ಬಿಳಿಗೆರೆಯಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆ

ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮನ್ನು ನ್ಯಾಯಾಧೀಶೆ ಆರ್.ರಮ್ಯಾ ಉದ್ಘಾಟಿಸಿದರು.  ನಾಗರಾಜಪ್ಪ, ರಾಜೇಂದ್ರಪ್ರಸಾದ್ ಇತರರು ಇದ್ದರು.
ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮನ್ನು ನ್ಯಾಯಾಧೀಶೆ ಆರ್.ರಮ್ಯಾ ಉದ್ಘಾಟಿಸಿದರು. ನಾಗರಾಜಪ್ಪ, ರಾಜೇಂದ್ರಪ್ರಸಾದ್ ಇತರರು ಇದ್ದರು.
Published on
ಕಲ್ಕುಂದ : ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಬೇಡ್ಕರ್ ಅವರ 135ನೇ ಜನ್ಮ ದಿನ ಆಚರಿಸಲಾಯಿತು.
ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಪಕ್ಕದ ಕಿರುಗುಂದ ಗ್ರಾಮದ ಆರ್.ರಮ್ಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಒಂದು ಸಮುದಾಯದ ಪರ ಹೋರಾಟ ಮಾಡದೆ ಭಾರತದ ಎಲ್ಲ ಪ್ರಜೆಗಳ ಅಭಿವೃದ್ಧಿಗಾಗಿ ಶ್ರಮಿಸಿದರು. ಅಂಬೇಡ್ಕರ್ ಕೇವಲ ದಲಿತ ಸಮುದಾಯದ ನಾಯಕರಾಗಿರದೆ ಎಲ್ಲ ಸಮಾಜದ ನಾಯಕರಾಗಿದರು ಎಲ್ಲ ಸಮುದಾಯದ ಶೋಷಿತ ಜನರ ಪರವಾಗಿ ಹೋರಾಟ ಮಾಡಿದ ಮಹಾನ್ ಮಾನವತಾವಾದಿ. ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಸಮಾಜದಲ್ಲಿ ಸಮಾನತೆ ಇರಬೇಕು. ಪ್ರತಿಯೊಬ್ಬರನ್ನು ಸಮಾನತೆಯಿಂದ ಕಾಣಬೇಕು. ಕಾನೂನು ಬಡವ ಬಲ್ಲಿದ ಭೇದ ಇಲ್ಲದೆ ಎಲ್ಲರಿಗೂ ಒಂದೇ ಎಂಬುದು ಡಾ.ಅಂಬೇಡ್ಕರ್ ಅವರ ಆಶಯವಾಗಿತ್ತು. ನಾನು ಈ ಚಿಕ್ಕ ವಯಸ್ಸಿಗೆ ಈ ಹುದ್ದೆಗೆ ಬರಲು ಅಂಬೇಡ್ಕರ್ ಅವರ ಸಂವಿಧಾನದ ಕಾನೂನು ಕಾರಣ ಎಂದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶೆ ಆರ್. ರಮ್ಯಾ, ಬಿಳಿಗೆರೆ ಠಾಣೆಯ ಎಎಸೈ ನಾಗರಾಜಪ್ಪ, ಮುಖಂಡರಾದ ರಾಜೇಂದ್ರಪ್ರಸಾದ್, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net