ಹುಣಸೂರು ನಗರದಲ್ಲಿ ಮಾದಿಗ ಹೋರಾಟ ಸಮಿತಿ ವತಿಯಿಂದ ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಡಾ.ಮಾದುಪ್ರಸಾದ್, ಜೆ.ಮಹದೇವ, ಬೆಳ್ತೂರು ವೆಂಕಟೇಶ್, ಪರಶುರಾಮ್ ಇತರರಿದ್ದರು.
ಹುಣಸೂರು : ಅಪ್ಪಟ ದೇಶಾಭಿಮಾನಿ ಹಾಗೂ ಗಾಂಧಿವಾದಿಯಾಗಿದ್ದ ಬಾಬು ಜಗಜೀವನ ರಾಮ್ ನವಭಾರತದ ಉದಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಾಹಿತಿ ಡಾ.ಮಾದುಪ್ರಸಾದ್ ಅಭಿಪ್ರಾಯಪಟ್ಟರು.
ತಾಲೂಕು ಮಾದಿಗ ಹೋರಾಟ ಸಮಿತಿಯಿಂದ ನಗರದ ಕಲಾಧರೆ ತರಬೇತಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಭಾರತ ದೇಶದ ಸ್ವಾತಂತ್ರ್ಯ ಬಂದ ನಂತರ ಎದುರಾದ ಜಟಿಲ ಸಮಸ್ಯೆಗಳಾದ ಆಹಾರ, ಉದ್ಯೋಗ, ರಕ್ಷಣೆಯ ಕ್ಷೇತ್ರಗಳನ್ನು ಸದೃಢ ಗೊಳಿಸುವ ಮೂಲಕ ನವ ಭಾರತದ ಉದಯದಲ್ಲಿ ಕೈಜೋಡಿಸಿದ ನಾಯಕರಲ್ಲಿ ಬಾಬೂಜಿ ಮೊದಲಿಗರು. ಬಾಬೂಜಿ ಅವರ ದೂರದೃಷ್ಟಿ ರಾಜಕಾಣವೇ ಇಂದಿನ ನೆಮ್ಮದಿ ಜೀವನಕ್ಕೆ ಬುನಾದಿಯಾಗಿದೆ ಎಂದರು.
ಅವರು ರಕ್ಷಣಾ ಸಚಿವರಾಗಿದ್ದಾಗ ಯುದ್ಧ ಭೂಮಿಯಲ್ಲಿ ಸೈನಿಕರನ್ನು ಆತ್ಮಸ್ಥೈರ್ಯದಿಂದ ಹೋರಾಡಲು ಚೈತನ್ಯ ತುಂಬಿ ಯುದ್ಧ ಜಯಿಸುವಂತೆ ಮಾಡಿದರು. ನಂತರ ಯುದ್ಧಕ್ಕಿಂತ ಶಾಂತಿಯೇ ಒಂದು ದೇಶದ ಅಸ್ತ್ರವಾಗಬೇಕು, ಅದರ ಪರಿಣಾಮ ಘೋರವಾಗಿರುತ್ತದೆ. ದೇಶದ ಎಲ ್ಲ ಸಮಸ್ಯೆಗಳನ್ನು ಯುದ್ಧ ತಂದುಬಿಡುವ ಅಪಾಯವಿದೆ ಎಂದು ಎಚ್ಚರಿಕೆ ನೀಡುತ್ತಿದ್ದರು. ಯುದ್ಧ ಕಾಲದ ಈ ಸ್ಥಿತಿಯಲ್ಲಿ ಅವರ ಮಾತುಗಳು ಆದರ್ಶವಾಗುತ್ತವೆ ಎಂದರು.
ಹಿರಿಯ ಮುಖಂಡ ಜೆ.ಮಹದೇವ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖಂಡರಾದ ಎಸ್.ಕಿಟ್ಟಿ, ಪೋಸ್ಟ್ ಮಹಾದೇವ, ಸಮಿತಿಯ ತಾಲೂಕು ಅಧ್ಯಕ್ಷ ಪರಶುರಾಮ್, ಕಾರ್ಯದರ್ಶಿ ಬೆಳತೂರು ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಶಿವರಾಮ್, ರಾಯನಹಳ್ಳಿ ಸ್ವಾಮಿ, ಶಂಕರ್, ಬೆಳ್ತೂರು ರಾಜು ಇದ್ದರು.