36 ಕಾಮಗಾರಿಗಳ ಲೆಕ್ಕ ಅನುಷ್ಠಾನ

ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶುಕ್ರವಾರ ಗ್ರಾ.ಪಂ ಆಯೋಜಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ನರೇಗಾ ಯೋಜನೆ ಲೆಕ್ಕಪರಿಶೋಧಕ ರಂಗರಾಜು ಮಾತನಾಡಿದರು. ಗೋವಿಂದರಾಜ್, ರೇವಣ್ಣ, ರೇಖಾ, ಸ್ವಾಮಿರಾವ್ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶುಕ್ರವಾರ ಗ್ರಾ.ಪಂ ಆಯೋಜಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ನರೇಗಾ ಯೋಜನೆ ಲೆಕ್ಕಪರಿಶೋಧಕ ರಂಗರಾಜು ಮಾತನಾಡಿದರು. ಗೋವಿಂದರಾಜ್, ರೇವಣ್ಣ, ರೇಖಾ, ಸ್ವಾಮಿರಾವ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆ
ತಿ.ನರಸೀಪುರ: ತಾಲೂಕಿನ ಮಾದಾಪುರ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಶುಕ್ರವಾರ 2024-25ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಣ್ಣ ಅವರ ಅಧ್ಯಕ್ಷತೆ ಯಲ್ಲಿ ನಡೆದ ಲೆಕ್ಕ ಪರಿಶೋಧನೆಯಲ್ಲಿ ನರೇಗಾ ಯೋಜನೆಯ
ಲೆಕ್ಕ ಪರಿಶೋಧಕ ರಂಗರಾಜು ಅವರು ನರೇಗಾ ಯೋಜನೆಯಡಿ 1,51,99,327 ರೂ.ಗಳ ವೆಚ್ಚದಲ್ಲಿ ಕೈಗೊಂಡ
144 ಕಾಮಗಾರಿಗಳು ಮತ್ತು 15ನೇ ಹಣಕಾಸು ಯೋಜನೆಯಡಿ 41,44,667 ರೂ.ಗಳ ವೆಚ್ಚದಲ್ಲಿ ನಡೆದ 36 ಕಾಮಗಾರಿಗಳ ಲೆಕ್ಕವನ್ನು ಅನುಷ್ಠಾನಗೊಳಿಸಿರುವ ಮಾಹಿತಿಯೊಂದಿಗೆ ಮಂಡಿಸಿದರು.
ಸಭೆಯ ನೋಡಲ್ ಅಧಿಕಾರಿಯಾದ ಸಿಡಿಪಿಒ ಗೋವಿಂದರಾಜು ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರು ನರೇಗಾ, ಹಣಕಾಸು ಯೋಜನೆ ಮತ್ತು ಸ್ವಂತ ಸಂಪನ್ಮೂಲಗಳ ವತಿಯಿಂದ ಸಿಗುಬಹುದಾದ ಅನುದಾನಗಳನ್ನು ಬಳಸಿಕೊಂಡು ಆರ್ಥಿಕ ಸಬಲೀಕರಣ ಹೊಂದಬೇಕು ಎಂದರು.
ಸದಸ್ಯರಾದ ರೇವಣ್ಣ, ರೇಖಾ, ಪಿಡಿಒ ಸ್ವಾಮಿರಾವ್, ನರೇಗಾ ಅಭಿಯಂತರ ಲೋಕೇಶ್, ಕೃಷಿ ಸಹಾಯಕಿ ವಿಶಾಲು , ಕಾರ್ಯದರ್ಶಿ ಭಾನು ಪ್ರಕಾಶ್, ಮುಖಂಡರಾದ ಬಸವರಾಜು ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net