ಶೂನ್ಯ ರೆಫರಲ್ ಶುಲ್ಕದಿಂದ ಶೇ.70ರಷ್ಟು ಉಳಿತಾಯ

Amazon
Amazon
Published on

ಪ್ರಮುಖ ಮುಖ್ಯಾಂಶಗಳು

  • ಮಾರಾಟಗಾರರಿಗೆ ಅಮೆಜಾನ್ ಉಡುಗೊರೆ: ಅಮೆಜಾನ್ ನಿಂದ 12.5 ಕೋಟಿ ಉತ್ಪನ್ನಗಳಿಗೆ
ಅಮೆಜಾನ್ ಇಂಡಿಯಾ ಇಂದು ದೇಶಾದ್ಯಂತ ಲಕ್ಷಾಂತರ ಮಾರಾಟಗಾರರಿಗೆ ವೇಗ ವರ್ಧಿಸುವ ಗುರಿ ಹೊಂದಿದ ಮಹತ್ತರವಾದ ಶುಲ್ಕ ಕಡಿತವನ್ನು ಪ್ರಕಟಿಸಿದೆ. ಹಿಂದಿನ ವರ್ಷದ ಶುಲ್ಕ ಪರಿಷ್ಕರಣೆಯನ್ನು ಮುಂದುವರಿಸಿದ ಕಂಪನಿಯು 2025ರಲ್ಲಿ 1.2 ಕೋಟಿ ಉತ್ಪನ್ನಗಳಿಗೆ 10 ಪಟ್ಟು ಹೆಚ್ಚಿಸಿ 1,800+ವಿಭಾಗಗಳಲ್ಲಿ ₹1,000 ಕ್ಕೂ ಕಡಿಮೆ ಬೆಲೆ ಹೊಂದಿದ 12.5 ಕೋಟಿ ಉತ್ಪನ್ನಗಳಿಗೆ ಶೂನ್ಯ ರೆಫರಲ್ ಶುಲ್ಕ ವಿಸ್ತರಿಸಿದೆ. ಇದರೊಂದಿಗೆ ಅಮೆಜಾನ್ ₹300ಕ್ಕಿಂತ ಕಡಿಮೆ ಬೆಲೆ ಹೊಂದಿದ 20%ಕ್ಕೂ ಹೆಚ್ಚು ಉತ್ಪನ್ನಗಳಿಗೆ ಈಸಿ ಶಿಪ್ ಶುಲ್ಕ ಕಡಿತಗೊಳಿಸಿದೆ. ಈಸಿ ಶಿಪ್ ಮಾರಾಟಗಾರರಿಗೆ ಅವರದೇ ಸ್ಥಳದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ, ಅಮೆಜಾನ್ ಪಿಕಪ್ ಮತ್ತು ಡೆಲಿವರಿ ನಿರ್ವಹಿಸುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡಿ ಮಾರಾಟ ಪ್ರಾರಂಭಿಸಲು ಅಥವಾ ವಿಸ್ತರಿಸಲು ಆದ್ಯತೆಯ ಆಯ್ಕೆಯಾಗಿಸುತ್ತದೆ. ಒಂದು ಬಾಕ್ಸ್ ನಲ್ಲಿ ಹಲವು ಯೂನಿಟ್ ಗಳನ್ನು ಕಳುಹಿಸುವ ಮಾರಾಟಗಾರರು ಎರಡನೆ ಯೂನಿಟ್ ಗೆ ಮಾರಾಟದ ಶುಲ್ಕದಲ್ಲಿ ಶೇ.90%+ ಉಳಿತಾಯ ಪಡೆಯಬಹುದು, ಇದರಿಂದ ಒಟ್ಟಾರೆ ಉಳಿತಾಯ ಸುಧಾರಿಸುತ್ತದೆ. ಪರಿಷ್ಕರಿಸಿದ ಶುಲ್ಕವು ಮಾರ್ಚ್ 16, 2026ರಿಂದ ಚಾಲ್ತಿಗೆ ಬರುತ್ತದೆ.
ಅಮೆಜಾನ್ ಇಂಡಿಯಾದ ಸೆಲ್ಲಿಂಗ್ ಪಾರ್ಟ್ನರ್ ಸರ್ವೀಸಸ್ ನಿರ್ದೇಶಕ ಅಮಿತ್ ನಂದಾ, “ಹಿಂದಿನ ವರ್ಷದ ಶುಲ್ಕ ಕಡಿತಗಳಿಗೆ ದೊರೆತ ಬಲವಾದ ಬೆಂಬಲದಿಂದ ನಾವು ಅದೇ ಬದ್ಧತೆಯನ್ನು ಮತ್ತಷ್ಟು ಹೆಚ್ಚಿನ ಮಾರಾಟಗಾರರಿಗೆ ವಿಸ್ತರಿಸುತ್ತಿದ್ದೇವೆ. ಈ ಕ್ರಮವನ್ನು ಅಮೆಜಾನ್ ನಲ್ಲಿ ಟೈಯರ್ 2 ಮತ್ತು ಟೈಯರ್ 3 ನಗರಗಳ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಲಾಭದಾಯಕ ಮತ್ತು ಸರಳವಾಗಿ ಮಾರಾಟ ಮಾಡಲು ವಿನ್ಯಾಸಗೊಳಿಸಲಾಗಿದೆ. 1,800+ ವಿಭಾಗಗಳಲ್ಲಿ 12.5 ಕೋಟಿ ಉತ್ಪನ್ನಗಳಿಗೆ ರೆಫರಲ್ ಶುಲ್ಕವನ್ನು ನಿವಾರಿಸುವ ಮತ್ತು ಲಾಜಿಸ್ಟಿಕ್ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಮಾರಾಟಗಾರರು ಶುಲ್ಕದಲ್ಲಿ ಶೇ.70ರಷ್ಟು ಉಳಿತಾಯ ಮಾಡಬಹುದು. ಒಟ್ಟಿಗೆ ಈ ಬದಲಾವಣೆಗಳು ಮಾರಾಟಗಾರರು ಮತ್ತು ಗ್ರಾಹಕರಿಗೆ ಬೆಂಬಲಿಸುವ ಕಾರ್ಯಾಚರಣೆಗಳ ದಕ್ಷತೆಗಳನ್ನು ಮುಂದುವರಿಸುವ ಪ್ರಯತ್ನಗಳನ್ನು ಬಿಂಬಿಸುತ್ತವೆ” ಎಂದರು.
ಕಳೆದ ವರ್ಷದ ಶುಲ್ಕ ಬದಲಾವಣೆಗಳ ಪ್ರಯೋಜನ ಕುರಿತು ಜಾಕ್ ಫ್ರೂಟ್365 ಸಂಸ್ಥಾಪಕ ಮತ್ತು ಅಮೆಜಾನ್.ಇನ್ ನಲ್ಲಿ ಮಾರಾಟಗಾರ ಜೇಮ್ಸ್ ಜೋಸೆಫ್, “ಜಾಕ್ ಫ್ರೂಟ್365 ಹಸಿರು ಹಲಸಿನ ಹಿಟ್ಟು ರಕ್ತದ ಸಕ್ಕರೆ ನಿಯಂತ್ರಣಕ್ಕೆ ಹೊಸ ಉತ್ಪನ್ನವಾಗಿದ್ದು ಅದನ್ನು ಪ್ರತಿನಿತ್ಯ ದೈನಂದಿನ ರೊಟ್ಟಿಯ ಮೂಲಕ ಸೇವಿಸಬಹಹುದು, ಹೊಸ ಗ್ರಾಹಕರನ್ನು ಪಡೆಯಲು ಕಡಿಮೆ ಬೆಲೆಯಲ್ಲಿ ನೀಡುವುದು ಬಹಳ ಮುಖ್ಯವಾಗಿದ್ದು ಅದು ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ದೀರ್ಘಾವಧಿ ಚಂದಾದಾರಿಕೆ ನೀಡುತ್ತದೆ. ಅಮೆಜಾನ್ ಕಳೆದ ವರ್ಷ ₹300ಕ್ಕಿಂತ ಕಡಿಮೆಗೆ ಶುಲ್ಕ ಇಳಿಸಿದಾಗ ನಮ್ಮ ಪ್ರಾಯೋಗಿಕ ಆರ್ಡರ್ ಗಳು ನಮ್ಮ ಚಂದಾದಾರಿಕೆ ಆರ್ಡರ್ ಗಳಂತೆಯೇ ಲಾಭದಾಯಕವಾದವು ಮತ್ತು ಅದು ಮೊಟ್ಟಮೊದಲ ಬಾರಿಗೆ ನಮ್ಮ ಸ್ಟಾರ್ಟಪ್ ಅನ್ನು ಇಬಿಐಟಿಡಿಎ ಸಕಾರಾತ್ಮಕವಾಗಿಸಲು ನೆರವಾಯಿತು! ನಮ್ಮಂತಹ ಉದ್ಯಮಗಳಿಗೆ ಇದು ಶುಲ್ಕ ಬದಲಾವಣೆಯಲ್ಲ- ಅದು ನಮ್ಮಂತಹ ಮೊದಲ ಸಲದ ಬಳಕೆದಾರರನ್ನು ತೀವ್ರವಾಗಿ ಹೆಚ್ಚಿಸಲು ನೆರವಾಯಿತು ಮತ್ತು ರಿವ್ಯೂಗಳು 14000 ಮೀರಿದವು” ಎಂದರು.
ಅಮೆಜಾನ್.ಇನ್ ನಲ್ಲಿ ಮಾರಾಟಗಾರರು ಮೂರು ಫುಲ್ ಫಿಲ್ಮೆಂಟ್ ಆಯ್ಕೆಗಳಿಂದ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು: ಗ್ರಾಹಕರಿಗೆ ತಮಗೇ ನೇರವಾಗಿ ಆರ್ಡರ್ ಗಳನ್ನು ಕಳುಹಿಸಿಕೊಳ್ಳುವುದು; ಈಸಿ ಶಿಪ್ ಬಳಸುವುದು (ಇ.ಎಸ್.) ಇದರಲ್ಲಿ ಅವರು ಅವರ ಸ್ಥಳದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಬಹುದು ಮತ್ತು ಅಮೆಜಾನ್ ಪಿಕಪ್ ಮತ್ತು ಡೆಲಿವರಿಗೆ ನೆರವಾಗುತ್ತದೆ; ಫುಲ್ ಫಿಲ್ಡ್ ಬೈ ಅಮೆಜಾನ್ (ಎಫ್.ಬಿ.ಎ/ಎಫ್.ಸಿ.) ಆಯ್ಕೆ ಮಾಡಿಕೊಳ್ಳಬಹುದು, ಇದರಲ್ಲಿ ಅಮೆಜಾನ್ ಸಂಗ್ರಹ, ಪ್ಯಾಕಿಂಗ್ ಮತ್ತು ಶಿಪ್ಪಿಂಗ್ ಅನ್ನು ಅವರ ಪರವಾಗಿ ನಿರ್ವಹಿಸುತ್ತದೆ.
ಮಾರ್ಚ್ 16, 2026ರಿಂದ ಸಂಭವನೀಯ ಪ್ರತಿ ಯೂನಿಟ್ ಉಳಿತಾಯದ ಉದಾಹರಣೆಗಳು ಇಲ್ಲಿವೆ:
ಫ್ಯಾಷನ್ ಜ್ಯೂವೆಲ್ಲರಿ ನೆಕ್ಲೇಸ್ ಪೂರೈಸುವ ಮಾರಾಟಗಾರರೊಬ್ಬರು ₹999 ಬೆಲೆ ನಿಗದಿಪಡಿಸಿದ್ದು ಈಸಿ ಶಿಪ್ (ಇ.ಎಸ್.) ಚಾನೆಲ್ ಮೂಲಕ ಪ್ರತಿ ಯೂನಿಟ್ ಗೆ ಉಳಿತಾಯ ಮಾಡುತ್ತಾರೆ- ಇದು ಒಟ್ಟು ಶುಲ್ಕದಲ್ಲಿ 69% ಕಡಿತವಾಗಿದೆ. ಒಟ್ಟು ಶುಲ್ಕವು ಪ್ರತಿ ಯೂನಿಟ್ ಗೆ ₹324ರಿಂದ ಕ್ಕೆ ₹100 ಇಳಿಯುತ್ತದೆ (500ಗ್ರಾಂಗಿಂತ ಕಡಿಮೆ ಉತ್ಪನ್ನದ ತೂಕ).
ಫುಲ್ ಫಿಲ್ಡ್ ಬೈ ಅಮೆಜಾನ್ (ಎಫ್.ಸಿ.) ಚಾನೆಲ್ ನಲ್ಲಿ ₹798 ಬೆಲೆ ಹೊಂದಿರುವ ಇಯರ್ ಫೋನ್ ಗಳ ಮಾರಾಟಗಾರ ಪ್ರತಿ ಯೂನಿಟ್ ಗೆ ₹139 ಉಳಿತಾಯ ಮಾಡುತ್ತಾನೆ- ಒಟ್ಟು ಶುಲ್ಕದಲ್ಲಿ ಶೇ.56 ಕಡಿತ. ಒಟ್ಟು ಶುಲ್ಕವು ಪ್ರತಿ ಯೂನಿಟ್ ಗೆ ₹248 ರಿಂದ ₹109 ಇಳಿಯುತ್ತದೆ (ಉತ್ಪನ್ನದ ತೂಕ 500ಗ್ರಾಂಗಿಂತ ಕಡಿಮೆ)
ಈಸಿ ಶಿಪ್ (ಇ.ಎಸ್.) ಚಾನೆಲ್ ಮೂಲಕ ಟಿ-ಶರ್ಟ್ ₹299ಗೆ ಮಾರಾಟ ಮಾರಾಟಗಾರ ಪ್ರತಿ ಯೂನಿಟ್ ಗೆ ₹15 ಉಳಿತಾಯ ಮಾಡುತ್ತಾರೆ- ಇದರಿಂದ ಒಟ್ಟು ಶುಲ್ಕದಲ್ಲಿ 21%ಕಡಿತ. ಒಟ್ಟು ಶುಲ್ಕವು ಪ್ರತಿ ಯೂನಿಟ್ ಗೆ ₹71ರಿಂದ ₹56 ಇಳಿಕೆಯಾಗುತ್ತದೆ (ಉತ್ಪನ್ನದ ತೂಕ 500ಗ್ರಾಂಗಿಂತ ಕಡಿಮೆ)
ಅಪ್ಡೇಟ್ ಆದ ಶುಲ್ಕದ ಬಗ್ಗೆ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net