ವಿಮಾನ ಗೋಪುರದ ಕಲಶ ಸ್ಥಾಪನೆ ಸಂಪನ್ನ

ಬನ್ನೂರು ಸಮೀಪದ ಚಾಮನಹಳ್ಳಿಯಲ್ಲಿ ಸೋಮವಾರ ನೂತನ ವಿಮಾನ ಗೋಪುರದ ಕಲಶ ಸ್ಥಾಪನೆಯ ಅಂಗವಾಗಿ ಬಸವ ಮತ್ತು ಕಂಡಾಯ ಸಮೇತ ಹೂವು ಹೊಂಬಾಳೆ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಿದ್ದಪ್ಪಾಜಿ ದೇವರ ಗುಡ್ಡಪ್ಪ ನಾಗಚಾರಿ ಸೇರಿದಂತೆ ಚಾಮನಹಳ್ಳಿ ಗ್ರಾಮದ ಗ್ರಾಮಸ್ಥರು ಮತ್ತು ವಿಶ್ವಕರ್ಮ ಕುಲಬಾಂಧವರು, ವಿವಿಧ ಗ್ರಾಮದ ಗುಡ್ಡಪ್ಪ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

Published on

ಬನ್ನೂರು: ಪಟ್ಟಣ ಸಮೀಪದ ಚಾಮನಹಳ್ಳಿಯಲ್ಲಿ ಸೋಮವಾರ ಶ್ರೀ ಸಿದ್ದಪ್ಪಾಜಿ ದೇವಾಲಯದ ನೂತನ ವಿಮಾನ ಗೋಪುರದ ಕಲಶ ಸ್ಥಾಪನೆ ಅಂಗವಾಗಿ ಬಸವ ಮತ್ತು ಕಂಡಾಯ ಸಮೇತ ಹೂವು ಹೊಂಬಾಳೆ ಮೆರವಣಿಗೆ ಜರುಗಿತು.

ಬೆಳಗ್ಗೆ ಶ್ರೀಸಿದ್ದಪ್ಪಾಜಿ ದೇವಾಲಯವನ್ನು ಹೂವು, ತಳಿರು-ತೋರಣದಿಂದ ಅಲಂಕಾರ ಮಾಡಿ, ರಂಗೋಲಿಯಿಂದ ದೇವಾಲಯದ ಮುಂಭಾಗವನ್ನು ಸಿಂಗರಿಸಿ, ಕಳಸ ಹೊತ್ತ ಮುತ್ತೈದೆಯರು ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇವಾಲಯದಲ್ಲಿ ಅರ್ಚಕರು ವಿವಿಧ ಹೋಮ- ಹವನ ನೆರವೇರಿಸಿ, ವಿವಿಧ ಪೂಜಾ ಕೈಂಕರ್ಯ ನಡೆಸಿದ ನಂತರ ದೇಶವಳ್ಳಿ ಶ್ರೀಸಿದ್ದಪ್ಪಾಜಿ ಗುಡ್ಡಪ್ಪ ಅವರ ಸಹಕಾರದೊಂದಿಗೆ ಮಂಗಳವಾದ್ಯದೊಂದಿಗೆ ಬಸವ ಮತ್ತು ಕಂಡಾಯ, ಹೂವು, ಹೊಂಬಾಳೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ನಂತರ ಸ್ವಸ್ಥಾನ ತಲುಪಿತು.
ಭಕ್ತರು ಮೆರವಣಿಗೆ ಸಾಗುವ ರಸ್ತೆಯನ್ನು ರಂಗೋಲಿಯಿಂದ ಸಿಂಗರಿಸಿದ್ದರು. ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗ ನಡೆಯಿತು. ಸಿದ್ದಪ್ಪಾಜಿ ದೇವರ ಗುಡ್ಡಪ್ಪ ನಾಗಾಚಾರಿ, ಚಾಮನಹಳ್ಳಿ ಗ್ರಾಮಸ್ಥರು, ವಿವಿಧ ಗ್ರಾಮಗಳ ಗುಡ್ಡಪ್ಪ ಹಾಗೂ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net