ಸಮಾಜಕ್ಕೆ, ದೇಶಕ್ಕೆ ಬಾಬೂಜಿ ಕೊಡುಗೆ ಅಪಾರ

 ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದಾಸೋಹ ಭವನದ ಆವರಣದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಡಾ. ತಿಮ್ಮಯ್ಯ, ಬಾಬೂಜಿ ಸೇನೆ ಅಧ್ಯಕ್ಷ  ಚಂದ್ರು, ಸ್ಮಿತಾ ರಾಮು, ಕೆ ಆರ್. ರಾಚಯ್ಯ, ಕಳಲೆ ಕೇಶವಮೂರ್ತಿ ಸೇರಿದಂತೆ ಇತರರು ಇದ್ದರು.
ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದಾಸೋಹ ಭವನದ ಆವರಣದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಡಾ. ತಿಮ್ಮಯ್ಯ, ಬಾಬೂಜಿ ಸೇನೆ ಅಧ್ಯಕ್ಷ ಚಂದ್ರು, ಸ್ಮಿತಾ ರಾಮು, ಕೆ ಆರ್. ರಾಚಯ್ಯ, ಕಳಲೆ ಕೇಶವಮೂರ್ತಿ ಸೇರಿದಂತೆ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಧ್ರುವನಾರಾಯಣ ಅಭಿಮತ
ನಂಜನಗೂಡು: ಸಮಾಜಕ್ಕೆ ಹಾಗೂ ದೇಶಕ್ಕೆ ಬಾಬೂಜಿ ಅವರ ಕೊಡುಗೆ ಅಪಾರವಾಗಿದ್ದು ಇಂತಹ ಮಹಾನಿಯರನ್ನು ನಿತ್ಯ ಸ್ಮರಿಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವ ನಾರಾಯಣ ತಿಳಿಸಿದರು.
ತಾಲೂಕು ಆಡಳಿತದ ವತಿಯಿಂದ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಭಾನುವಾರ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ 119ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. 40 ವರ್ಷಗಳ ಕಾಲ ದೀರ್ಘವಾಗಿ ರಾಜಕಾರಣ ಮಾಡಿದ್ದಾರೆ. ಅವರು ಕೃಷಿ ಮಂತ್ರಿಯಾಗಿದ್ದಾಗ ದೇಶದಲ್ಲಿ ದೊಡ್ಡ ಬದಲಾವಣೆ ಮಾಡಿದ್ದಾರೆ. ಅಮೆರಿಕದಿಂದ ಭಾರತ ದೇಶಕ್ಕೆ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳುತ್ತಿದ್ದರು. ಕೃಷಿ ಮಂತ್ರಿಯಾಗಿದ್ದಾಗ ಇಡೀ ದೇಶಕ್ಕೆ ಆಹಾರ ಪದಾರ್ಥಗಳ ಕ್ರಾಂತಿಯನ್ನು ಮಾಡಿ ಹಸಿರು ಕ್ರಾಂತಿಯ ಹರಿಕಾರ ಎಂದು ಇವರನ್ನು ಕರೆದರು. ರಕ್ಷಣಾ ಮಂತ್ರಿಯಾಗಿದ್ದಾಗ ಬಾಂಗ್ಲಾದೇಶ ಎಂಬ ದೇಶವನ್ನು ಸೃಷ್ಟಿ ಮಾಡಿದರು. ಜಯಂತಿ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಿರಂತರವಾಗಿ ನಡೆಯುತ್ತಿರಬೇಕು. ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವ ಗಮನ ಹರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ಮಾತನಾಡಿ, ಬಾಬೂಜಿ ಅವರು ದಲಿತ ಸಮುದಾಯದಿಂದ ಬಂದವರಾಗಿದ್ದು, ಅಂಬೇಡ್ಕರ್ ಅವರಂತೆ ಶೋಷಣೆಗೆ ಒಳಗಾಗಿದ್ದರು. ಶಾಲಾಮಟ್ಟದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಹೋರಾಟ ನಡೆಸಿದ್ದರು. ಈಗಾಗಲೇ ಜಾತಿಯ ಬಗ್ಗೆ ಶೋಷಣೆ ಕಡಿಮೆಯಾಗಿದೆ ಎಂತಲೇ ಹೇಳಬಹುದು. ಕಾರಣ ಸಂವಿಧಾನದಲ್ಲಿರುವ ಕಾನೂನು ಭಯ. ಅವರ ಆದರ್ಶಗಳನ್ನು ಪ್ರತಿ ಹಳ್ಳಿಗಳಲ್ಲೂ ನಡೆಸಬೇಕು ಎಂದರು.
ಮುಖ್ಯ ಭಾಷಣಕಾರ ಸಾಹಿತಿ ಕೆ.ಆರ್.ರಾಚಯ್ಯ ಮಾತನಾಡಿ, ಬಿಹಾರ್ ರಾಜ್ಯದಲ್ಲಿ ಜನಿಸಿರುವ ಬಾಬೂಜಿ ಶಾಲಾ ದಿನಗಳಲ್ಲೇ ಸಮಾನತೆಗಾಗಿ ಹೋರಾಟ ನಡೆಸಿದರು. ಕೇಂದ್ರದಲ್ಲಿ ಸಾಕಷ್ಟು ಖಾತೆಗಳನ್ನು ನಿರ್ವಹಿಸಿ ಸಮಾಜಕ್ಕೆ ಹಾಗೂ ದೀನದಲಿತರಿಗೆ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಿಗೆ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಿಂದ ಮೆರವಣಿಗೆ ಶ್ರೀಕಂಠೇಶ್ವರ ಸ್ವಾಮಿ ಭವನದವರೆಗೂ ನಡೆಯಿತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀೀಲ್ದಾರ್ ಸ್ಮಿತಾ ರಾಮ್, ಸಮಾಜ ಕಲ್ಯಾಣ ಅಧಿಕಾರಿ ಸಿದ್ದಲಿಂಗ, ಡಾ.ಬಾಬೂಜಿ ಯುವಸೇನೆ ಟ್ರಸ್ಟ್ ಅಧ್ಯಕ್ಷ ಚಂದ್ರು, ಶ್ವೇತಾ ಶಿಕ್ಷಣಾಧಿಕಾರಿ ಎಂ.ಮಹೇಶ್, ಪೌರಾಯುಕ್ತ ಬಸವರಾಜು, ಜೆರಾಲ್ಡ್ ರಾಜೇಶ್, ಜಿ.ಎಸ್.ರಘು, ದೇವರಾಜು ಪ್ರಕಾಶ್, ಸ್ವಾಮಿ, ರಾಜೇಶ್, ಗಾಯತ್ರಿ, ಮೋಹನ್, ಸ್ವಾಮಿ, ಚೇತನ್ ಶರ್ಮ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net