ಅಧ್ಯಕ್ಷತೆ ವಹಿಸಿದ್ದ ಎಂಇಟಿ ಅಧ್ಯಕ್ಷ ಡಾ.ಬಿ.ಜಿ.ನರೇಶ್ ಕುಮಾರ್ ಮಾತನಾಡಿ, ವಿಶ್ವದಾದ್ಯಂತ ಸುಮಾರು 28.7 ಕೋಟಿ ಜನರು ಹೆಪಟೈಟಿಸ್ ಬಿ ಮತ್ತು ಸಿ ಸೋಂಕಿನಿಂದ ಬಳಲುತ್ತಿದ್ದು, ಲಕ್ಷಾಂತರ ಜನರು ಪ್ರತಿವರ್ಷ ಮೃತಪಡುತ್ತಿದ್ದಾರೆ. ಸರಿಯಾದ ಅರಿವು, ಲಸಿಕೆ ಹಾಗೂ ಚಿಕಿತ್ಸೆಯಿಂದ ಮಾತ್ರ ಇದನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ತಿಳಿಸಿದರು.