ಮೈಸೂರಿನಲ್ಲಿ ಆನೆದಂತ ಮಾರಾಟಕ್ಕೆ ಯತ್ನ: ನಾಲ್ವರು ಆರೋಪಿಗಳ ಬಂಧನ

 ಮೈಸೂರು ನಗರದಲ್ಲಿ ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಮೈಸೂರು ನಗರದಲ್ಲಿ ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
Published on
ಮೈಸೂರು: ನಗರದಲ್ಲಿ ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ 4 ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ಆನೆ ದಂತಗಳನ್ನು ವಶಕ್ಕೆ ಪಡೆಯಲಾಗಿದೆ.
ಮಹಾರಾಷ್ಟ್ರದ ನಾಗ್ಪುರದ ಕಂದಾಯ ಗುಪ್ತಚರ ನಿರ್ದೇಶನಾಲಯದಿಂದ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಮೂವರು ಆರೋಪಿಗಳು ರಾಮಕೃಷ್ಣನಗರ ಐ ಬ್ಲಾಕ್‌ನ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ ಮಂಗಳವಾರ ಆನೆ ದಂತದ 3 ತುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಸಂದರ್ಭ ಮೂವರು ಆರೋಪಿಗಳನ್ನು ಬಂಧಿಸಿ ಆನೆ ದಂತಗಳನ್ನು ವಶಕ್ಕೆ ಪಡೆಯಲಾಯಿತು. ನಂತರ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 4ನೇ ಆರೋಪಿಯನ್ನು ಕೊಳ್ಳೇಗಾಲದಲ್ಲಿ ಬಂಧಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪರಮೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿನೀತಾ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಮುಹಮ್ಮದ್ ಜೀಷಾನ್, ಉಪ ವಲಯ ಅರಣ್ಯಾಧಿಕಾರಿ ಕನಿಕಾ, ಉಪ ವಲಯ ಅರಣ್ಯಾಧಿಕಾರಿಗಳಾದ ಜಿ.ವಿ.ಮಹೇಶ್, ಬಿ.ಎ. ಸತೀಶ್, ಸಿ.ಸಚಿನ್, ಸಂಜೀವ ಕೆ. ಪಾಟೀಲ, ಗಸ್ತು ಅರಣ್ಯ ಪಾಲಕರಾದ ನಾಗರಾಜ ಎಸ್.ಲಮಾಣಿ, ಸಂತೋಷ್ ನಾಯಕ್, ವಿನಾಯಕ ಎಸ್.ಶಂಖವಾಸಿ, ವಿರೂಪಾಕ್ಷ, ಅರಣ್ಯ ವೀಕ್ಷಕರಾದ ಲಕ್ಷ್ಮೀ ಪಾಟೀಲ್, ಸುನಂದಾ ಶಿವಪ್ಪ ನಿಗಧಿ, ಹಾಗೂ ವಾಹನ ಚಾಲಕರಾದ ಗಣೇಶ್, ಮಂಜುನಾಥ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net