ನೈತಿಕ ಸಮಾಜ ರೂಪಿಸಲು ಶ್ರಮಿಸಿದ ಅಂಬೇಡ್ಕರ್ : ಪ್ರೊ.ರಹಮತ್ ತರೀಕೆರೆ

 ಜಯಲಕ್ಷ್ಮೀಪುರಂನ ಸಂತ ಜೋಸೆಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಅಂಬೇಡ್ಕರ್-ನೈತಿಕತೆಯ ಪರಿಕಲ್ಪನೆ’ ವಿಷಯದ ಕುರಿತು  ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಪ್ರೊ.ರಹಮತ್ ತರೀಕೆರೆ, ಡಾ.ಪ್ರಿಯಾ ಮ್ಯಾಥ್ಯೂ, ಪ್ರೊ.ಜೆ. ಸೋಮಶೇಖರ್ ಹಾಗೂ ಇತರರು ಇದ್ದರು.
ಜಯಲಕ್ಷ್ಮೀಪುರಂನ ಸಂತ ಜೋಸೆಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಅಂಬೇಡ್ಕರ್-ನೈತಿಕತೆಯ ಪರಿಕಲ್ಪನೆ’ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಪ್ರೊ.ರಹಮತ್ ತರೀಕೆರೆ, ಡಾ.ಪ್ರಿಯಾ ಮ್ಯಾಥ್ಯೂ, ಪ್ರೊ.ಜೆ. ಸೋಮಶೇಖರ್ ಹಾಗೂ ಇತರರು ಇದ್ದರು.
Published on
ಮೈಸೂರು: ಭಾರತ ಸಮಾಜವನ್ನು ನೈತಿಕ ಸಮಾಜವಾಗಿ ರೂಪಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸಾಕಷ್ಟು ಶ್ರಮಿಸಿದರು ಎಂದು ಮಾನಸಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ ಹೇಳಿದರು.
ಮೈಸೂರು ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ಬುಧವಾರ ಜಯಲಕ್ಷ್ಮೀಪುರಂನ ಸಂತ ಜೋಸೆಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಅಂಬೇಡ್ಕರ್-ನೈತಿಕತೆಯ ಪರಿಕಲ್ಪನೆ’ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಭಾರತದ ಪ್ರಜಾಪ್ರಭುತ್ವವನ್ನು ನೈತಿಕ ಪ್ರಜಾಪ್ರಭುತ್ವವಾಗಿ ರೂಪಿಸಲು ಹಾಗೂ ಮನುಷ್ಯತ್ವದಿಂದ ಕೂಡಿದ ಸಮಾಜ ನಿರ್ಮಿಸಲು ಅಂಬೇಡ್ಕರ್ ಸಾಕಷ್ಟು ಪ್ರಯತ್ನಪಟ್ಟರು ಎಂದರು.
ಪ್ರಜಾಪ್ರಭುತ್ವದಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳು ದೊರೆಯುತ್ತಿಲ್ಲ. ಹೀಗಾಗಿ ಇದನ್ನು ನೈತಿಕತೆಯಿಂದ ಕೂಡಿದ ಪ್ರಜಾಪ್ರಭುತ್ವ ಎಂದು ಕರೆಯಲು ಸಾಧ್ಯವೇ. ವಿಧಾನಸಭೆ, ಲೋಕಸಭೆಯಲ್ಲಿ ಹೆಣ್ಣು ಮಕ್ಕಳಿಗೆ ಶೇ.50 ರಷ್ಟು ಪ್ರಾತಿನಿಧ್ಯ ದೊರೆಯಬೇಕು. ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರೆಯಬೇಕು ಎಂದು ಹೇಳಿದರು.
ಬುದ್ಧನ ಕಾಲದಿಂದಲೂ ಅಸ್ಪಶ್ಯತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಸಮಾಜ ಸುಧಾರಕರು ಸಮ ಸಮಾಜ ನಿರ್ಮಾಣಕ್ಕೆ ಇಂದಿಗೂ ಶ್ರಮಿಸುತ್ತಲೇ ಇದ್ದಾರೆ. ಇಂದಿಗೂ ಅಮೆರಿಕದಲ್ಲಿ ವರ್ಣಬೇದ ನೀತಿ ಇದೆ. ನಮ್ಮಲ್ಲಿ ಅಸ್ಪಶ್ಯತೆ ಇದೆ. ಬುದ್ಧ, ಅಂಬೇಡ್ಕರ್ ಸೇರಿದಂತೆ ಹಲವರು ಸಮಾಜ ಸುಧಾರಣೆಗೆ ನಾಲ್ಕು ಹೆಜ್ಜೆ ಹಾಕಿದ್ದಾರೆ, ನಾವು ಸಹ ಅವರಂತೆ ಹೆಜ್ಜೆ ಹಾಕಬೇಕು ಎಂದರು.
ವೇದಿಕೆಯಲ್ಲಿ ಸಂತ ಜೋಸೆಫ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಪ್ರಿಯಾ ಮ್ಯಾಥ್ಯೂ, ಡಾ.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ.ಜೆ. ಸೋಮಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net