

ಮೈಸೂರು:ಗುತ್ತಿಗೆದಾರರವಿಳಂಬ ಧೋರಣೆಯಿಂದಾಗಿ ಈ ಬಾರಿಯೂಡಾ.ಬಿ.ಆರ್.ಅಂಬೇಡ್ಕರ್ಜಯಂತಿಗೂ ಅಂಬೇಡ್ಕರ್ ಭವನದಉದ್ಘಾಟನೆ ಭಾಗ್ಯ ಇಲ್ಲದಂತಾಗಿದೆ.
ಕಳೆದ 14ವರ್ಷಗಳಿಂದ ಕುಂಟುತ್ತಾಸಾಗಿರುವ ಭವನ, ಪೂರ್ಣಗೊಳಿಸುವಂತೆಸರ್ಕಾರ ತಿಳಿಸಿದ್ದರೂ ಅನುದಾನಬಿಡುಗಡೆ ವಿಳಂಬ ಹಾಗೂ ಗುತ್ತಿಗೆದಾರನಿಗದಿಯಂತೆ ಕಾಮಗಾರಿ ನಡೆಸದೆಇದ್ದುದರಿಂದ ನಿಗದಿ ವೇಳೆಗೆಪೂರ್ಣಗೊಂಡಿಲ್ಲ.
2012-13ರಲ್ಲಿಪ್ರಾರಂಭವಾದ ಭವನ ನಿರ್ಮಾಣಕಾಮಗಾರಿಗೆ ಈಗಾಗಲೇ ಮೊದಲ ಹಂತದಲ್ಲಿ20.66 ಕೋಟಿ ರೂ.ವೆಚ್ಚವಾಗಿದ್ದು,ಅದರಲ್ಲಿ ಮೈಸೂರುಅಭಿವೃದ್ಧಿ ಪ್ರಾಧಿಕಾರದಿಂದ10.56 ಕೋಟಿ ರೂ., ಸಮಾಜಕಲ್ಯಾಣ ಇಲಾಖೆಯಿಂದ 6.50 ಕೋಟಿರೂ.ನಗರಪಾಲಿಕೆಯಿಂದ3 ಕೋಟಿ ರೂ.ಹಾಗೂಜಿಪಂನಿಂದ 50 ಲಕ್ಷರೂ.ನೀಡಲಾಗಿತ್ತು.
ನಂತರ ಮೈಸೂರುಅಭಿವೃದ್ಧಿ ಪ್ರಾಧಿಕಾರದಿಂದ23.83 ಕೋಟಿ ರೂ.ವೆಚ್ಚದಲ್ಲಿವಾಲ್ ಪ್ಯಾನೆಲಿಂಗ್, ಅಕೋಸ್ಟಿಕ್ಮತ್ತು ವಾಲ್ಸ್ ಸೀಲಿಂಗ್,ಆವರಣದಲ್ಲಿನ ರಸ್ತೆಅಭಿವೃದ್ಧಿ, ಯುಜಿಡಿಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆ,ನೆಲಹಾಸು, ವೇದಿಕೆ,ಒಳಾಂಗಣ ವಿದ್ಯುದ್ದೀಕರಣ,ಹವಾನಿಯಂತ್ರಿತ ವ್ಯವಸ್ಥೆ,ಧ್ವನಿ ವರ್ಧಕ ವ್ಯವಸ್ಥೆ,1,800 ಜನರಿಗೆ ಆಸನ ವ್ಯವಸ್ಥೆ,ಶೌಚಗೃಹ ನಿರ್ಮಾಣ ಸೇರಿದಂತೆಎರಡನೇ ಹಂತದ ಕಾಮಗಾರಿಗಳುನಡೆಯುತ್ತಿದ್ದು ಇನ್ನೂ ಪೂರ್ಣವಾಗಿಲ್ಲ.
2025ರ ಸೆ.20ರಂದುಎರಡನೇ ಹಂತದ ಕಾಮಗಾರಿಗೆ ಚಾಲನೆನೀಡಿದ್ದ ಜಿಲ್ಲಾ ಉಸ್ತುವಾರಿಸಚಿವ ಡಾ.ಎಚ್.ಸಿ.ಮಹದೇವಪ್ಪ,ನಿಧಾನಗತಿಯಲ್ಲಿಸಾಗುತ್ತಿರುವ ಅಂಬೇಡ್ಕರ್ ಭವನನಿರ್ಮಾಣ ಕಾಮಗಾರಿಯನ್ನು ಆಗಸ್ಟ್15ರೊಳಗೆ ಪೂರ್ಣಗೊಳಿಸಬೇಕುಎಂದು ತಾಕೀಕಿ ಮಾಡಿದ್ದರು.ಆದರೂ ಭವನ ಪೂರ್ಣಗೊಳ್ಳದೆಇರುವುದರಿಂದ ಈ ಆಗಸ್ಟ್ ವೇಳೆಗೆಪೂರ್ಣಗೊಳ್ಳಲೇ ಬೇಕು ಎಂದುನಿರ್ದೇಶನ ನೀಡಿದ್ದಾರೆ.
ನೋಟಿಸ್ನೀಡಲಾಗಿದೆ
ಗುತ್ತಿಗೆದಾರವಿಳಂಬದಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ.ಈ ಹಿನ್ನೆಲೆಯಲ್ಲಿಗುತ್ತಿಗೆದಾರರಿಗೆ ನೋಟಿಸ್ನೀಡಲಾಗಿದ್ದು, ಶೀಘ್ರವೇಪೂರ್ಣಗೊಳಿಸುವಂತೆ ಸೂಚನೆನೀಡಲಾಗಿದೆ.
ಕೆ.ಆರ್.ರಕ್ಷಿತ್
ಆಯುಕ್ತರು,ಎಂಡಿಎ