ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸಂಗೀತ ಅವರು, "ಲೂಪಸ್ ಕಾಯಿಲೆಯು ಕೀಲು, ಚರ್ಮ, ಮೂತ್ರಪಿಂಡ, ಮೆದುಳು, ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ದೇಹದ ವಿವಿಧ ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ರೋಗಿಗಳಲ್ಲಿ ದೀರ್ಘಕಾಲದ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಅಥವಾ ನರವೈಜ್ಞಾನಿಕ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇವು ಸಾಮಾನ್ಯ ಸೋಂಕು ಅಥವಾ ನಡವಳಿಕೆಯ ಬದಲಾವಣೆಯಂತೆ ಕಾಣುವುದರಿಂದ ರೋಗ ಪತ್ತೆ ವಿಳಂಬವಾಗುತ್ತದೆ. ಹೀಗಾಗಿ ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ, ವೈದ್ಯರ ಸಲಹೆಯಂತೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಬೇಗನೆ ರೋಗ ಪತ್ತೆಯಾದರೆ ಅಂಗಗಳಿಗೆ ಆಗುವ ಶಾಶ್ವತ ಹಾನಿಯನ್ನು ತಪ್ಪಿಸಬಹುದು," ಎಂದರು.