ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಕೀರ್ತಿ ಬೀಚಿ ಅವರದು

ರಾಮಕೃಷ್ಣ ನಗರದ ಸುಯೋಗ ಆಸ್ಪತ್ರೆಯಲ್ಲಿ ಚಿಗುರು ಸಾಹಿತ್ಯ ಬಳಗ ಬುಧವಾರ ಭೀಮಸೇನ ಟು ಬೀಚಿ ಎಂಬ ಕಾರ್ಯಕ್ರಮ ನೆರವೇರಿತು.
ರಾಮಕೃಷ್ಣ ನಗರದ ಸುಯೋಗ ಆಸ್ಪತ್ರೆಯಲ್ಲಿ ಚಿಗುರು ಸಾಹಿತ್ಯ ಬಳಗ ಬುಧವಾರ ಭೀಮಸೇನ ಟು ಬೀಚಿ ಎಂಬ ಕಾರ್ಯಕ್ರಮ ನೆರವೇರಿತು.
Published on
ಹಾಸ್ಯ,ವಿಡಂಬನೆ, ನಾಟಕಗಳು, ಹನಿಗವನಗಳು,ಕಾದಂಬರಿ, ಹರಟೆ ಮುಂತಾದ ಪ್ರಕಾರಗಳಲ್ಲಿ ಕೈಯಾಡಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಕೀರ್ತಿ ಬೀಚಿ ಅವರದು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಹೆಳವರಹುಂಡಿ ಸಿದ್ದಪ್ಪ ಹೇಳಿದರು.
ರಾಮಕೃಷ್ಣ ನಗರದ ಸುಯೋಗ ಆಸ್ಪತ್ರೆಯಲ್ಲಿ ಚಿಗುರು ಸಾಹಿತ್ಯ ಬಳಗ ಬುಧವಾರ ಆಯೋಜಿಸಿದ್ದ ಭೀಮಸೇನ ಟು ಬೀಚಿ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಬರಿ ಕಷ್ಟಕಾರ್ಪಣ್ಯಗಳನ್ನೇ ಅನುಭವಿಸಿ ಹತ್ತನೇ ತರಗತಿಯನ್ನು ಪೂರೈಸಿದ ಯುವಕನೊಬ್ಬ ಮುಂದೆ ಕನ್ನಡ ಕಾದಂಬರಿ ಒಂದನ್ನು ಓದಿ ಪ್ರಭಾವಿತನಾಗಿ ತಾನು ಕೂಡ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿ ಅತ್ಯಂತ ಗಟ್ಟಿ ಸಾಹಿತ್ಯವನ್ನು ನೀಡಿದ ಬೀಚಿಯಾಗಿ ರೂಪುಗೊಂಡನು ಎಂದರು.
ಕಾರ್ಯಕ್ರಮದಲ್ಲಿ ಬೀಚಿ ಅವರ ಕುರಿತು ಪ್ರಧಾನ ಉಪನ್ಯಾಸ ನೀಡಿದ ಶಿಕ್ಷ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜು ಪಿ ಚಿಕ್ಕಹಳ್ಳಿ ಮಾತನಾಡಿ, ರಾಯಸಂ ಭೀಮಸೇನರಾವ್ ಬೀಚಿಯಾಗಿ ಬೆಳೆದು ಬಂದ ಕಥೆಯನ್ನು ಸವಿಸ್ತಾರವಾಗಿ ತಿಳಿಸಿದರು.
ಹಿರಿಯ ಸಮಾಜ ಸೇವಕ ಡಾ.ಕೆ ರಘುರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಸುಯೋಗ ಆಸ್ಪತ್ರೆ ಅಧ್ಯಕ್ಷರಾದ ಡಾ. ಎಸ್. ಪಿ. ಯೋಗಣ್ಣ, ಸಂಸ್ಕೃತಿ ಚಿಂತಕಿ ಸುಮತಿ ಸುಬ್ರಹ್ಮಣ್ಯ, ಚಿಗುರು ಸಾಹಿತ್ಯ ಬಳಗದ ಎನ್.ಅನಂತ, ಸಂಚಾಲಕ ಎಂ.ವಿ.ನಾಗೇಂದ್ರ ಬಾಬು ಹಾಗೂ ಹರ್ಷವರ್ಧನ, ಕೃಷ್ಣಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net