ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಬಸವಣ್ಣ

ತಿ.ನರಸೀಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಸಹಯೋಗದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಟಿ.ಜಿ. ಸುರೇಶಾಚಾರ್, ಡಾ.ಕೆ. ರಂಗಸ್ವಾಮಿ, ಸಿ.ಶ್ರೀನಿವಾಸ್, ಸಿ.ಎಂ.ಪ್ರಕಾಶ್, ಕೆ.ವಿ.ಶಿವಶಂಕರ್, ಕೆ.ಎನ್.ಅಶೋಕ್, ಕಿರಗಸೂರು ಮಹದೇವಸ್ವಾಮಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಸಹಯೋಗದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಟಿ.ಜಿ. ಸುರೇಶಾಚಾರ್, ಡಾ.ಕೆ. ರಂಗಸ್ವಾಮಿ, ಸಿ.ಶ್ರೀನಿವಾಸ್, ಸಿ.ಎಂ.ಪ್ರಕಾಶ್, ಕೆ.ವಿ.ಶಿವಶಂಕರ್, ಕೆ.ಎನ್.ಅಶೋಕ್, ಕಿರಗಸೂರು ಮಹದೇವಸ್ವಾಮಿ ಇತರರು ಇದ್ದರು.
Published on
ತಿ. ನರಸೀಪುರ: ಜಾಗತಿಕ ಕಾಲದಲ್ಲಿಯೂ ನಾಯಕರಾಗಿರುವ ಜಗಜ್ಯೋತಿ ಬಸವಣ್ಣ ಅವರು ಅಂದೇ ವಚನಗಳು ಮತ್ತು ಅನುಭವ ಮಂಟಪದ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ದಿನಮಾನದಲ್ಲೂ ಬಸವಣ್ಣ ಅವರ ವಚನಗಳು ಸಾಮಾಜಿಕ ಪರಿವರ್ತನೆ ದಿಕ್ಕೂಚಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ವಚನಗಳು ಕನ್ನಡ ಸಾಹಿತ್ಯವನು ಶ್ರೀಮಂತಗೊಳಿಸಿವೆ ಎಂದರು.
ಸರಳ ಭಾಷೆಯಲ್ಲಿರುವ ಬಸವಣ್ಣರ ವಚನಗಳು ಜನ ಸಾಮಾನ್ಯನಿಗೂ ಅರ್ಥವಾಗುತ್ತವೆ. ಹಾಗಾಗಿ ಬಸವಣ್ಣ ಅವರು ಸಾಮಾಜಿಕ ಪರಿವರ್ತನೆಗೆ ಕೃತಿ (ಕಾರ್ಯ) ಮತ್ತು ವಚನ ಕ್ಷೇತ್ರವನ್ನು ಆಯ್ದುಕೊಂಡಿದ್ದರು. ಬಸವಣ್ಣ ಅವರು ಜನರ ದೈಹಿಕ, ಮಾನಸಿಕ ನಡೆಗಳನ್ನೂ ತುಲನಾತ್ಮಕವಾದ ದೃಷ್ಟಿಕೋನದಲ್ಲಿ ಕಂಡಿದ್ದು, ಇದು ಅವರ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲೂ ಬೇಡ’ ಎಂಬ ವಚನದಲ್ಲಿ ಬಿಂಬಿತವಾಗಿದೆ. ಮನುಜನು ತನ್ನ ಭೌತಿಕ ಮತ್ತು ಮಾನಸಿಕ ಕ್ರಿಯೆಯಿಂದ ಅನ್ಯರಿಗೆ ಉಪದ್ರವ ನೀಡುವುದು ಸಲ್ಲದು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಮುಖ್ಯಭಾಷಣಕಾರ ಬಿಆರ್‌ಸಿ ನಾಗೇಶ್ ಮಾತನಾಡಿ, ಬಸವಣ್ಣ ಅವರ ಜೀವನ ಚರಿತ್ರೆ, ವಚನಗಳ ಮಹತ್ವ ಹಾಗೂ ಬಿಜ್ಜಳನ ಆಸ್ಥಾನದಲ್ಲಿ ನಡೆದ ಘಟನಾವಳಿಗಳ ಪ್ರಸ್ತುತಪಡಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲ ಜಯದೇವಣ್ಣ, ವೈದ್ಯ ಡಾ.ಬಸವಣ್ಣ, ಯುವ ಕೃಷಿ ವಿಜ್ಞಾನಿ ಡಾ.ನಿರಂಜನ್ ಪ್ರಸಾದ್, ಹಿರಿಯ ವೀರಶೈವ ಮುಖಂಡ ರಾಜಣ್ಣ ಹಾಗೂ ಪ್ರಗತಿಪರ ರೈತ ನಾಗೇಂದ್ರ ಮೂರ್ತಿ ಅವರನ್ನು ಗೌರವಿಸಲಾಯಿತು.
ತಾಪಂ ಇಒ ಡಾ.ಕೆ.ರಂಗಸ್ವಾಮಿ, ಬಿಇಒ ಎಸ್.ಸಿ.ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿಗಳಾದ ಕೆ.ಸತೀಶ್, ಸಿ.ಶ್ರೀನಿವಾಸ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವಶಂಕರ್, ಯುವ ಘಟಕ ಅಧ್ಯಕ್ಷ ಕೈಯಟಬಳ್ಳಿ ಅಶೋಕ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಿರಿಯೂರು ವೀರೇಂದ್ರ(ನವೀನ್), ಎಇಇ ಕೆ.ಶಿವರಾಜು, ಮುಖಂಡರಾದ ಮೂಗೂರು ಸಿದ್ದರಾಜು, ಕರೋಹಟ್ಟಿ ಪ್ರಭುಸ್ವಾಮಿ, ಆಲಗೂಡು ಶಿವಕುಮಾರ್, ಯಾಚೇನಹಳ್ಳಿ ಸೋಮಶೇಖರ್, ಕೆಇಬಿ ಸಿದ್ದಲಿಂಗಸ್ವಾಮಿ, ಕೆ.ಎಂ.ಮಲ್ಲು, ಸಿದ್ದಲಿಂಗಮೂರ್ತಿ, ಡಾ.ಬಿ.ಮನ್ಸೂರ್ ಆಲಿ, ಅಕ್ಬರ್ ಪಾಷ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೆಂಪರಾಜು, ಸಿಡಿಪಿಒ ಗೋವಿಂದ ರಾಜು, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಹಿಟ್ಟುವಳ್ಳಿ ಪ್ರಭುಸ್ವಾಮಿ, ಕಿರಗಸೂರು ಮಹದೇವಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net