ಮಹಿಳೆಯರಿಗೆ ಹಕ್ಕುಗಳ ಜಾಗೃತಿ ಅವಶ್ಯ

ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವರದಕ್ಷಿಣೆ ಕಾಯ್ದೆ, ಕಾನೂನು ಸಮಾಜ ಮತ್ತು ಮಹಿಳಾ ಹಕ್ಕುಗಳ ದೃಷ್ಟಿಕೋನ ವಿಶೇಷ ಉಪನ್ಯಾಸ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಆಶಾ, ಪಿ. ಪದ್ಮಾವತಿ , ಶಾಖೀರ್ ಇತರರು ಇದ್ದರು.
ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವರದಕ್ಷಿಣೆ ಕಾಯ್ದೆ, ಕಾನೂನು ಸಮಾಜ ಮತ್ತು ಮಹಿಳಾ ಹಕ್ಕುಗಳ ದೃಷ್ಟಿಕೋನ ವಿಶೇಷ ಉಪನ್ಯಾಸ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಆಶಾ, ಪಿ. ಪದ್ಮಾವತಿ , ಶಾಖೀರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹಾಯಕ ಪ್ರಾಧ್ಯಾಪಕಿ ಆಶಾ ಅಭಿಪ್ರಾಯ
ಬೆಟ್ಟದಪುರ: ಭಾರತ ಸಂವಿಧಾನ ನೀಡಿರುವ ಹಕ್ಕುಗಳನ್ನು ಮಹಿಳೆಯರಿಗೆ ತಿಳಿಸಿ, ಅವರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆಶಾ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ, ಸಮಾಜಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ವರದಕ್ಷಿಣೆ ಕಾಯ್ದೆ, ಕಾನೂನು ಸಮಾಜ ಮತ್ತು ಮಹಿಳಾ ಹಕ್ಕುಗಳ ದೃಷ್ಟಿಕೋನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಟುಂಬದಲ್ಲಿ ಮಹಿಳೆಯರಿಗೆ ಗೌರವ, ತುಚ್ಛ ಭಾವನೆ ಇದ್ದರೆ ಅದು ಆದರ್ಶ ಕುಟುಂಬವಾಗಲು ಸಾಧ್ಯವಿಲ್ಲ. ಲಿಂಗಭೇದ, ಜಾತಿ ಭೇದ, ಮೇಲು ಕೀಳು, ಅಸ್ಪೃಶ್ಯತೆಯಿಂದ ಸಮಾಜ ಬಳಲುತ್ತಿದೆ. ಇದನ್ನು ಅರಿತು ಸರ್ವಸಮಾನತೆಗೆ ಸಂವಿಧಾನ ಇದೆ ಎಂದರು.
ವಿದ್ಯಾರ್ಥಿಗಳಿಗೆ ವರದಕ್ಷಿಣೆ ನಿಷೇಧ ಕಾಯ್ದೆ 1961, ಕಾನೂನು ತಿದ್ದುಪಡಿ ಹಾಗೂ ಶಿಕ್ಷೆಗಳು, ಸಾಮಾಜಿಕ ಪರಿಣಾಮಗಳು, ಮಹಿಳಾ ಹಕ್ಕುಗಳ ಉಲ್ಲಂಘನೆ, ಗೃಹ ಹಿಂಸೆ, ಜಾಗೃತಿ ಮತ್ತು ಶಿಕ್ಷಣದ ಅಗತ್ಯತೆ, ಸರ್ಕಾರದ ಪಾತ್ರ, ಯುವಜನರ ಹೊಣೆಗಾರಿಕೆ ಸೇರಿದಂತೆ ಇತರ ವಿಚಾರಗಳನ್ನು ತಮ್ಮ ಉಪನ್ಯಾಸದ ಮೂಲಕ ತಿಳಿಸಿಕೊಟ್ಟರು.
ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕಿ ಪಿ. ಪದ್ಮಾವತಿ ಮಾತನಾಡಿ, ಮಹಿಳೆಯರಿಗೆ ನೀಡಲಾದ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆಯಾದಾಗ, ಕಾನೂನಿನ ರಕ್ಷಣೆ ಪಡೆಯಬಹುದು. ಸಂವಿಧಾನ ರಚನೆಗೂ ಮುನ್ನ ಮೂಢನಂಬಿಕೆ, ಧಾರ್ಮಿಕ ಸಂಪ್ರದಾಯಗಳು ಮಹಿಳೆಯರ ದೈನಂದಿನ ಚಟುವಟಿಕೆಗಳನ್ನು ರೂಪಿಸುತ್ತಿದ್ದವು ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಮಹಿಳೆಯರಿಗೆ ಮತದಾನದ ಹಕ್ಕು ನೀಡಿಲ್ಲ. ಆದರೆ, ಭಾರತದಲ್ಲಿ ಮಹಿಳೆಯರನ್ನು ಬೇರೆಯಾಗಿ ನೋಡದೆ ಮತದಾನದ ಹಕ್ಕು ನೀಡಿದೆ. ದೇಶದ ಬಹುತ್ವದ ಬೇರುಗಳು ಸಡಿಲವಾಗುತ್ತಿವೆ. ಆದರೆ, ಸಂವಿಧಾನ ಎಂಬ ತಾಯಿ ಬೇರು ಅದನ್ನು ರಕ್ಷಿಸುತ್ತಿದೆ. ಸಂವಿಧಾನಲ್ಲೇನಿದೆ, ಅದು ನಮಗೆ ಏನು ಕೊಟ್ಟಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಐಕ್ಯೂಎ ಸಂಚಾಲಕಿ ಶಾಖೀರ್, ಅಧ್ಯಾಪಕರಾದ ಪ್ರಶಾಂತ್, ರಘುವೀರ್, ಡಾ.ನಫೀಜ್ ಉಲ್ಲಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net