ಏ 20ರಂದು ಬಸವ ಜಯಂತಿ ಆಚರಣೆ

 ನಗರದ ಸಮೀಪದಲ್ಲಿರುವ ಮಲ್ಲನಮೂಲೆ ಮಠದ ಆವರಣದಲ್ಲಿ 2026 ಬಸವ ಜಯಂತಿ ಆಚರಣೆ ಸಂಬಂಧ ಪೂರ್ವ ಸಭೆ ನಡೆಸಲಾಯಿತು.ಶ್ರೀ ಇಮ್ಮಡಿ ಸಿದ್ಧಲಿಂಗ ಸ್ವಾಮಿಗಳು, ಸಿಂಧುವಳ್ಳಿ ಕೆಂಪಣ್ಣ, ಕುರಹಟ್ಟಿ ಮಹೇಶ್, ಶಿವಪ್ಪ ದೇವರು, ಚೆನ್ನಪ್ಪ ಇತರರು ಇದ್ದರು.
ನಗರದ ಸಮೀಪದಲ್ಲಿರುವ ಮಲ್ಲನಮೂಲೆ ಮಠದ ಆವರಣದಲ್ಲಿ 2026 ಬಸವ ಜಯಂತಿ ಆಚರಣೆ ಸಂಬಂಧ ಪೂರ್ವ ಸಭೆ ನಡೆಸಲಾಯಿತು.ಶ್ರೀ ಇಮ್ಮಡಿ ಸಿದ್ಧಲಿಂಗ ಸ್ವಾಮಿಗಳು, ಸಿಂಧುವಳ್ಳಿ ಕೆಂಪಣ್ಣ, ಕುರಹಟ್ಟಿ ಮಹೇಶ್, ಶಿವಪ್ಪ ದೇವರು, ಚೆನ್ನಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಹೇಳಿಕೆ
  • ಪೂರ್ವಭಾವಿ ಸಭೆ
ನಂಜನಗೂಡು: 2026ರ ಬಸವ ಜಯಂತಿ ಹಿನ್ನೆಲೆ ನಗರದ ಸಮೀಪದ ಮಲ್ಲನಮೂಲೆ ಮಠದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಮಠದ ಆವರಣದಲ್ಲಿ ಮಂಗಳವಾರ ಶ್ರೀ ಇಮ್ಮಡಿ ಸಿದ್ಧಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಬಳಿಕ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, ಮೇ ತಿಂಗಳಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನಿಸಲಾಗಿದೆ. ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ ದಿಂದ ಕಲಾತಂಡಗಳೊಂದಿಗೆ ಶ್ರೀ ಬಸವೇಶ್ವರರ ಪ್ರತಿಮೆಯನ್ನು ಆರ್. ಪಿ. ರಸ್ತೆಯ ಮೂಲಕ ಮೆರವಣಿಗೆ ಮಾಡಲಾಗುವುದು. ನಂತರ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮಿಗಳು, ಮಲ್ಲನ ಮೂಲೆ ಮಠದ ಇಮ್ಮಡಿ ಸಿದ್ಧಲಿಂಗ ಸ್ವಾಮಿಗಳು, ದೇವನೂರು ಶ್ರೀಮಹಾಂತ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ರಾಜಕೀಯ ನಾಯಕರುಗಳನ್ನು ಹೊರತುಪಡಿಸಿ, ತಾಲೂಕಿನ ಎಲ್ಲ ಮಠಾಧೀಶರನ್ನು ಆಹ್ವಾನಿಸಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಿಸಲಾಗುವುದೆಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ದೇವರು, ರಾಜ್ಯ ನಿರ್ದೇಶಕ ಹಗಿನವಾಳು ಚೆನ್ನಪ್ಪ , ಜಿಲ್ಲಾ ನಿರ್ದೇಶಕ ಕುರಹಟ್ಟಿ ಮಹೇಶ್,ಮುಳ್ಳೂರು ರೇಚಣ್ಣ,ಮಡಹಳ್ಳಿ ನಟರಾಜು, ಮಲ್ಕುಂಡಿ ಮಹದೇವಸ್ವಾಮಿ, ನಗರ ಅಧ್ಯಕ್ಷ ಮಹೇಶ್, ಮಹಿಳಾ ಘಟಕದ ಅಧ್ಯಕ್ಷ ಶಶಿಕಲ ಗಿರೀಶ್,ಬಸವ ಸೇವಾ ಸಮಿತಿಯ ಕುಮಾರಸ್ವಾಮಿ, ಹೆಗ್ಗಡಹಳ್ಳಿ ರೇವಣ್ಣ, ನಂಜಮಣಿ, ಬದನವಾಳು ಮಹೇಶ್, ಕೋಮಲ ದಳಪತಿ ಮಹಾದೇವಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net