ಇಬ್ಬರು ಬೇಟೆಗಾರರ ಬಂಧನ

Arrest
Arrest
Published on
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ತಂಡ ಬಂಧಿಸಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ನಿವಾಸಿ ಸುರೇಶ್ ಕುವಾರ್(43) ಹಾಗೂ ಮಧುಸೂದನ್(29) ಬಂಧಿತರು. ಬಂಡೀಪುರದ ಕಾಡಂಚಿನಲ್ಲಿರುವ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದ ಬಳಿಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಬೇಟೆಯಾಡಲು ಯತ್ನಿಸಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ ವಿಶೇಷ ಗಸ್ತಿಗೆ ಶುಕ್ರವಾರ ತೆರಳಿದಾಗ ಅನುವಾನಾಸ್ಪದವಾಗಿ ನಿಂತಿದ್ದ ಕಾರು ಮತ್ತು ವ್ಯಕ್ತಿಗಳನ್ನು ಗಮನಿಸಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಪರಿಶೀಲಿಸಿದಾಗ ಕಾರಿನೊಳಗೆ ಡಬಲ್ ಬ್ಯಾರೆಲ್ ಗನ್, ಸಿಂಗಲ್ ಬ್ಯಾರೆಲ್ ಗನ್, 14 ಜೀವಂತ ಕಾಡತೂಸುಗಳು, ಗನ್ ಪೌಡರ್ ಸೇರಿ ಇತರ ವಸ್ತುಗಳೂ ಪತ್ತೆಯಾಗಿದ್ದು, ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net