ಹೊಸತನ: ಕಸ ಬಿದ್ದಿರುವ ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಅಲ್ಲಿ ಜಾಗದ ಲಭ್ಯತೆಯ ಅನುಸಾರವಾಗಿ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇವುಗಳನ್ನು ಸೃಷ್ಟಿ ಮಾಡಲು ಹೊಸದಾಗಿ ಪದಾರ್ಥವನ್ನು ತಾರದೆ, ಅಲ್ಲೇ ಸಿಗುವ ತ್ಯಾಜ್ಯ ವಸ್ತುಗಳನ್ನು ಅಂದರೆ ಹಳೇ ಟೈರ್, ಪ್ಲಾಸ್ಟಿಕ್ ಬಾಟಲ್, ಬಿದಿರಿನ ಕಟ್ಟಿಗೆಗಳು, ಬಿದಿರ ಬುಟ್ಟಿಗಳು, ಮರದ ತುಂಡುಗಳು, ರಿಪೀಸ್ ಪಟ್ಟಿಗಳು ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಮರುಬಳಕೆ ಮಾಡಿ, ಅವುಗಳಿಗೆ ತರಹೇವಾರಿ ಬಣ್ಣ ಬಳಿದು ಡ್ರಾಮಾ ಸ್ಟೇಜ್‌ನಂತೆ ಮಾಡಲಾಗುತ್ತಿದೆ. ಇನ್ನೂ ಸ್ವಲ್ಪ ಜಾಗವಿದ್ದರೆ ಕಾಂಕ್ರೀಟ್ ಇಟ್ಟಿಗೆಗಳನ್ನು ಬಳಸಿಕೊಂಡು ಜನರು ಕೂರಲು ಆಸನ ಸಿದ್ಧಗೊಳಿಸಲಾಗುತ್ತಿದೆ. ಕೆಲವು ಕಡೆ ಮರದ ಬೆಂಚುಗಳನ್ನು ಹಾಕಲಾಗಿದೆ. ಇದರೊಂದಿಗೆ ಸ್ವಚ್ಛತಾ ಅರಿವಿನ ಸಂದೇಶವುಳ್ಳ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುತ್ತದೆ.