, ಜಾನುವಾರು ಆರೈಕೆ ಮತ್ತು ಸಮುದಾಯ ನೇತೃತ್ವದ ಅಭಿವೃದ್ಧಿಗೆ ಕಂಪನಿ ಹೊಂದಿರುವ ದೀರ್ಘಕಾಲದ ಸಮರ್ಪಣೆಯನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net