ಈ ಸಂದರ್ಭ ಆಗಮಿಸಿದ ವ್ಯಕ್ತಿಯೊಬ್ಬ ನಿಮ್ಮಲ್ಲಿರುವ 10 ಸಾವಿರ ರೂ. ನೀಡಿದ ನಿಮಗೆ ಫೋನ್‌ಪೇ ಮೂಲಕ ಹಣ ಕಳುಹಿಸುತ್ತೇನೆ ಎಂದು ಹೇಳಿದ. ಆತನ ಮಾತು ನಂಬಿ ಹಣವನ್ನು ನೀಡಿದರು. ನಂತರ ಸಾತ್ವಿಕ್ ಅವರ ನಂಬರ್‌ಗೆ ಆರೋಪಿಯು 10 ಸಾವಿರ ರೂ.ಗಳನ್ನು ಫೋನ್‌ಪೇ ಮೂಲಕ ಕಳುಹಿಸಿರುವುದನ್ನು ತೋರಿಸಿ ಹಣದೊಂದಿಗೆ ಸ್ಥಳದಿಂದ ನಿರ್ಗಮಿಸಿದ. ಆದರೆ, ಇದುವರೆಗೆ ಖಾತೆಗೆ ಹಣ ಬಾರದ ಹಿನ್ನೆಲೆಯಲ್ಲಿ ಸಾತ್ವಿಕ್ ಶನಿವಾರ ನರಸಿಂಹರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.