ಮೈಮುಲ್ ಆಡಳಿತ ವಿಭಾಗದ ಪ್ರಭಾರ ವ್ಯವಸ್ಥಾಪಕಿ ಸೌಮ್ಯಾ ಮಾತನಾಡಿ, 12ನೇ ಶತಮಾನದ ಬಗ್ಗೆ ಕೇಳಿದ್ದೇವೆ, ನೋಡಿಲ್ಲ. ಆದರೆ, ಈ ಶತಮಾನದಲ್ಲಿಯೂ ಗ್ರಾಮೀಣ ಭಾಗದಲ್ಲಿ ಜಾತಿ ತಾರತಮ್ಯವಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಈ ಬದಲಾವಣೆ ಸಾಧ್ಯವಾಗಿದೆ. ಸಂವಿಧಾನದ ಬಗ್ಗೆ ತಿಳಿಸಿ ಮಕ್ಕಳನ್ನು ಜಾತ್ಯತೀತರನ್ನಾಗಿ ಬೆಳೆಸೋಣ ಎಂದರು.