ಪ್ರತಿಭೆಗೆ ಪ್ರೋತ್ಸಾಹ ಸಿಕ್ಕರೆ ಸಾಧನೆ ಸುಲಭ

ಬೆಟ್ಟದಪುರ ಸಮೀಪದ ಸಾಲಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ದೇಪುರ ಗ್ರಾಮದ ದಾನಿ ಡಿ.ಎಸ್.ಸ್ವಾಮಿ ಅವರು ಉಚಿತವಾಗಿ ಟ್ರ್ಯಾಕ್‌ಸೂಟ್ ವಿತರಿಸಿದರು.
ಬೆಟ್ಟದಪುರ ಸಮೀಪದ ಸಾಲಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ದೇಪುರ ಗ್ರಾಮದ ದಾನಿ ಡಿ.ಎಸ್.ಸ್ವಾಮಿ ಅವರು ಉಚಿತವಾಗಿ ಟ್ರ್ಯಾಕ್‌ಸೂಟ್ ವಿತರಿಸಿದರು.
Published on

ಬೆಟ್ಟದಪುರ:

ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ನಾಯಕತ್ವದ ಗುಣ ಬೆಳೆಯುತ್ತವೆ ಎಂದು ಸಾಲಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಜು ಹೇಳಿದರು.


ಪಿರಿಯಾಪಟ್ಟಣ ತಾಲೂಕಿನ ಸಾಲಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ದೇಪುರ ಗ್ರಾಮದ ದಾನಿ ಡಿ.ಎಸ್.ಸ್ವಾಮಿ ಉಚಿತವಾಗಿ ನೀಡಿದ ಟ್ರ್ಯಾಕ್ ಸೂಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿಯೂ ಉತ್ತಮ ಕ್ರೀಡಾ ಪ್ರತಿಭೆ ಇದ್ದು, ಅವರಿಗೆ ಅಗತ್ಯ ಸೌಲಭ್ಯ ಹಾಗೂ ಪ್ರೋತ್ಸಾಹ ದೊರೆತರೆ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.


ದಾನಿಗಳಾದ ದೇಪುರ ಗ್ರಾಮದ ಡಿ.ಎಸ್.ಸ್ವಾಮಿ, ಮುಖ್ಯಶಿಕ್ಷಕ ಕೆ.ಸಿ ಸತೀಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್, ವಾಸು, ಸ್ವಾಮಿಗೌಡ, ಶಿಕ್ಷಕರಾದ ರಘು, ಧರ್ಮ, ಮೋಹನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net