ಬಿಡಾಡಿ ಹಂದಿ, ದನ-ಕರುಗಳನ್ನು ಸಾಕುತ್ತಿರುವವರು ಮೈಸೂರು ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇವುಗಳನ್ನು ಬಿಡುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಆಡಚಣೆ
ಹಲವು ಬಾರಿ ವಾಹನ ಸವಾರರು ಅಪಘಾತಕ್ಕೆಕಾರಣ
ಮೈಸೂರು: ನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನ, ಕರು, ಹಂದಿ ಅಡ್ಡಾಡುವುದು ಕಂಡುಬಂದಲ್ಲಿ ಯಾವುದೇ ಸೂಚನೆ ನೀಡದೆ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಎಚ್ಚರಿಸಿದೆ.
ಬಿಡಾಡಿ ಹಂದಿ, ದನ-ಕರುಗಳನ್ನು ಸಾಕುತ್ತಿರುವವರು ಮೈಸೂರು ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇವುಗಳನ್ನು ಬಿಡುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಆಡಚಣೆ ಆಗುತ್ತಿದ್ದು, ಹಲವು ಬಾರಿ ವಾಹನ ಸವಾರರು ಅಪಘಾತಕ್ಕೆ ಈಡಾಗಿವುರುದು ಕಂಡುಬಂದಿದೆ.
ಇಲ್ಲದೆ ಇವುಗಳು ಕಸ ಸಂಗ್ರಹ ತೊಟ್ಟಿಯಲ್ಲಿರುವ ಕಸವನ್ನೆಲ್ಲ ಚೆಲ್ಲಾಡುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೌಖಿಕವಾಗಿ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ದನ, ಕರುಗಳನ್ನು ಬಿಡುತ್ತಿರುವುದು ಕಂಡು ಬಂದಿದೆ.
ಈ ಸಂಬಂಧ ಸಾರ್ವಜನಿಕರಿಂದ ಅನೇಕ ದೂರು ಬರುತ್ತಿದ್ದು, ನಗರದ ಜನತೆಯ ಆರೋಗ್ಯ ಹಿತದೃಷ್ಟಿಯಿಂದ ಹಾಗೂ ಸ್ವಚ್ಛತೆ ನಿರ್ವಹಣೆಗಾಗಿ ಇನ್ನು ಮುಂದೆ ಇವುಗಳನ್ನು ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದೆಂದು ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.