ಘಟನೆಯ ವಿವರ: ನಾಗೇಂದ್ರ ಅದೇ ಗ್ರಾಮದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆ ಹುಡುಗಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಈ ಕುರಿತು ಹುಡುಗಿ ಮನೆಯವರು ಬನ್ನೂರು ಪೋಲಿಸ್ ಠಾಣೆಗೆ ಡಿ.26 ರಂದು ದೂರನ್ನು ದಾಖಲಿಸಿದ್ದಾರೆ. ನಂತರ ಈ ಬಗ್ಗೆ ನಾಗೇಂದ್ರನ ಮೇಲೆ ಅನುಮಾನ ವ್ಯಕ್ತಪಡಿಸಿ, ಡಿ. 27 ರಂದು ಮಧ್ಯಾಹ್ನ ಅಕ್ರಮವಾಗಿ ಮನೆಗೆ ನುಗ್ಗಿ ನಾಗೇಂದ್ರನನ್ನು ಅಪಹರಣ ಮಾಡಿ, ಬೈಕ್‌ನಲ್ಲಿ ಕೂರಿಸಿಕೊಂಡು ತಮ್ಮ ತೋಟದ ಮನೆಗೆ ಕರೆದೊಯ್ದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಲ್ಲದೇ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.