ಮುಖ್ಯಮಂತ್ರಿಯಾಗಲು, ಮಂತ್ರಿಯಾಗಲು ಹಣ ನೀಡಬೇಕು ಎಂಬ ಮಾತು ಇದೆ. ಆದರೆ, ನಾನು ಅದನ್ನು ನೋಡಿಲ್ಲ. ಉನ್ನತ ಮಟ್ಟದಲ್ಲಿ ತನಿಖೆಯಾದರೆ ಎಲ್ಲವೂ ಬಹಿರಂಗವಾಗುತ್ತದೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭ ಮಹಿಳೆಯರಿಗೆ ಒಂದೇ ಒಂದು ಸ್ಥಾನ ನೀಡಿಲ್ಲ. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ನೀಡಬಹುದಿತ್ತು. ಅವರು ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಸ್ಥಾನ ನೀಡದೆ ಇರುವುದು ಸರಿಯಲ್ಲ. ಡಿ.ಕೆ. ಶಿವಕುಮಾರ್ ಅವರ ರಾಜಗುರು ಬ್ರಾಹ್ಮಣರು, ಹೀಗಿದ್ದರೂ ಬ್ರಾಹ್ಮಣರಿಗೆ ಸಚಿವ ಸ್ಥಾನ ನೀಡದೆ ಇರುವುದು ಸರಿಯಲ್ಲ ಎಂದರು.