ಕೆ.ಆರ್.ನಗರದಲ್ಲಿ ಬಸವ ಜಯಂತಿ ಆಚರಣೆ

.ಆರ್.ನಗರದ ಆಂಜನೇಯ ಬಡಾವಣೆಯದಲ್ಲಿ ಶ್ರೀ ಬಸವೇಶ್ವರ ರೈತ ಗಾಡಿ ಸಂಘದಿಂದ ಆಯೋಜಿಸಿದ್ದ 48ನೇ ವರ್ಷದ ಬಸವ ಜಯಂತಿ ಆಚರಣೆ ಮತ್ತು ರಾಸುಗಳ ಮೆರವಣಿಗೆಗೆ ಸಂಘದ ಅಧ್ಯಕ್ಷ ರಾಘವೇಂದ್ರ ಚಾಲನೆ ನೀಡಿದರು. ಅಶ್ವತ್ಥ್ ನಾರಾಯಣ್, ಕೇಶವಮೂರ್ತಿ, ಗೋವಿಂದೇಗೌಡ, ನಾರಾಯಣ್‌ನಾಯಕ್, ಜಗದೀಶ್, ದೇವರಾಜು, ಶಂಕರ್, ಗಜೇಂದ್ರ, ಕುಳ್ಳೇಗೌಡ, ರವಿ, ರಮೇಶ್, ಅಶೋಕ್, ಕುಮಾರ, ರಾಮಿ, ಸಚ್ಚಿನ್, ವಿನಯ್ ಯೋಗೇಶ್ ಕುಮಾರ್ ಇತರರು ಇದ್ದರು. ===============

Published on
ಕೆ.ಆರ್.ನಗರ: ಪಟ್ಟಣದ ಆಂಜನೇಯ ಬಡಾವಣೆಯ ಶ್ರೀ ಬಸವೇಶ್ವರ ರೈತ ಗಾಡಿ ಸಂಘದ ವತಿಯಿಂದ 48ನೇ ವರ್ಷದ ಬಸವ ಜಯಂತಿ ಆಚರಣೆ ಮತ್ತು ರಾಸುಗಳ ಮೆರವಣಿಗೆ ಆಯೋಜಿಸಲಾಗಿತ್ತು.
ರಾಸುಗಳ ಮೆರವಣಿಗೆ ಬಡಾವಣೆಯ ಶ್ರೀ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿರುವ ಬೆಳಗ್ಗೆ ಆಂಜನೇಯಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಮತ್ತು ಬೆಣ್ಣೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 3 ಗಂಟೆಗೆ ರಾಸುಗಳ ಮೆರವಣಿಗೆ ಆರಂಭವಾಯಿತು. ನಗರದ ಬಜಾರ್ ರಸ್ತೆ, 7ನೇ ರಸ್ತೆ, ಬಸವೇಶ್ವರ ಬ್ಲಾಕ್‌ನಲ್ಲಿರುವ ಬಸವೇಶ್ವರ ಮತ್ತು ಮಹದೇಶ್ವರ ದೇವಸ್ಥಾನದ ಮೂಲಕ ಗರುಡಗಂಭ ವೃತ್ತ, ವಿ.ವಿ.ರಸ್ತೆ, ಪುರಸಭಾ ವೃತ್ತದಿಂದ ಸಿ.ಎಂ.ರಸ್ತೆಗಳಲ್ಲಿ ಸಂಚರಿಸಿತು. ವಿವಿಧ ಜಾನಪದ ಕಲಾತಂಡಗಳು, ಡೊಳ್ಳುಕುಣಿತ, ವೀರಗಾಸೆ, ಮಂಗಳವಾದ್ಯ ಮೆರವಣಿಗೆ ಮೆರುಗು ಹೆಚ್ಚಿಸಿದವು. ಸಂಜೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಶ್ರೀ ಬಸವೇಶ್ವರ ರೈತ ಗಾಡಿ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಈ ದೇಶದ ಬೆನ್ನಲುಬು ರೈತನಾದರೆ ಆತನ ಉಸಿರು ಜಾನುವಾರುಗಳಾಗಿದ್ದು, 12ನೇ ಶತಮಾನದ ಬಸವಣ್ಣನವರ ಜನ್ಮದಿನಾಚರಣೆ ಅಂಗವಾಗಿ ಜಾನುವಾರುಗಳಿಗೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಇಂದು ರಾಸುಗಳಿಗೆ ಮೇವು ಸಿಗುತ್ತಿಲ್ಲ, ರೈತ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕ್ಕಿ ಆತ್ಮಹತ್ಯೆಗೆ ಶರಣಾಗುತ್ತಿರವುದು ಬೇಸರ ಸಂಗತಿ. ಬೆಳೆ ಸಾಲ ನೀಡುವಲ್ಲಿ ಸಹಕಾರಿ ಬ್ಯಾಂಕ್‌ಗಳು ಸ್ಪಂದಿಸದಿರುವುದು ಮತ್ತು ಇಂದಿನ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ರೈತನ ಪರಿಸ್ಥಿತಿ ಚಿಂತಜನಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಗಾಡಿ ಸಂಘದ ಕಾರ್ಯದರ್ಶಿ ಅಶ್ವತ್ಥ್‌ನಾರಾಯಣ್, ಪದಾಧಿಕಾರಿಗಳಾದ ಕೇಶವಮೂರ್ತಿ, ಗೋವಿಂದೇಗೌಡ, ನಾರಾಯಣ್‌ನಾಯಕ್, ಜಗದೀಶ್, ದೇವರಾಜು, ಶಂಕರ್, ಗಜೇಂದ್ರ, ಕುಳ್ಳೇಗೌಡ, ರವಿ, ರಮೇಶ್, ಅಶೋಕ್, ಕುಮಾರ, ರಾಮಿ, ಸಚ್ಚಿನ್, ವಿನಯ್, ಯೋಗೇಶ್ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net