ದೇವಲಾಪುರಹುಂಡಿ ಕಂದಾಯ ಗ್ರಾಮವಾಗಿಸಲು ಕ್ರಮ

ಶ್ರೀ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಲಾಪುರ ಹುಂಡಿ ಗ್ರಾಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ, ದೇವರ ದರ್ಶನ ಪಡೆದರು.
ಶ್ರೀ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಲಾಪುರ ಹುಂಡಿ ಗ್ರಾಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ, ದೇವರ ದರ್ಶನ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅನಿಲ್ ಚಿಕ್ಕಮಾದು ಮಾಹಿತಿ
  • ಶ್ರೀ ಮಹಾಲಿಂಗೇಶ್ವರ ಜಾತ್ರೆಯಲ್ಲಿ ಭಾಗಿ
ಸರಗೂರು: ದೇವಲಾಪುರ ಹುಂಡಿಯವನ್ನು ಉಪ ಗ್ರಾಮ ಹಾಗೂ ಕಂದಾಯ ಗ್ರಾಮವಾಗಿಸಲು ಅಧಿಕಾರಿಗಳಿಗೆ ಪರೀಶೀಲನೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಮಾಹಿತಿ ನೀಡಿದರು.
ತಾಲೂಕಿನ ದೇವಲಾಪುರಹುಂಡಿ ಗುರುವಾರ ಶ್ರೀ ಮಹಾಲಿಂಗೇಶ್ವರ ಜಾತ್ರೆ ಮತ್ತು ಕೊಂಡೋತ್ಸವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಈ ವೇಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ಸರ್ಕಾರದ ಅನುದಾನ ದೊರಕಿಲ್ಲ. ಇದರಿಂದ ಈ ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ನಮ್ಮ ಗ್ರಾಮಕ್ಕೆ ಸಾರಿಗೆ ಬಸ್ ಇಲ್ಲ. ಕಾಡು ಪ್ರಾಣಿಗಳ ಹಾವಳಿ ನಮ್ಮ ಮಕ್ಕಳು ಶಾಲೆ ಮತ್ತು ಕಾಲೇಜುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಇದೇ ವೇಳೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ಜನರ ಅಹವಾಲು ಆಲಿಸಿದ ಶಾಸಕ ಅನಿಲ್ ಚಿಕ್ಕಮಾದು, ದೇವಲಾಪುರ ಹುಂಡಿ ಗ್ರಾಮ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ ನೀಡಲಾಗಿದೆ. ಗ್ರಾಮಸ್ಥರ ಬಹುಮುಖ್ಯ ಬೇಡಿಕೆ ದೇವಸ್ಥಾನದ ದೇಗುಲ ಗೋಪುರ ಇತರ ಕಾಮಗಾರಿಯನ್ನು ಇಂಜಿನಿಯರ್‌ಗಳಿಂದ ಪರೀಶೀಲಿಸಿ ನನ್ನ ಶಾಸಕರ ನಿಧಿಯಿಂದ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಅಲ್ಲದೆ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮ್ಯಾನೇಜರ್ ಕರೆ ಮಾಡಿ ದೇವಲಾಪುರ ಗ್ರಾಮಕ್ಕೆ ಸಮರ್ಪಕ ಬಸ್ ಸೇವೆ ಒದಗಿಸಲು ಸೂಚನೆ ನೀಡಿದರು.
ಎಪಿಎಂಸಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಜಿಪಂ ಸದಸ್ಯರಾದ ಪಿ.ರವಿ, ಭಾಗ್ಯಲಕ್ಷ್ಮೀ, ಪಪಂ ಸದಸ್ಯ ಶ್ರೀನಿವಾಸ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ಮಂಜುನಾಥ , ಬಸವ ಬಳಗ ಅಧ್ಯಕ್ಷ ಪಿ.ನಂದೀಶ, ಗ್ರಾಮ ಗಡಿ ಯಜಮಾನ ಶೇಖರ್, ಯಾಜಮಾನ ಶಿವಣ್ಣ, ಶಾಸಕರ ಆಪ್ತ ಸಹಾಯಕ ಸುದರ್ಶನ್, ಶಿವಣ್ಣ, ವೆಂಕಟರಾಮಣ್ಣಶಟ್ಟಿ, ಗುರುಸ್ವಾಮಿ, ರವೀಶ್, ಪುರದಕಟ್ಟೆ ಬಸವರಾಜು, ಮನುಗನಹಳ್ಳಿ, ಗುರುಸ್ವಾಮಿ, ಗಿರೀಶ್, ಪ್ರಕಾಶ್ ಶೆಟ್ಟಿ, ಬಂಗಾರಶಟ್ಟಿ, ಬಸವರಾಜು, ಮಂಜುನಾಥ, ಅನುಷಾ, ಶಶಿ ಪಾಟೀಲ್, ವನಸಿರಿ ಉಮೇಶ್, ರಾಜು ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net