ಪದವಿ ಜತೆಗೆ ಕೌಶಲ ಕೂಡ ಅಗತ್ಯ : ಕುಲಸಚಿವ ಪ್ರೊ.ಎನ್. ನಾಗರಾಜ

ಮೈಸೂರು ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ‘ಉದ್ಯೋಗಾರ್ಹತೆ, ಸಂವಹನ ಮತ್ತು ಮೃದು ಕೌಶಲ’ ಕುರಿತ ತರಬೇತಿ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ ಉದ್ಘಾಟಿಸಿದರು. ಪ್ರೊ.ಆರ್. ಮಹೇಶ್, ಪ್ರೊ.ಬಿ. ಸಣ್ಣಪ್ಪ, ಪ್ರೊ.ಟಿ.ಎಸ್. ಜಗದೀಶ್ ಕುಮಾರ್ ಇದ್ದರು.
ಮೈಸೂರು ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ‘ಉದ್ಯೋಗಾರ್ಹತೆ, ಸಂವಹನ ಮತ್ತು ಮೃದು ಕೌಶಲ’ ಕುರಿತ ತರಬೇತಿ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ ಉದ್ಘಾಟಿಸಿದರು. ಪ್ರೊ.ಆರ್. ಮಹೇಶ್, ಪ್ರೊ.ಬಿ. ಸಣ್ಣಪ್ಪ, ಪ್ರೊ.ಟಿ.ಎಸ್. ಜಗದೀಶ್ ಕುಮಾರ್ ಇದ್ದರು.
Published on
ಮೈಸೂರು: ವಿದ್ಯಾರ್ಥಿಗಳಿಗೆ ಪದವಿಯ ಜತೆಗೆ ಕೌಶಲ ಇದ್ದರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗ ಮತ್ತು ವಿಶ್ವವಿದ್ಯಾಲಯ ವೃತ್ತಿ ಕೇಂದ್ರದ ವತಿಯಿಂದ ವಿಭಾಗದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಉದ್ಯೋಗಾರ್ಹತೆ, ಸಂವಹನ ಮತ್ತು ಮೃದು ಕೌಶಲ’ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಪದವಿಯೊಂದರಿಂದಲೇ ನೀವು ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಅಲ್ಲದೆ, ವಿವಿಧ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೇವಲ ಪದವಿ ಮಾತ್ರ ಸಾಕಾಗುವುದಿಲ್ಲ. ಪದವಿಯ ಜತೆಗೆ ಕೌಶಲವನ್ನು ತಮ್ಮದಾಗಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸಬೇಕು. ವಿದ್ಯಾರ್ಥಿಗಳು ಸಂವಹನ ಕೌಶಲ, ವ್ಯಕ್ತಿತ್ವ ವಿಕಸನ ಕೌಶಲಗಳನ್ನು ಕಲಿಯಬೇಕು ಎಂದು ಹೇಳಿದರು.
ಉದ್ಯೋಗ ನೀಡುವವರು ತರಗತಿಯಲ್ಲಿ ಏನೆಲ್ಲ ಕಲಿತೆ, ಪಠ್ಯಕ್ರಮದಲ್ಲಿ ಏನೆಲ್ಲ ವಿಷಯಗಳು ಇತ್ತು ಎಂದು ಪ್ರಶ್ನೆ ಮಾಡಲು ಹೋಗುವುದಿಲ್ಲ. ಇಂತಹ ಪ್ರಶ್ನೆಗಳು ಕೇವಲ ತರಗತಿಯಲ್ಲಿ ಮಾತ್ರ ಕೇಳಲು ಸಾಧ್ಯ. ತರಗತಿಯಿಂದ ಹೊರ ಹೋದ ನಂತರ ಪ್ರಪಂಚ ನಿಮ್ಮಿಂದ ಭಿನ್ನವಾದ ಕೌಶಲವನ್ನು ನಿರೀಕ್ಷಿಸುತ್ತದೆ. ಹಾಗಾಗಿ ಇಂತಹ ತರಬೇತಿ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೊಗಪಡಿ ಸಿಕೊಳ್ಳಬೇಕು ಎಂದರು.
ವಿಶ್ವವಿದ್ಯಾಲಯ ವೃತ್ತಿ ಕೇಂದ್ರದ ಸಂಯೋಜಕ ಪ್ರೊ.ಆರ್. ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಉದ್ಯೋಗದಾತರ ಎದುರು ತೆರೆದಿಡಲು ಸಂವಹನ ಕೌಶಲ ಅಗತ್ಯ. ಉತ್ತಮ ಜ್ಞಾನ ಇದ್ದು, ಸಂವಹನ ಕೌಶಲ ಇಲ್ಲದೆ ಹೋದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಪ್ರಸ್ತುತ ಆಂಗ್ಲಭಾಷೆ ಅತ್ಯಂತ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಆಂಗ್ಲ ಭಾಷೆ ಕಲಿಯುವ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಬಿ. ಸಣ್ಣಪ್ಪ, ಪ್ರಾಧ್ಯಾಪಕ ಪ್ರೊ.ಟಿ.ಎಸ್. ಜಗದೀಶ್ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net