ವಿದ್ಯಾರ್ಥಿಗಳಿಗೆ ಮಾದಕವಸ್ತು ದುಷ್ಪರಿಣಾಮದ ಅರಿವು

ನಗರದ ಸಾತಗಳ್ಳಿಯಲ್ಲಿರುವ ಡೀಪಾಲ್ ಪಬ್ಲಿಕ್ ಶಾಲೆಯಲ್ಲಿ ಡ್ರಗ್ಸ್ ಫ್ರೀ ಮೈಸೂರು ಜಾಗೃತಿ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಎಸ್.ನಾಗೇಶ್, ಫಾದರ್ ಜೋಮೆಸ್, ಹನೀಫ್ ಅಜೀಜ್, ಶಿವಕುಮಾರ್, ಡಾ.ಅಯೂಬ್ ಅಹಮದ್ ಇತರರು ಇದ್ದರು.
ನಗರದ ಸಾತಗಳ್ಳಿಯಲ್ಲಿರುವ ಡೀಪಾಲ್ ಪಬ್ಲಿಕ್ ಶಾಲೆಯಲ್ಲಿ ಡ್ರಗ್ಸ್ ಫ್ರೀ ಮೈಸೂರು ಜಾಗೃತಿ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಎಸ್.ನಾಗೇಶ್, ಫಾದರ್ ಜೋಮೆಸ್, ಹನೀಫ್ ಅಜೀಜ್, ಶಿವಕುಮಾರ್, ಡಾ.ಅಯೂಬ್ ಅಹಮದ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾದಕ ವಸ್ತು ಚಟಕ್ಕೆ ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಹೆಚ್ಚು ಬಲಿಯಾಗುತ್ತಿದ್ದಾರೆ
  • ಜವಾಬ್ದಾರಿಯುತ ನಾಗರಿಕರಾಗಿ ಸಮಾಜದಲ್ಲಿ ಬದುಕುವ ಮಹತ್ವದ ಕುರಿತು ಪ್ರೇರಣೆ ನೀಡಬೇಕು
ಮೈಸೂರು:ಸಾತಗಳ್ಳಿಯಲ್ಲಿರುವ ಡೀಪಾಲ್ ಪಬ್ಲಿಕ್ ಶಾಲೆಯಲ್ಲಿ ಡ್ರಗ್ಸ್ ಫ್ರೀ ಮೈಸೂರು ಜಾಗೃತಿ ಅಭಿಯಾನ ಅಂಗವಾಗಿ ಜಾಥಾ ಆಯೋಜಿಸಲಾಗಿತ್ತು.
ಉದಯಗಿರಿ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮ, ಇರುವ ಕಾನೂನಿನ ಅಡಿಯ ಶಿಕ್ಷೆಗಳ ಕುರಿತು ತಿಳಿಸಿಕೊಟ್ಟರು.
ಮಾದಕ ವಸ್ತು ಚಟಕ್ಕೆ ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಹೆಚ್ಚು ಬಲಿಯಾಗುತ್ತಿದ್ದು, ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ಸಮಾಜದಲ್ಲಿ ಬದುಕುವ ಮಹತ್ವದ ಕುರಿತು ಪ್ರೇರಣೆ ನೀಡಲು ಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದರು.
ಡೀಪಾಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಫಾದರ್ ಜೋಮೆಸ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವ ಇಂತಹ ಕಾರ್ಯಕ್ರಮಗಳಿಗೆ ಸದಾ ಬೆಂಬಲ ವ್ಯಕ್ತಪಡಿಸಿದರು.
ಡ್ರಗ್ಸ್ ಫ್ರೀ ಮೈಸೂರು ಅಭಿಯಾನದ ಸಾಮಾಜಿಕ ಕಾರ್ಯಕರ್ತ ಹನೀಫ್ ಅಜೀಜ್, ಉದಯಗಿರಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ್, ವೈದ್ಯ ಡಾ.ಅಯೂಬ್ ಅಹಮದ್ ಇತರರು ಇದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮಗಳನ್ನು ಮನಮುಟ್ಟುವ ರೀತಿಯಲ್ಲಿ ಬಿಂಬಿಸುವ ಕಿರು ನಾಟಕವನ್ನು ಪ್ರದರ್ಶಿಸಿದರು. ಬ್ಯಾಂಡ್ ವಾದ್ಯದೊಂದಿಗೆ ನಗರದ ವಿವಿಧ ಕಡೆ ಜಾಗೃತಿ ಘೋಷಣೆಗಳು ಹಾಗೂ ಮಾದಕ ವ್ಯಸನ ವಿರೋಧಿ ಫಲಕ ಹಿಡಿದು ವಿದ್ಯಾರ್ಥಿಗಳು ಸಾಗಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net