ಪದಾಧಿಕಾರಿಗಳ ಆಯ್ಕೆ

ಸರಗೂರು ತಾಲೂಕು ಎವಿಎಸ್‌ಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆಯ ತಾಲೂಕು ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಳಿಯೂರು ಮೂರ್ತಿ, ನಂದ, ಕುಮಾರ್, ರುಕ್ಮಿಣಿ ಇತರರಿದ್ದರು.
ಸರಗೂರು ತಾಲೂಕು ಎವಿಎಸ್‌ಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆಯ ತಾಲೂಕು ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಳಿಯೂರು ಮೂರ್ತಿ, ನಂದ, ಕುಮಾರ್, ರುಕ್ಮಿಣಿ ಇತರರಿದ್ದರು.
Published on
ಸರಗೂರು: ಸರಗೂರು ತಾಲೂಕಿನ ಎವಿಎಸ್‌ಎಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆಯ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹಳಿಯೂರು ಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಳ್ಳೂರು ಮಹದೇವಸ್ವಾಮಿ (ಗುಣ), ಉಪಾಧ್ಯಕ್ಷರಾಗಿ ಚಂದ್ರ, ಖಜಾಂಚಿಯಾಗಿ ಮನುಗನಹಳ್ಳಿ ಪ್ರಭು, ಎಚ್.ಡಿ.ಕೋಟೆ ತಾಲೂಕು ರಾಷ್ಟ್ರೀಯ ಭೀಮಾ ಮಾರ್ಗ ಅಧ್ಯಕ್ಷರಾಗಿ ಜಯಚಂದ್ರ ಅವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಯುವ ಘಟಕದ ಅಧ್ಯಕ್ಷ ನಂದ, ಪ್ರಧಾನ ಕಾರ್ಯದರ್ಶಿ ಕುಮಾರ್, ರಾಜ್ಯ ಯುವ ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿ, ಕಾರ್ಯಕಾರಿಣಿ ಸಮಿತಿ ಸದಸ್ಯ ಹಾದನೂರು ಮಹದೇವಸ್ವಾಮಿ, ರವಿಕುಮಾರ್, ಯಶವಂತಪುರ ಇಂದ್ರ ಸೇರಿದಂತೆ ಇತರರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net