ಜೆಎನ್‌ಟಿಯುಕೆಯ 80ನೇ ವರ್ಷದ ಸಂಸ್ಥಾಪನಾ ಸಮಾರೋಪ ಸಮಾರಂಭದಲ್ಲಿ ಒಪ್ಪಂದ ವಿನಿಮಯ ನಡೆಯಿತು. ಸದರಿ ಒಪ್ಪಂದ ಅಡಿ ಜೆಎನ್‌ಟಿಯು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಆಹಾರ ಸಂಸ್ಕರಣಾ ತಂತ್ರಜ್ಞಾನ, ಸಂಶೋಧನಾ ವಿಧಾನಗಳು ಹಾಗೂ ಕೈಗಾರಿಕಾ ಅನುಭವಗಳ ಕುರಿತು ತರಬೇತಿ ದೊರೆಯಲಿದ್ದು, ಆಹಾರ ಕ್ಷೇತ್ರದಲ್ಲಿ ಉದ್ಯಮಶೀಲತೆ ಮತ್ತು ನವೋದ್ಯಮಗಳಿಗೆ ಉತ್ತೇಜನ ಸಿಗಲಿದೆ. ಕಾರ್ಯಾಗಾರಗಳು, ತಂತ್ರಜ್ಞಾನ ಪ್ರದರ್ಶನಗಳು ಹಾಗೂ ಆಹಾರ ಭದ್ರತೆಗೆ ಸಂಬಂಧಿಸಿದ ಜಂಟಿ ಸಂಶೋಧನಾ ಯೋಜನೆಗಳನ್ನು ಎರಡೂ ಸಂಸ್ಥೆಗಳು ಕೈಗೊಳ್ಳಲಿವೆ.