ಮೈಸೂರಿನಲ್ಲಿ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

ಮೈಸೂರು ನಗರದ ಸಿಎಆರ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ 8ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಬೆಂಗಳೂರು ನಗರದ ಸಂಜಯ ಮಣೋಬಾಯಿ ಅವರಿಗೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಬಿ. ಬೋರಲಿಂಗಯ್ಯ ಸರ್ವೋತ್ತಮ ಪ್ರಶಸ್ತಿ ನೀಡಿದರು. ಸೀಮಾ ಲಾಟ್ಕರ್, ಮಲ್ಲಿಕಾರ್ಜುನ ಬಾಲದಂಡಿ, ಸವಿತಾ ಹೂಗಾರ್, ಚನ್ನಬಸವಣ್ಣ ಹಾಗೂ ಇತರರು ಇದ್ದರು.
ಮೈಸೂರು ನಗರದ ಸಿಎಆರ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ 8ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಬೆಂಗಳೂರು ನಗರದ ಸಂಜಯ ಮಣೋಬಾಯಿ ಅವರಿಗೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಬಿ. ಬೋರಲಿಂಗಯ್ಯ ಸರ್ವೋತ್ತಮ ಪ್ರಶಸ್ತಿ ನೀಡಿದರು. ಸೀಮಾ ಲಾಟ್ಕರ್, ಮಲ್ಲಿಕಾರ್ಜುನ ಬಾಲದಂಡಿ, ಸವಿತಾ ಹೂಗಾರ್, ಚನ್ನಬಸವಣ್ಣ ಹಾಗೂ ಇತರರು ಇದ್ದರು.
Published on
ಮೈಸೂರು: ನಗರದ ಸಿಎಆರ್ ಮೈದಾನದಲ್ಲಿ ನಗರ ಪೊಲೀಸ್ ಹಾಗೂ ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಮಂಗಳ ವಾರ 8ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಆಯೋಜಿಸಲಾಗಿತ್ತು. ಈ ತಂಡದಲ್ಲಿ 9 ಇಂಜಿನಿಯರಿಂಗ್ ಪದವೀಧರರು ಸೇರಿದಂತೆ ಹಲವು ಪ್ರಶಿಕ್ಷಣಾರ್ಥಿಗಳು ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ.
ರಾಜ್ಯದ 18 ಜಿಲ್ಲೆಗಳ 150 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ 10 ತಿಂಗಳ ಬುನಾದಿ ತರಬೇತಿ ನೀಡಲಾಗಿದೆ. ಈ ತಂಡದಲ್ಲಿ 19 ಇಂಜಿನಿಯರಿಂಗ್ ಪದವೀಧರರು, 6 ಸ್ನಾತಕೋತ್ತರ ಪದವೀಧರರು, 110 ಪದವೀಧರರು, 14 ಪಿಯುಸಿ, ಒಬ್ಬರು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿದ್ದಾರೆ. 144 ಅಭ್ಯರ್ಥಿಗಳು ಗ್ರಾಮೀಣ ಹಾಗೂ 6 ಅಭ್ಯರ್ಥಿಗಳು ನಗರ ಪ್ರದೇಶದವರಾಗಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಬಿ. ಬೋರಲಿಂಗಯ್ಯ, ಪ್ರಸ್ತುತ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇದಕ್ಕೆ ಪೂರಕವಾಗಿ ತನಿಖೆಯ ಸ್ವರೂಪವೂ ಬದಲಾಗುತ್ತಿದೆ. ತನಿಖೆಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಪೊಲೀಸ್ ಹುದ್ದೆಗೆ ಆಯ್ಕೆಯಾದವರು ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಬೇಕು ಹಾಗೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನ ಹೊಂದಿರುವವರಿಗೆ ಎಲ್ಲ ಕಡೆಗಳಲ್ಲೂ ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಪೊಲೀಸ್ ಠಾಣೆಗಳಿಗೆ ನೊಂದವರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಅವರೊಂದಿಗೆ ಸಂಯಮದಿಂದ ವರ್ತಿಸಿ ಅವರ ಸಮಸ್ಯೆ ಗಳನ್ನು ಪರಿಹರಿಸಬೇಕು. ಪೊಲೀಸ್ ಹುದ್ದೆಗೆ ಅಯ್ಕೆಯಾದವರು ಇದನ್ನು ಒಂದು ಸರ್ಕಾರಿ ಉದ್ಯೋಗ ಎಂದು ಮಾತ್ರ ಭಾವಿಸಬಾರದು. ಈ ಸಮವಸ್ತ್ರ ನಿಮಗೆ ಸಾಕಷ್ಟು ಜವಾ ಬ್ದಾರಿಗಳನ್ನು ನೀಡುತ್ತದೆ. ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು. ಆ ಮೂಲಕ ಇಲಾಖೆಗೆ ಉತ್ತಮ ಹೆಸರು ತರಬೇಕು ಎಂದು ಕರೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವಾಗ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಸ್ತನ್ನು ಜೀವನಪೂರ್ತಿ ಕಾಯ್ದುಕೊಳ್ಳಬೇಕು. 10 ತಿಂಗಳಲ್ಲಿ ನಿಮಗೆ ಉತ್ತಮ ತರಬೇತಿ ನೀಡಲಾಗಿದ್ದು, ಇದೀಗ ನೀವು ಹೊಂದಿರುವ ಉತ್ತಮ ಫಿಟ್ನೆಸ್‌ಅನ್ನು ಸದಾ ಕಾಯ್ದುಕೊಳ್ಳಬೇಕು. ಫಿಟ್ನೆಸ್ ಕಾಯ್ದುಕೊಳ್ಳಲು ದಿನಕ್ಕೆ ಕನಿಷ್ಠ 1 ಗಂಟೆಯಾದರೂ ಮೀಸಲು ಇಡಬೇಕು. ಇದು ಕರ್ತವ್ಯಕ್ಕೆ ಮಾತ್ರವಲ್ಲ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂದು ಸಲಹೆ ನೀಡಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸೆಸ್ಕ್ ಎಸ್ಪಿ ಸವಿತಾ ಹೂಗಾರ್, ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕ ಚನ್ನಬಸವಣ್ಣ, ಉಪ ಪೊಲೀಸ್ ಆಯುಕ್ತರಾದ ಕೆ.ಎಸ್. ಸುಂದರ್‌ರಾಜ್, ಡಾ.ಹರ್ಷ ಪ್ರಿಯಂವದಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಸಿದ್ದನಗೌಡ ವೈ. ಪಾಟೀಲ ಹಾಗೂ ಇತರರು ಇದ್ದರು.
ಸಂಜಯಗೆ ಸರ್ವೋತ್ತಮ ಪ್ರಶಸ್ತಿ : ನಗರ ಪೊಲೀಸ್ ಹಾಗೂ ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಆಯೋಜಿಸಿದ್ದ 8ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಬೆಂಗಳೂರು ನಗರದ ಸಂಜಯ ಮಣೋಬಾಯಿ ಸರ್ವೋತ್ತಮ ಪ್ರಶಸ್ತಿ ಪಡೆದರು.
ಒಳಾಂಗಣ ವಿಭಾಗದಲ್ಲಿ ಬೆಂಗಳೂರು ನಗರದ ಸಂಜಯ ಮಣೋಬಾಯಿ (ಪ್ರಥಮ), ಎಲ್.ಎಂ. ಶಿವರಾಜ (ದ್ವಿತೀಯ), ಕಲಬುರಗಿಯ ರವಿ (ತೃತೀಯ), ಹೊರಾಂಗಣ ವಿಭಾಗದಲ್ಲಿ ಬೆಂಗಳೂರು ನಗರದ ಶಿವರಾಜ ಸಿದ್ದರಾಮ ರೇವತಗಾಂವ (ಪ್ರಥಮ), ಬೆಳಗಾವಿಯ ಆಕಾಶ ದೇಸಾಯಿ (ದ್ವಿತೀಯ), ಕಲಬುರಗಿಯ ಜುನೇದ್ ಪಾಷ (ತೃತೀಯ), ರೈಫಲ್ ಶೂಟಿಂಗ್‌ನಲ್ಲಿ ಬೆಂಗಳೂರು ನಗರದ ಎ.ವೈ. ರಾಘವೇಂದ್ರ ಪೈ (ಪ್ರಥಮ), ಭೀಮರಾವ ಕಾಳೇಲಿ (ದ್ವಿತೀಯ), ಶಿವರಾಜ ಸಿದ್ದರಾಮ ರೇವತಗಾಂವ (ತೃತೀಯ) ಪ್ರಶಸ್ತಿ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net