ಮೈಸೂರಿನ ಇಂಜಿನಿಯರ್ ದಂಪತಿಗೆ 1.04 ಕೋಟಿ ರೂ.ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ಕಡಿಮೆ ಬೆಲೆಗೆ ನಿವೇಶನ ಹಾಗೂ ಭೂಮಿ ಕೊಡಿಸುವುದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ ದಂಪತಿಯಿಂದ ಬರೋಬ್ಬರಿ 1.04 ಕೋಟಿ ರೂ. ಪಡೆದು ವಂಚಿಸಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.
ಸಂತ್ರಸ್ತೆ ಬಿ. ಅಶ್ವಿನಿ ನೀಡಿದ ದೂರಿನನ್ವಯ ಕುವೆಂಪುನಗರದ ನಿವಾಸಿಗಳಾದ ಎಂ.ಪೂಜಾ ಹಾಗೂ ಆಕೆಯ ಪತಿ ಎಂ. ಅಭಿಲಾಷ್ ವಿರುದ್ಧ ಸರಸ್ವತಿಪುರಂ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ತಮ್ಮನ್ನು ರಿಯಲ್ ಎಸ್ಟೇಟ್ ಹಾಗೂ ಇತರ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡಿರುವುದಾಗಿ ನಂಬಿಸಿ, 2025ರ ಅಕ್ಟೋಬರ್‌ನಿಂದ 2026ರ ಮಾರ್ಚ್ ನಡುವೆ ಹಂತ-ಹಂತವಾಗಿ 1.04 ಕೋಟಿ ರೂ.ಹಣ ಪಡೆದಿದ್ದರು.
ಸೈಟು ಅಥವಾ ಹಣ ವಾಪಸ್ ಕೇಳಿದಾಗ, ಬ್ಯಾಂಕ್ ಖಾತೆ ಫ್ರೀಜ್ ಆಗಿದೆ ಎಂದು ಸುಳ್ಳು ಪತ್ರ ಹಾಗೂ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ನಕಲಿ ಸಾಲ ಮಂಜೂರಾತಿ ಪತ್ರ ತೋರಿಸಿ ಕಾಲಹರಣ ಮಾಡಿದ್ದರು. ವಂಚನೆ ಬೆಳಕಿಗೆ ಬಂದು ಸಂತ್ರಸ್ತರು ಹಣಕ್ಕೆ ಪಟ್ಟು ಹಿಡಿದಾಗ ಆರೋಪಿಗಳು ಹಣ ನೀಡಲು ನಿರಾಕರಿಸಿ, ಸುಳ್ಳು ಕೇಸು ಹಾಕುವುದಾಗಿ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net