ಬಾಡಗ ಗ್ರಾಮದಲ್ಲಿ ಬಸವ ಜಯಂತಿ ಆಚರಣೆ

ಸರಗೂರು ತಾಲೂಕಿನ ಬಾಡಗ ಗ್ರಾಮದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಡಾ.ಷಡಕ್ಷರ ಸ್ವಾಮೀಜಿ, ಮಹದೇವ ಸ್ವಾಮೀಜಿ, ತೊಂಟದಾರ್ಯ ಸ್ವಾಮೀಜಿ ಪ್ರವೀಣ್ ಇರರು ಇದ್ದರು.
ಸರಗೂರು ತಾಲೂಕಿನ ಬಾಡಗ ಗ್ರಾಮದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಡಾ.ಷಡಕ್ಷರ ಸ್ವಾಮೀಜಿ, ಮಹದೇವ ಸ್ವಾಮೀಜಿ, ತೊಂಟದಾರ್ಯ ಸ್ವಾಮೀಜಿ ಪ್ರವೀಣ್ ಇರರು ಇದ್ದರು.
Published on
ಸರಗೂರು: ಬಾಡಗ ಗ್ರಾಮದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಿಸಲಾಯಿತು.
ಗುರುವಾರ ಸಂಜೆ ನಡೆದ ವಿಶ್ವ ಗುರು ಬಸವಣ್ಣ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿರಿಸಿ ಪುಷ್ಪಾರ್ಚನೆ ಮಾಡಿದ ನಂತರ ಮೆರವಣಿಗೆ ನಡೆಯಿತು. ಬಳಿಕ ವೇದಿಕೆ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಡದಹಳ್ಳಿ ಪಟ್ಟದ ಮಠಾಧ್ಯಕ್ಷ ಡಾ.ಷಡಕ್ಷರ ಸ್ವಾಮೀಜಿ, ಬಸವಣ್ಣನವರು 12ನೇ ಶತಮಾನದಲ್ಲಿನ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು ಹಾಗೂ ಆಗಿನ ಕಾಲದ ಶರಣರ ತತ್ವ, ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದರು.
ಪಡವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಮಾತನಾಡಿ, ಕಾಯಕವೇ ಕೈಲಾಸ ಎಂದು ವಿಶ್ವಕ್ಕೆ ಸಾರುವುದರ ಜತೆಗೆ ಸಮಾನತೆಗಾಗಿ ಹೋರಾಡಿದ ಕ್ರಾಂತಿಕಾರಿ ಬಸವಣ್ಣ ಎಂದು ಬಣ್ಣಿಸಿದರು.
ಹಂಚಿಪುರ ಮಠದ ಕಿರಿಯ ಶ್ರೀ ತೊಂಟದಾರ್ಯ ಸ್ವಾಮೀಜಿ ಮಾತನಾಡಿದರು.
ಇದಕ್ಕೂ ಮುನ್ನ ನಡೆದ ಬಸವೇಶ್ವರ ಪುತ್ಥಳಿ ಮೆರವಣಿಗೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂದಿಧ್ವಜ, ವೀರಗಾಸೆಯ ಮೆರವಣಿಗೆ ಮೆರುಗು ಹೆಚ್ಚಿಸಿದವು. ಗ್ರಾಮದ ಹಿರಿಯರು ಬಿ.ಸೋಮಣ್ಣ, ಸಿದ್ದಪ್ಪ ದಡದಹಳ್ಳಿ, ಬಸವ ಬಳಗದ ಅಧ್ಯಕ್ಷ ಹಂಚೀಪುರ ಗಣಪತಿ, ಮುಖಂಡರಾದ ಅಣ್ಣಯ್ಯಸ್ವಾಮಿ, ಬಾಡಗ ಗ್ರಾಮದ ಮಾದಪ್ಪ, ಬಿ.ಪ್ರಕಾಶ, ಸುರೇಶ, ಮಣಿ, ಬಿ.ಕೆ.ಸಿದ್ದಪ್ಪ, ಬಿ.ಕೆ.ಚನ್ನಬಸಪ್ಪ, ಪ್ರವೀಣ, ಮಂಜು, ಪ್ರದೀಪ, ಗುರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net