ಶ್ರೀ ಶಂಕರ ಭಗವತ್ಪಾದರ ತತ್ವ-ಸಂದೇಶಗಳನ್ನು ಅಳವಡಿಸಿಕೊಳ್ಳಿ

 ಕೆ.ಆರ್.ನಗರ ಪಟ್ಟಣದ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದಲ್ಲಿ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಅವರು ಭಕ್ತರಿಗೆ ಫಲ ಮಂತ್ರಾಕ್ಷತೆ  ನೀಡಿ ಆಶೀರ್ವದಿಸಿದರು.
ಕೆ.ಆರ್.ನಗರ ಪಟ್ಟಣದ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದಲ್ಲಿ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಅವರು ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
Published on

ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಆಶೀರ್ವಚನ

ಕೆ.ಆರ್.ನಗರ: ಪಟ್ಟಣದ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಂಕರ ಭಾರತಿ ಸ್ವಾಮೀಜಿ ಅವರ ದಿವ್ಯಾನುಗ್ರಹದೊಂದಿಗೆ ಅವರ ಕರಕಮಲ ಸಂಜಾತರಾದ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಅವರ ವಧರ್ಂತಿ ಮಹೋತ್ಸವ ಮಂಗಳವಾರ ಶ್ರೀಮಠದಲ್ಲಿ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಶುಕ್ರವಾರ ನೆರವೇರಿತು.
ಬೆಳಗ್ಗೆ 9.30ಕ್ಕೆ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದ-ಘೋಷ, ಮಹಿಳೆಯರಿಂದ ಶ್ಲೋಕ ಸಮರ್ಪಣೆ, ಗ್ರಂಥ ಲೋಕಾರ್ಪಣೆ, ಹೊರ ರಾಜ್ಯಗಳಿಂದ ಆಗಮಿಸಿದ್ದ ವಿದ್ವಾಂಸರಿಗೆ ಸನ್ಮಾನ, ಗುರುವಂದನೆ, ಫಲ ಸಮರ್ಪಣೆ ಹಾಗೂ ಫಲಮಂತ್ರಾಕ್ಷತೆ ವಿತರಣೆ ಮೊದಲಾದ ಕಾರ್ಯಕ್ರಮಗಳು ನೆರವೇರಿದವು. ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಅಭಿನಂದನಾ ಭಾಷಣದ ಮೂಲಕ ಗುರುಗಳಿಗೆ ವಂದನೆ ಸಲ್ಲಿಸಿದರು.
ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ, ಶ್ರೀ ಶಂಕರ ಭಗವತ್ಪಾದರರ ತತ್ವ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲ. ಧೈರ್ಯದಿಂದ ಧರ್ಮ ಪಾಲನೆ ಮಾಡಿದಾಗ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಹಿರಿಯ ಶ್ರೀಗಳಾದ ಶ್ರೀ ಶಂಕರ ಭಾರತಿ ಸ್ವಾಮೀಜಿ ಅವರು ದೇಶ ಸಂಚಾರದ ಮೂಲಕ ಎಲ್ಲೆಡೆ ಶ್ರೀ ಶಂಕರ ಭಗವತ್ಪಾದರ ತತ್ವ ಸಂದೇಶಗಳನ್ನು ಸಾರುವ ಮೂಲಕ ಜನ ಮಾನಸದಲ್ಲಿ ಅನುಷ್ಠಾನಗೊಳಿಸುತ್ತಿರುವ ದಿವ್ಯ ಕಾರ್ಯಕ್ರಮ ಶ್ಲಾಘನೀಯ. ಇಂದು ಲೋಕಾರ್ಪಣೆಗೊಂಡ ವಿವೇಕ್ ದೀಪ್ತಿ ಇಂಗ್ಲಿಷ್ ಅವತರಿಣಿಕೆ ಮುಂದಿನ ಪೀಳಿಗೆಗೆ ಜ್ಞಾನದೀವಿಗೆ ಆಗಲಿದೆ ಎಂದರು ತಿಳಿಸಿದರು.
ವಿವಿಧ ಊರುಗಳಿಂದ ಆಗಮಿಸಿರುವ ಭಕ್ತರು ಮತ್ತು ಕಾರ್ಯಕರ್ತರ ನಿಸ್ವಾರ್ಥ ಸೇವೆ ಶ್ರೀಮಠ ಹಾಗೂ ಕಾರ್ಯಕ್ರಮಗಳ ಯಶಸ್ವಿಗೆ ಕಾರಣವಾಗಿದೆ ಎಂದ ಶ್ರೀಗಳು ಎಲ್ಲರಿಗೂ ಶುಭವಾಗಲಿ ಎಂದು ಹರಸಿದರು. ಮಧ್ಯಾಹ್ನ 12 ಗಂಟೆಗೆ ಶತಚಂಡಿ ಮಹಾ ಯಾಗದ ಪೂರ್ಣಾಹುತಿ ನೆರವೇರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮಠದ ಭಕ್ತರಾದ ವಿ.ರಾಮಕೃಷ್ಣ ಸೋಮಯಾಜಿ, ವಿ.ಪರಮೇಶ್ವರ್ ಭಟ್, ವಿ.ಹೇರಂಭ ರಾವ್, ಕೆ.ಪಿ.ಪ್ರಭುಶಂಕರ್, ನರಸಿಂಹ ಸೋಮಯಾಜಿ, ಹೃಷಿಕೇಶ್ ಸೇರಿದಂತೆ ಅನೇಕ ಕಾರ್ಯಕರ್ತರು, ನೂರಾರು ಭಕ್ತರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಪ್ರಸಾದ ಭೋಜನ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net