2017ರಲ್ಲಿ ಹನಗೋಡು ವ್ಯಾಪ್ತಿಯ ಶೆಟ್ಟಳ್ಳಿ ಲಕ್ಕಪಟ್ಟಣ ಪುನರ್ವಸತಿ ಕೇಂದ್ರದ ಸಮೀಪದ ಸರ್ವೇ ನಂ.12ರಲ್ಲಿ 10 ಎಕರೆ ಭೂಮಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತು. ಅನುಸೂಚಿತ ಜಾತಿ, ಜನಾಂಗ ಮತ್ತು ಆದಿವಾಸಿ ಬುಡಕಟ್ಟು ಸಮುದಾಯವೇ ಹೆಚ್ಚಾಗಿರುವ ಈ ಭಾಗದಲ್ಲಿ ಅಂಬೇಡ್ಕರ್ ವಸತಿ ಶಾಲೆ ಅತ್ಯವಶ್ಯವಿದೆ. ಹೀಗಿದ್ದರೂ ಇದೀಗ ಶಾಲೆಯನ್ನು ಧರ್ಮಾಪುರ ಗ್ರಾಮಕ್ಕೆ ವರ್ಗಾಯಿಸಲಾಗಿದೆ. ಇದು ಶೋಷಿತ ಸಮಾಜವನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಕೃತ್ಯವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.