ಕಾರ್ಯಕರ್ತರು ಜನರಿಗೆ ಎಸ್‌ಐಆರ್ ಮಾರ್ಗದರ್ಶನ ನೀಡಿ:ಸಂಸದ ಯದುವೀರ್ ಸಲಹೆ

ಚಾಮರಾಜ ಕ್ಷೇತ್ರದ ಬಿಜೆಪಿಯಿಂದ ಎಸ್‌ಐಆರ್ ಮಹಾಸಂಪರ್ಕ ಅಭಿಯಾನಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಎಲ್.ನಾಗೇಂದ್ರ, ರುದ್ರಮೂರ್ತಿ, ಸೋಮಸುಂದರ್, ಎಂ.ಎಸ್. ಪುನೀತ್, ಭದ್ರೀಶ್, ರಮೇಶ್‌ಗೌಡ, ಹೇಮಾ ನಂದೀಶ್, ದಿನೇಶ್‌ಗೌಡ, ರಾಮುಗೌಡ ಇತರರು ಇದ್ದರು.
ಚಾಮರಾಜ ಕ್ಷೇತ್ರದ ಬಿಜೆಪಿಯಿಂದ ಎಸ್‌ಐಆರ್ ಮಹಾಸಂಪರ್ಕ ಅಭಿಯಾನಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಎಲ್.ನಾಗೇಂದ್ರ, ರುದ್ರಮೂರ್ತಿ, ಸೋಮಸುಂದರ್, ಎಂ.ಎಸ್. ಪುನೀತ್, ಭದ್ರೀಶ್, ರಮೇಶ್‌ಗೌಡ, ಹೇಮಾ ನಂದೀಶ್, ದಿನೇಶ್‌ಗೌಡ, ರಾಮುಗೌಡ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮತದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಭರ್ತಿ ಮಾಡಿದ ನಮೂನೆಗಳನ್ನು ಸಂಬಂಧಿಸಿದವರಿಗೆ ತಲುಪಿಸಿ
  • ತಮ್ಮ ಮತವನ್ನು ಉಳಿಸಿಕೊಂಡು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೈಜೋಡಿಸಲು ಸಹಕರಿಸಬೇಕು
ಮೈಸೂರು:ಚಾಮರಾಜ ಕ್ಷೇತ್ರದ ಬಿಜೆಪಿಯಿಂದ ಎಸ್‌ಐಆರ್ ಮಹಾ ಸಂಪರ್ಕ ಅಭಿಯಾನಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಾರ್ಡ್ ಸಂಖ್ಯೆ 23ರ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸಾಂಕೇತಿಕವಾಗಿ ಮೊಹಲ್ಲಾದ ಐದು ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ವಿಶೇಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಅಂಗವಾಗಿ ಮನೆ-ಮನೆ ಸಂಪರ್ಕ ಮಹಾಭಿಯಾನದಲ್ಲಿ ಭಾಗವಹಿಸಿದ ಯದುವೀರ್ ಅವರು, ಗಣತಿ ಸಮೂನೆ ಸಲ್ಲಿಸದಿರುವ ಮನೆಗಳಿಗೆ ಭೇಟಿ ನೀಡಿ, ಮತದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಭರ್ತಿ ಮಾಡಿದ ನಮೂನೆಗಳನ್ನು ಸಂಬಂಧಿಸಿದವರಿಗೆ ಸಲ್ಲಿಸುವಂತೆ ತಿಳಿಸಿದರು.
ತಮ್ಮ ಮನೆಗೆ ಬರುವ ಬಿಎಲ್ಒ ಗಳಿಗೆ ಚುನಾವಣಾ ಆಯೋಗದ ನಿಗದಿತ ನಮೂನೆಗಳನ್ನು ಭರ್ತಿಮಾಡಿ ಹಿಂತಿರುಗಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಕಾಪಾಡುವ ಮಹತ್ಕಾರದಲ್ಲಿ ಪಾಲ್ಗೊಂಡು ತಮ್ಮ ಮತವನ್ನು ಉಳಿಸಿಕೊಂಡು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೈಜೋಡಿಸಲು ಮನವಿ ಮಾಡಿದರು
ಬಿಜೆಪಿ ನಗರಾಧ್ಯಕ್ಷ ಮಾಜಿ ಶಾಸಕ ಎಲ್. ನಾಗೇಂದ್ರ, ನಗರ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ಸೋಮಸುಂದರ್, ಕಾರ್ಯದರ್ಶಿ ಎಂ.ಎಸ್. ಪುನೀತ್, ಭದ್ರೀಶ್, ರಮೇಶ್‌ಗೌಡ, ಹೇಮಾ ನಂದೀಶ್, ಕ್ಷೇತ್ರದ ಅಧ್ಯ್ಯಕ್ಷ ದಿನೇಶ್‌ಗೌಡ, ಪ್ರಧಾನ ಕಾರ್ಯದರ್ಶಿ ರಾಮುಗೌಡ, ದಾಸಪ್ರಕಾಶ್, ಮಾಜಿ ಪಾಲಿಕೆ ಸದಸ್ಯರಾದ ಪ್ರಮಿಳಾ ಭರತ್, ಆರ್.ರಂಗಸ್ವಾಮಿ, ರವೀಂದ್ರ, ಎಸ್‌ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಯುವ ಮೋರ್ಚಾ ಅದ್ಯಕ್ಷ ಅರ್ಜುಬನ್, ಮುಖಂಡರಾದ ಸತೀಶ್ ಕುಮಾರ್, ಸಚಿನ್, ಕೇಬಲ್ ವಿಜಿ, ಮೈ.ಕಾ.ಪ್ರೇಮ್ ಕುಮಾರ್, ಕುಂಬಾರಕೊಪ್ಪಲಿನ ವೆಂಕಟೇಶ ಎಸ್.ಪ್ರವೀಣ್, ಶಾಂತಿ, ಗಣೇಶ್, ಪರಮೇಶ್, ಮುರುಗೇಶ್, ಮಹೇಶ್, ಜಯಣ್ಣ, ನಿಖಿಲ್ ಕಿರಣ್, ಲೋಕೇಶ್, ಸುಧಾ ರಾಮಚಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net